ಮಗುವಿಗೆ 'ಅನ್ನರಾಮಯ್ಯ' ಎಂದು ನಾಮಕರಣ ಮಾಡಿದ ಸಿದ್ದರಾಮಯ್ಯ ಅಭಿಮಾನಿ, ಭಾರಿ ವೈರಲ್

Siddaramaiah: ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಎಂಬುದು ಶಾಶ್ವತವಲ್ಲ, ಅದು ಬರುತ್ತದೆ ಮತ್ತು ಹೋಗುತ್ತದೆ. ಆದರೆ, ಒಬ್ಬ ನಾಯಕ ಜಾರಿಗೆ ತರುವ ಜನಪರ ಯೋಜನೆಗಳು ಹಾಗೂ ಆತ ಜನಸಾಮಾನ್ಯರಿಗಾಗಿ ಮಾಡುವ ಕಾರ್ಯಗಳು ಜನರ ಮನಸ್ಸಿನಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುತ್ತವೆ. ಇದಕ್ಕೆ ಸಾಕ್ಷಿಯೆಂಬಂತೆ ಬೀದರ್ ಜಿಲ್ಲೆಯಲ್ಲಿ ಅಪರೂಪದ ಹಾಗೂ ವಿಶೇಷ ಘಟನೆಯೊಂದು ಬೆಳಕಿಗೆ ಬಂದಿದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಅತಿಯಾದ ಅಭಿಮಾನ ಹಾಗೂ ಅವರು ಜಾರಿಗೆ ತಂದ ಅತ್ಯಂತ ಜನಪ್ರಿಯ 'ಅನ್ನಭಾಗ್ಯ' ಯೋಜನೆಯ ಮೇಲಿನ ಗೌರವದಿಂದಾಗಿ, ದಂಪತಿಯೊಬ್ಬರು ತಮ್ಮ 15 ದಿನಗಳ ಮಗುವಿಗೆ 'ಅನ್ನರಾಮಯ್ಯ' ಎಂದು ಹೆಸರಿಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

Siddaramaiah Fan Names Newborn Annaramaiah in Karnataka s Bidar Here s Why Know complete details

ಮಗುವಿಗೆ 'ಅನ್ನರಾಮಯ್ಯ' ಎಂದು ನಾಮಕರಣ ಮಾಡಿದ ದಂಪತಿ

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಗುಲಗುಂಡಿ ಗ್ರಾಮದ ನಿವಾಸಿಗಳಾದ ರಾಜಪ್ಪ ಮತ್ತು ಅಂಬಿಕಾ ದಂಪತಿ ತಮ್ಮ ನವಜಾತ ಗಂಡು ಮಗುವಿಗೆ ಈ ವಿಭಿನ್ನ ಹಾಗೂ ಅರ್ಥಪೂರ್ಣ ಹೆಸರಿಟ್ಟು ತಮ್ಮ ನೆಚ್ಚಿನ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಮಹತ್ವಾಕಾಂಕ್ಷೆಯ 'ಅನ್ನಭಾಗ್ಯ' ಯೋಜನೆಯು ರಾಜ್ಯದ ಕೋಟ್ಯಂತರ ಬಡ ಕುಟುಂಬಗಳ ಹಸಿವನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಯೋಜನೆಯಿಂದ ಪ್ರಭಾವಿತರಾಗಿದ್ದ ಈ ದಂಪತಿ, ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಲು ನಿರ್ಧರಿಸಿದ್ದರು.

ಈ ಹೆಸರಿನ ಹಿಂದಿರುವ ವಿಶೇಷ ಅರ್ಥ ಏನು?

