ಕಾಂಗ್ರೆಸ್ ನಾಯಕರು ದೆಹಲಿಯತ್ತ, ಅತೃಪ್ತರು ರೆಸಾರ್ಟ್‌ನತ್ತ
ಬೆಂಗಳೂರು, ಸೆಪ್ಟೆಂಬರ್ 18: ಕಾಂಗ್ರೆಸ್‌ನ ಟಾಪ್ ನಾಯಕರು ದೆಹಲಿಗೆ ತೆರಳಲು ಸಜ್ಜಾಗಿದ್ದರೆ ಇತ್ತ ಅತೃಪ್ತ ಶಾಸಕರು ರೆಸಾರ್ಟ್‌ನತ್ತ ತೆರಳಲು ತಯಾರಿ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಅತೃಪ್ತ ಶಾಸಕರ ಜೊತೆ ಸಿದ್ದರಾಮಯ್ಯ ಮಾಡಿದ ಸಂಧಾನ ಯತ್ನ ಫಲಪ್ರಧವಾಗದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದಾರೆ. ದಿನೇಶ್ ಗುಂಡೂರಾವ್ ಈಗಾಗಲೇ ದೆಹಲಿಯಲ್ಲಿದ್ದಾರೆ. ನಾಳೆ ಪರಮೇಶ್ವರ್ ಅವರೂ ದೆಹಲಿಗೆ ಹಾರುವ ಸಂಭವ ಇದೆ.
ರಾಜ್ಯ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಪ್ರಾರಂಭವಾಗಿದ್ದು, ನಿನ್ನೆಯಿಂದ ಸಚಿವರ ಅಧಿಕೃತ ನಿವಾಸದಲ್ಲಿ ತಂಗಿದ್ದ ರಮೇಶ್ ಜಾರಕಿಹೊಳಿ ಅವರು ಖಾಸಗಿ ರೆಸಾರ್ಟ್‌ನತ್ತ ತೆರಳಿದ್ದಾರೆ. ಇತರ ಅತೃಪ್ತ ಶಾಸಕರು ಅಲ್ಲಿಗೆ ಬಂದು ಸೇರಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಅತೃಪ್ತಶಾಸಕರಾದ ಎಂಟಿಬಿ ನಾಗರಾಜು, ನಾಗೇಂದ್ರ ಆನಂದ್ ಸಿಂಗ್ ಅವರುಗಳು ರಮೇಶ್ ಜಾರಕಿಹೊಳಿ ಜತೆಗಿದ್ದಾರೆ. ನಾಳೆ ಸುದ್ದಿಗೋಷ್ಠಿ ನಡೆಸಿ ಮಹತ್ವದ ನಿರ್ಣಯವನ್ನು ಹೊರಹಾಕುತ್ತೇವೆ ಎಂದು ಈಗಾಗಲೇ ಎಂಟಿಬಿ ನಾಗರಾಜು ಹೇಳಿದ್ದಾರೆ. ರಾಜಕೀಯದ ಎಲ್ಲ ಕುತೂಹಲ ನಾಳೆಗೆ ಶಿಫ್ಟ್ ಆಗಿದೆ.
ದೆಹಲಿಗೆ ತೆರಳುವ ಸಿದ್ದರಾಮಯ್ಯ ಅವರು ಹೈಕಮಾಂಡ್ ಜತೆ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಪ್ರಸ್ತುತ ರಾಹುಲ್ ಗಾಂಧಿ ಕರ್ನೂಲಿನಲ್ಲಿದ್ದು ರಾತ್ರಿ ವೇಳೆಗೆ ದೆಹಲಿಗೆ ತೆರಳುವ ಸಾಧ್ಯತೆ ಇದೆ.











Click it and Unblock the Notifications