ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮಹತ್ಯೆಯ ನೋವು ಎರಡುಪಟ್ಟು ಕಾಡುತ್ತದೆ: ಸಿದ್ದರಾಮಯ್ಯ ಭಾವುಕ ನುಡಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 19: ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ತಮ್ಮ ಅಭಿಮಾನಿಯ ಸಾವಿನ ಬಗ್ಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಭಾವುಕ ಮಾತುಗಳನ್ನಾಡಿದ್ದಾರೆ. ಪ್ರೇಮ ವೈಫಲ್ಯದಿಂದ ಮನನೊಂದಿದ್ದ ಮಂಡ್ಯ ತಾಲ್ಲೂಕಿನ ಕೋಡಿದೊಡ್ಡಿ ಗ್ರಾಮದ ಯುವ ಕೃಷ್ಣ (24) ಆತ್ಮಹತ್ಯೆ ಮಾಡಿಕೊಂಡಿದ್ದ. ನಟ ಯಶ್ ಹಾಗೂ ಸಿದ್ದರಾಮಯ್ಯ ಅವರು ತನ್ನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟ ಅಭಿಮಾನಿಯ ಕೊನೆಯ ಆಸೆಯನ್ನು ಸಿದ್ದರಾಮಯ್ಯ ಈಡೇರಿಸಿದ್ದಾರೆ.

ಕೋಡಿದೊಡ್ಡಿ ಗ್ರಾಮಕ್ಕೆ ತೆರಳಿ ಅಭಿಮಾನಿಗೆ ಅಂತಿಮ ನಮನ ಸಲ್ಲಿಸಿದ ಸಿದ್ದರಾಮಯ್ಯ, ಭಾವುಕ ಮಾತುಗಳನ್ನಾಡಿದ್ದಾರೆ. 'ನನಗೆ ಅವನ ಪರಿಚಯವಿಲ್ಲ. ಆದರೂ ಆತ ನನ್ನ ಅಭಿಮಾನಿಯಾಗಿದ್ದಾನೆ. ಎಲ್ಲದಕ್ಕಿಂತಲೂ ನನಗೆ ಮನುಷ್ಯತ್ವ ಮುಖ್ಯ' ಎಂದು ಹೇಳಿದ್ದಾರೆ.

ಅಭಿಮಾನಿ ಆತ್ಮಹತ್ಯೆ: ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಸಿದ್ದರಾಮಯ್ಯ!ಅಭಿಮಾನಿ ಆತ್ಮಹತ್ಯೆ: ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಸಿದ್ದರಾಮಯ್ಯ!

ಅಭಿಮಾನಿಯ ಆತ್ಮಹತ್ಯೆಯಿಂದ ಮನನೊಂದಿರುವ ಸಿದ್ದರಾಮಯ್ಯ, ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಸಾವಿನ ನಂತರವೂ ಸಮಸ್ಯೆ ಉಳಿಯುತ್ತದೆ. ಆದರೆ ಜೀವ ನಷ್ಟದಿಂದ ಕುಟುಂಬದವರಿಗೆ ಶಾಶ್ವತ ನೋವು ಉಂಟಾಗುತ್ತದೆ ಎಂದು ಸಿದ್ದರಾಮಯ್ಯ ಭಾವುಕರಾಗಿ ಹೇಳಿದ್ದಾರೆ.

ದುಃಖದಿಂದ ಈಡೇರಿಸಿದ್ದೇನೆ

ದುಃಖದಿಂದ ಈಡೇರಿಸಿದ್ದೇನೆ

ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದಲ್ಲಿ ಆತ್ನಹತ್ಯೆಗೆ ಶರಣಾದ ಕೃಷ್ಣ ಎಂಬ ಯುವಕನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದೆ. ಆತ್ಮಹತ್ಯೆಗೂ ಮುನ್ನ ಹುಡುಗ ತನ್ನ ಅಂತ್ಯಕ್ರಿಯೆಗೆ ಸಿದ್ದರಾಮಯ್ಯ ಬರಬೇಕು ಅಂತ ಬರೆದಿಟ್ಟಿದ್ದ, ಆ ಕಾರಣ ಅತ್ಯಂತ ದುಃಖದಿಂದ ಆತನ ಕೊನೆ ಆಸೆ ಈಡೇರಿಸಿದ್ದೇನೆ.