ಬಡವರ ಹಸಿವು ನೀಗಿಸಿದ 'ಅನ್ನಭಾಗ್ಯ' ಯೋಜನೆಯ ಹೆಸರಿನಲ್ಲಿದ್ದ 'ಅನ್ನ' ಎಂಬ ಪದವನ್ನು ಹಾಗೂ ಸಿದ್ದರಾಮಯ್ಯ ಅವರ ಹೆಸರಿನಲ್ಲಿರುವ 'ರಾಮಯ್ಯ' ಎಂಬ ಪದವನ್ನು ಒಟ್ಟುಗೂಡಿಸಿ, ತಮ್ಮ ಮಗುವಿಗೆ 'ಅನ್ನರಾಮಯ್ಯ' ಎಂದು ಹೆಸರಿಟ್ಟಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಮಗು ಜನಿಸುವ ಮುನ್ನವೇ ದಂಪತಿ ಮಹತ್ವದ ನಿರ್ಧಾರ

ವಿಶೇಷ ಅಂದ್ರೆ ಮಗು ಹುಟ್ಟುವ ಮುಂಚೆಯೇ ರಾಜಪ್ಪ ಮತ್ತು ಅಂಬಿಕಾ ದಂಪತಿ ಈ ಕುರಿತು ಮಹತ್ವದ ತೀರ್ಮಾನ ಕೈಗೊಂಡಿದ್ದರು. ಒಂದು ವೇಳೆ ತಮಗೆ ಹೆಣ್ಣು ಮಗು ಜನಿಸಿದರೆ 'ಪಾರ್ವತಿರಾಮಯ್ಯ' ಎಂದು, ಗಂಡು ಮಗು ಜನಿಸಿದರೆ 'ಅನ್ನರಾಮಯ್ಯ' ಎಂದು ನಾಮಕರಣ ಮಾಡಲು ಮುಂಚಿತವಾಗಿಯೇ ಯೋಜನೆ ರೂಪಿಸಿದ್ದರಂತೆ. ಅದರಂತೆಯೇ ಈಗ ಗಂಡು ಮಗು ಜನಿಸಿದ ಹಿನ್ನೆಲೆಯಲ್ಲಿ, ತಾವು ಮುಂಚಿತವಾಗಿ ಅಂದುಕೊಂಡಂತೆಯೇ ಮಗುವಿಗೆ 'ಅನ್ನರಾಮಯ್ಯ' ಎಂದು ಹೆಸರಿಟ್ಟು ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಬಡವರ ಕಷ್ಟಕ್ಕೆ ಸ್ಪಂದಿಸಿದ ನಾಯಕನ ಹೆಸರನ್ನು ತಮ್ಮ ಮುದ್ದು ಕಂದನಿಗೆ ಇಡುವ ಮೂಲಕ ಈ ದಂಪತಿ ಜನನಾಯಕನೊಬ್ಬನಿಗೆ ಸಲ್ಲಿಸಬಹುದಾದ ಅಪರೂಪದ ಗೌರವವನ್ನು ಸಲ್ಲಿಸಿದ್ದಾರೆ. ಸದ್ಯ ದುಗುಲಗುಂಡಿ ಗ್ರಾಮದ ರಾಜಪ್ಪ-ಅಂಬಿಕಾ ದಂಪತಿಯ ಈ ವಿಭಿನ್ನ ಹಾಗೂ ಪ್ರೀತಿಯ ನಾಮಕರಣದ ವಿಚಾರ ಬೀದರ್ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಹಲವರು ಇದಕ್ಕೆ ಮುಗು ಮುರಿಯುತ್ತಿದ್ದು, ರಾಜಕಾರಣಿಗಳನ್ನು ಬಿಟ್ಟು ದೇಶಕ್ಕಾಗಿ ಹೋರಾಡಿದವರ ಹಸರು ಇಡಬಹುದಿತ್ತು ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು 'ಯಾರಿಗೂ ತೊಂದರೆ ಆಗದಂತೆ ಅಭಿಪ್ರಾಯಗಳು, ತಮ್ಮ ಕನಸುಗಳನ್ನು ನೆರವೇರಿಸಿಕೊಳ್ಳಲು ಯಾರ ಅಪ್ಪಣೆಯೂ ಬೇಡ. ಈ ದಂಪತಿಗಳು ತಮ್ಮಿಷ್ಟದಂತೆ ಮಗುವಿಗೆ ಹೆಸರಿಟ್ಟು ಸಂತಸಪಟ್ಟಿದ್ದಾರೆ. ಇದನ್ನು ನೋಡಿ ಖುಷಿ ಪಡಬೇಕಷ್ಟೇ,' ಅಂತಲೂ ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+