Basavaraj Bommai: ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ನಂಬರ್ ಒನ್: ಬಸವರಾಜ ಬೊಮ್ಮಾಯಿ ವಾಗ್ದಾಳಿ
ಬೆಂಗಳೂರು, ಜುಲೈ 21: ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ನಂಬರ್ ಒನ್ ಅಂತ ವರದಿ ಬಂದಿದೆ. ಗುಮಾಸ್ತನಿಂದ ಹಿಡಿದು ಸೆಕ್ರೆಟರಿವರೆಗೂ ವರ್ಗಾಚಣೆಗೆ ರೇಟ್ ಫಿಕ್ಸ್ ಮಾಡಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಾಲಿನ್ಯ ನಿಯಂತ್ರಣ ಮಂಡಳಿಗೆ ಐಎಫ್ ಎಸ್ ಅಧಿಕಾರಿ ನೇಮಕ ಮಾಡಬೇಕು. ಅದರ ಬದಲು ಸಂಬಂಧಿಕ ಅಂತ ಗುತ್ತಿಗೆ ನೌಕರರನ್ನು ಸೆಕ್ರೆಟರಿಯಾಗಿ ನೇಮಕ ಮಾಡಿದ್ದಾರೆ.

ಗ್ಯಾರೆಂಟಿ ಗಳಲ್ಲಿ ಜನರಿಗೆ ಮೋಸ ಮಾಡಿದ್ದೀರಿ, ಕರೆಂಟ್ ದರ ಹೆಚ್ಚಳ ಮಾಡಿದ್ದೀರಿ, ಗೃಹಲಕ್ಷ್ಮೀಗೆ ಇನ್ನೂ ಯಜಮಾನಿಯನ್ನು ಹುಡುಕಾಟ ನಡೆಸಿದ್ದಾರೆ. ಯುವ ನಿಧಿ ಅಯೋಮಯವಾಗಿದೆ. ನಾವು ಕೊವಿಡ್ ಸಂದರ್ಭದಲ್ಲಿ ನಾವು ಉತ್ತಮ ಆರ್ಥಿಕ ನಿರ್ವಹಣೆ ಮಾಡಿದ್ದಕ್ಕೆ ನೀವು ಇಷ್ಟು ಗಾತ್ರದ ಬಜೆಟ್ ಮಂಡಿಸಲು ಸಾಧ್ಯವಾಗಿದೆ. ನಮ್ಮ ಅವಧಿಯಲ್ಲಿ ಜಿಎಸ್ ಟಿ, ಮೊಟರ್ ವೆಹಿಕಲ್ ತೆರಿಗೆ ಎಲ್ಲವೂ ಹೆಚ್ಚು ಸಂಗ್ರಹವಾಗಿದೆ.
ಕೊವಿಡ್ ಸಂದರ್ಭದಲ್ಲಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಅತಿ ಹೆಚ್ಚು ಹಣ ನೀಡಿದ್ದಾರೆ. ಕೇಂದ್ರ ಸರ್ಕಾರ ಕಳೆದ ವರ್ಷ 3500 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಯುಪಿಎ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಅವರು ಸೊನಿಯಾ ಗಾಂಧಿ ಮುಂದೆ ಹೊಗಿ ನಿಲ್ಲಲು ಆಗುತ್ತಿರಲಿಲ್ಲ. ಕೇಂದ್ರ ನೀಡಿದ ಹಣದ ಬಗ್ಗೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಪ್ರಸ್ತಾಪ ಮಾಡದೆ ಮರೆಮಾಚಿದ್ದಾರೆ ಎಂದು ಆರೋಪಿಸಿದರು.