ಅಮೂಲ್ಯ ಬದುಕಿನ ನಷ್ಟ

ಅಮೂಲ್ಯ ಬದುಕಿನ ನಷ್ಟ

ಸಮಸ್ಯೆಗಳಿಗೆ ಸಾವು ಎಂದಿಗೂ ಪರಿಹಾರವಲ್ಲ. ಸಮಸ್ಯೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಎಂದರೆ ತಮ್ಮ ಸಮಸ್ಯೆಯನ್ನು ಬೇರೊಬ್ಬರ ಹೆಗಲಿಗೆ ವರ್ಗಾಯಿಸಿದಂತೆ. ಸಾವಿನ ನಂತರವೂ ಸಮಸ್ಯೆ ಹಾಗೆಯೇ ಉಳಿಯುತ್ತೆ, ಆದರೆ ಅಮೂಲ್ಯ ಬದುಕೊಂದು ನಷ್ಟವಾಗುತ್ತೆ.

ಕುಟುಂಬದವರ ನೋವು ಶಾಶ್ವತ

ಕುಟುಂಬದವರ ನೋವು ಶಾಶ್ವತ

ಕಷ್ಟಗಳು ಬಂದಾಗ ಎದುರಿಸುವ ಗಟ್ಟಿತನ ಪ್ರತಿಯೊಬ್ಬರಲ್ಲೂ ಬರಬೇಕು. ನೆನಪಿರಲಿ, ಸಮಸ್ಯೆಗಳು ತಾತ್ಕಾಲಿಕ, ಆದರೆ ತಮ್ಮವರನ್ನು ಕಳೆದುಕೊಂಡ ಕುಟುಂಬದವರ ನೋವು ಶಾಶ್ವತ ಎಂದು ಸಿದ್ದರಾಮಯ್ಯ ಅವರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರದಿಂದ ಮನೆಯವರು ಒಳಗಾಗುವ ನೋವಿನ ಬಗ್ಗೆ ಮಾತನಾಡಿದ್ದಾರೆ.

ಎರಡು ಪಟ್ಟು ಕಾಡುತ್ತದೆ

ಎರಡು ಪಟ್ಟು ಕಾಡುತ್ತದೆ

ಸಮಸ್ಯೆಯನ್ನು ಮೆಟ್ಟಿನಿಂತು ಬದುಕು ಕಟ್ಟಿಕೊಂಡಾಗ ಇವನು ನನ್ನ ಅಭಿಮಾನಿ ಎಂದು ಹೇಳಲು ನಮಗೂ ಹೆಮ್ಮೆಯಾಗುತ್ತೆ. ಅಭಿಮಾನಿಯೊಬ್ಬನ ಸಾವು ಎಷ್ಟು ನೋವು ಕೊಡುತ್ತದೋ, ಆತ್ಮಹತ್ಯೆ ಅದರ ಎರಡು ಪಟ್ಟು ಕಾಡುತ್ತದೆ.

Recommended Video

Amit Shah ಸವಾಲೆಸೆದ ಮಮತಾ ಬ್ಯಾನರ್ಜಿ, ಪ.ಬಂಗಾಳದಲ್ಲಿ ಮುಂದುವರೆದ ವಾಕ್‌ ಸಮರ | Oneindia Kannada
ಭರವಸೆಯೇ ಬದುಕು ಎಂದು ಮರೆಯಬೇಡಿ

ಭರವಸೆಯೇ ಬದುಕು ಎಂದು ಮರೆಯಬೇಡಿ

ಯಾರ ಅಭಿಮಾನಿಯೇ ಆಗಲಿ, ಯಾವ ಧರ್ಮ - ಸಿದ್ಧಾಂತವೇ ಇರಲಿ, ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಡುಕಿನ ನಿರ್ಧಾರ ಬೇಡ. ಪ್ರತೀ ಜೀವವೂ ಅಮೂಲ್ಯ. ಕತ್ತಲು ಕಳೆದ ನಂತರ ಬೆಳಕು ಬಂದಂತೆ, ಕಷ್ಟಗಳು ದೂರಾಗಲೇಬೇಕು. ಭರವಸೆಯೇ ಬದುಕು ಎನ್ನುವುದನ್ನು ಮರೆಯದಿರೋಣ.

English summary
Siddaramaiah advised people not take an extreme step like suicide to find solution for proble. His emotional note came after he pays tribute to one of his fan who committed suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X