Kodi Mutt Swamiji: ಸಿದ್ದರಾಮಯ್ಯ ಸರ್ಕಾರ ಈ ಹಬ್ಬದವರೆಗೂ 'ಭದ್ರ': ಕೋಡಿಮಠ ಶ್ರೀ ಭವಿಷ್ಯ
ಧಾರವಾಡ, ಅಕ್ಟೋಬರ್ 02: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಎರಡೂವರೆ ವರ್ಷಕ್ಕೆ ಮುಖ್ಯಮಂತ್ರಿ ರಾಜ್ಯದಲ್ಲಿ ಬದಲಾವಣೆ ಆಗಲಿದ್ದಾರೆ ಎನ್ನಲಾಗುತ್ತಿತ್ತು. ಇದರ ನಡುವೆ ಕೋಡಿಮಠ ಶ್ರೀಗಳು ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ್ದಾರೆ.
ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಂಕ್ರಾಂತಿಯವರೆಗೆ ಯಾವುದೇ ತೊಂದರೆ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಸದ್ಯಕ್ಕೆ ರಾಜಕೀಯ ಬದಲಾವಣೆಗಳಿಲ್ಲ, ಸಂಕ್ರಾಂತಿ ಬಳಿಕ ಮುಂದಿನ ಬೆಳವಣಿಗೆಗಳ ಬಗ್ಗೆ ಹೇಳುವುದಾಗಿ ತಿಳಿಸಿದರು. ಬಯಲುಸೀಮೆ ಮಲೆನಾಡಾಗುವ ತಮ್ಮ ಹಿಂದಿನ ಭವಿಷ್ಯ ನಿಜವಾಗಿದೆ ಎಂದೂ ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಇನ್ನೂ ನಾನು ಈ ಹಿಂದೆಯೇ ಹೇಳಿದ್ದೇನೆ. ಅದೇನೆಂದರೇ ಬಯಲು ಸೀಮೆ ಮಲೆನಾಡು ಆಗಲಿದೆ. ಮಲೆನಾಡು ಬಯಲು ಸೀಮೆ ಆಗುತ್ತದೆ ಎಂಬುದಾಗಿ. ಅದರಂತೆ ನಮ್ಮಲ್ಲೀಗ ಬಯಲು ಸೀಮೆ ಮಲೆನಾಡು ಆಗಿದೆ ಎಂಬುದಾಗಿ ಶಾಂಕಿಂಗ್ ಭವಿಷ್ಯ ನುಡಿದರು.

ದೇಶದಾದ್ಯಂತ ಹಬ್ಬಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಹಿತಕ್ಕಾಗಿ ನಡೆಯುತ್ತಿವೆ. ದಸರಾದ ನಿಜವಾದಂತ ಅರ್ಥವೆಂದರೇ ದುಷ್ಟ ಶಕ್ತಿಗಳನ್ನು ದೂರ ಮಾಡುವುದು. ಮನುಷ್ಯನ ಕೋಪ, ತಾಪ, ಆಸೆಗಳನ್ನು ಗೆಲ್ಲುವಂತೆ ಮಾಡುವುದಾಗಿದೆ. ಅಲ್ಲದೇ ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿಗಾಗಿ ದಸರಾವನ್ನು ಆಚರಿಸಲಾಗುತ್ತದೆ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ. ದಸರಾದ ನಿಜವಾದ ಅರ್ಥವೆಂದರೆ ದುಷ್ಟ ಶಕ್ತಿಗಳನ್ನು ದೂರವಿಡುವುದಾಗಿದೆ. ಮನುಷ್ಯ ತನ್ನಲ್ಲಿನ ಕೋಪ, ತಾಪ, ಆಸೆಗಳನ್ನು ಗೆಲ್ಲಬೇಕು. ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿ ಬೇಕು. ಈ ದೃಷ್ಟಿಯಿಂದ ದಸರಾವನ್ನು ಆಚರಿಸಲಾಗುತ್ತದೆ. ಇದು ನಮ್ಮ ಪರಂಪರೆಯ ದೊಡ್ಡ ಸಂಕೇತವಾಗಿ ಎಂದು ತಿಳಿಸಿದರು.
ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಮಾತನಾಡಿದ ಸ್ವಾಮೀಜಿ, ಮಲೆನಾಡು ಬಯಲು ಸೀಮೆಯಾಗುತ್ತೆ, ಬಯಲು ಸೀಮೆ ಮಲೆನಾಡಾಗುತ್ತದೆ ಎಂದು ಈ ಹಿಂದೆ ಹೇಳಿದ್ದೆ. ಈಗ ನೋಡಿ ಬಯಲುಸೀಮೆಯಲ್ಲಿ ಭಾರೀ ಮಳೆಯಾಗಿ ಮಲೆನಾಡಂತಾಗಿದೆ ಎಂದು ತಮ್ಮ ಮಾತು ನಿಜವಾದ ಬಗ್ಗೆ ಉಲ್ಲೇಖಿಸಿದರು. ಇನ್ನೂ ಜಾತಿ ಗಣತಿ ಬಗ್ಗೆ ಮಾತನಾಡಿ, ರಾಜ್ಯದ ಜನರು ದಡ್ಡರಲ್ಲ, ಬುದ್ಧಿವಂತರಿದ್ದಾರೆ, ಜ್ಞಾನಿಗಳಿದ್ದಾರೆ, ತಿಳುವಳಿಕೆ ಇದೆ. ಅವರಿಗೆ ಯಾವುದು ಬೇಕೋ ಅದನ್ನು ಅವರೇ ಮಾಡುತ್ತಾರೆ ಎಂದು ಕೋಡಿಶ್ರೀ ಉತ್ತರಿಸಿದರು.
ಸಿದ್ದರಾಮಯ್ಯರನ್ನ ಕುರ್ಚಿಯಿಂದ ಬಿಡಿಸುವುದು ಸುಲಭವಲ್ಲ ಎಂದು ಈ ಹಿಂದೆಯೂ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಹೇಳಿದರು. ಕೋಡಿಶ್ರೀ ಅವರು ಕೆಲ ತಿಂಗಳ ಹಿಂದೆ ಸರ್ಕಾರ, ರಾಜಕೀಯ ವಿಚಾರದಲ್ಲಿ ಹಲವು ಭವಿಷ್ಯಗಳನ್ನು ನುಡಿದಿದ್ದಾರೆ. 2025ರ ಮಾರ್ಚ್ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಡುವುದು ಸುಲಭವಲ್ಲ ಎಂದಿದ್ದರು. ಹಾಲುಮತ ಸಮಾಜದವರಿಂದ ಅಧಿಕಾರ ಬಿಡಿಸುವುದು ಅಷ್ಟು ಸುಲಭವಲ್ಲ. ಕುರ್ಚಿಯಿಂದ ಸಿದ್ದರಾಮಯ್ಯ ಅವರನ್ನು ಬಿಡಿಸುವುದು ಸುಲಭವಿಲ್ಲ ಸಿದ್ದರಾಮಯ್ಯ ಅವರಾಗಿಯೇ ಅಧಿಕಾರ ಬಿಡಬೇಕು ಹೊರತು, ಬೇರೆಯವರು ಅವರನ್ನು ಬಿಡಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಿದ್ದರು.












Click it and Unblock the Notifications