ಇನ್ನು ಐಎಎಸ್ ಅಧಿಕಾರಿಗಳ ಸೇವಾ ನಿಯಮದ ಬಗ್ಗೆ ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ ವಿವರವಾಗಿ ಪತ್ರದ ಮೂಲಕ ಹೇಳಿದ್ದಾರೆ. ಸ್ಪೀಕರ್ ಅತ್ಯಂತ ಸಣ್ಣ ವಯಸ್ಸಿನಲ್ಲಿ ಸ್ಪೀಕರ್ ಆಗಿದ್ದೀರಿ. ನೀವು ಕಾಂಗ್ರೆಸ್ ಭೋಜನ ಕೂಟಕ್ಕೆ ತೆರಳಿ ಅವರ ಬಾಗಿಲು ಕಾದಿರಿ,ಇದರಿಂದ ನಿಮಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಅವಮಾನವಾಗಿದೆ. ನಾವು ಸದನದಲ್ಲಿ ಪ್ರತಿಭಟನೆ ಮಾಡಿದರೆ ಕರೆದು ಚಹಾ ಕೊಡಬೇಕಿತ್ತಾ ಅಂತ ಕೇಳಿದ್ದೀರಿ, ನಾವು ನಿಮ್ಮ ಚಹಾ ಕುಡಿಯುಲು ಸದನಕ್ಕೆ ಬಂದಿಲ್ಲ. ನಾವು ಜನರ ಪರವಾಗಿ ಚರ್ಚೆ ಮಾಡಲು ಬರುತ್ತೇವೆ. ನಾವೇ ನಿಮಗೆ ಪ್ರತಿ ದಿನ ಟಿ ಕುಡಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರಕ್ಕೆ ಬಂದು ಎರಡೇ ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಜನಪ್ರೀಯತೆ ಕಳೆದುಕೊಂಡಿದೆ. ಐದು ಜನ ಟೆರೆರಿಸ್ಟ್ ಗಳು ಸಿಕ್ಕಿದ್ದಾರೆ ಅವರನ್ನು ಟೆರೆರಿಸ್ಟ್ ಎನ್ನಲು ಆಗುವುದಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ. ಸಾಮನ್ಯ ಅಪರಾಧ ಮಾಡುವವರು ಹ್ಯಾಂಡ್ ಗ್ರ್ಯಾನೈಡ್ ಇಟ್ಡುಕೊಳ್ಳುತ್ತಾರಾ ? ಇದೆಲ್ಲದಕ್ಕೂ ರಾಜ್ಯದ ಜನತೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಎಸ್ಸಿ ಎಸ್ಟಿ ಸಮುದಾಯಕ್ಕೆ ದ್ರೋಹ
ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳ ಜಾರಿಗೆ ಹಣಕಾಸು ಹೊಂದಿಸಲು ಎಸ್ಸಿ ಎಸ್ಟಿ ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟ ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ದುರ್ಬಳಕೆ ಮಾಡಿ, ಎಸ್ಸಿ ಎಸ್ಟಿ ಸಮುದಾಯಕ್ಕೆ ದ್ರೋಹ ಮಾಡಿದೆ. ನೈಸ್ ಅಕ್ರಮದ ವಿಚಾರದಲ್ಲಿ ಸರ್ಕಾರದ ಸ್ಪಷ್ಟ ನಿಲುವು ತಿಳಿಸಬೇಕು. ಇಲ್ಲವಾದರೆ ಸರ್ಕಾರದ ಮೇಲೆ ನಾವು ಅನುಮಾನ ಪಡಬೇಕು ಎಂದು ಹೇಳಿದರು.
ಈ ಸರ್ಕಾರ ಬಂದ ಮೇಲೆ ಕರ್ನಾಟಕದ ಜನರ ಬದುಕು ದುಸ್ತರ ಆಗಿದೆ. ರೈತರು ಎರಡು ಬಾರಿ ಬಿತ್ತನೆ ಮಾಡಿದರು ಬೆಳೆ ಬರದೇ ರೈತರು ಸಂಕಷ್ಟಕ್ಕೆ ಸಿಕಿದ್ದಾರೆ. ಸರ್ಕಾರ ಅವರ ರಕ್ಷಣೆಗೆ ಬಂದಿಲ್ಲ. 2013 ರಿಂದ 18ರ ವರೆಗೆ ಅತಿ ಹೆಚ್ಚು ರೈತರು ಸುಮಾರು 4000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ದಾಖಲೆ ಇದೆ ಎಂದು ಹೇಳಿದರು.
ನಾವು ನಮ್ಮ ಬಜೆಟ್ ನಲ್ಲಿ ಡಿಗ್ರಿವರೆಗೆ ಉಚಿತ ವಿದ್ಯಾಭ್ಯಾಸ ನಿಡುವುದಾಗಿ ಹೇಳಿದ್ದೇವು. ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡುವುದಾಗಿ ಹೇಳಿದ್ದೇವು ಇವರು ಅದನ್ನು ಕೈ ಬಿಟ್ಟಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿಗೆ ಕೊಲೆ ಸುಲಿಗೆ ಹೆಚ್ಚಾಗಿದೆ. ಪೊಲಿಸ್ ಠಾಣೆಯಲ್ಲಿ ಮಾಮೂಲು ಕೇಳುವ ಕೆಲಸ ಶುರುವಾಗಿದೆ. ವಿದ್ಯಾರ್ಥಿಗಳು, ರೈತರು, ಸರ್ಕಾರಿ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.












Click it and Unblock the Notifications