ಎಚ್ಡಿಕೆ ಆರೋಪಕ್ಕೆ ಚುಟುಕು ಉತ್ತರ ಕೊಟ್ಟ ಸಿದ್ದರಾಮಯ್ಯ!

ನವದೆಹಲಿ, ಫೆಬ್ರವರಿ 26 : ವಜ್ರ ಖಚಿತ ವಾಚ್ ವಿವಾದದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿರುವ ಆರೋಪಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿ ಹಾಕಿದರು. 'ಕುಮಾರಸ್ವಾಮಿ ಅವರದ್ದು ಹಿಟ್ ಅಂಡ್ ರನ್ ಪ್ರಕರಣ' ಎಂದು ಅವರು ಲೇವಡಿ ಮಾಡಿದರು. [ದುಬಾರಿ ಹ್ಯೂಬ್ಲಟ್ ವಾಚು ಪುರಾಣದ ಕಂತೆ]

ನವದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ ಅವರು, 'ಕುಮಾರಸ್ವಾಮಿ ಅವರ ಆರೋಪಗಳಲ್ಲಿ ಹುರುಳಿಲ್ಲ. ಡಾ.ಗಿರೀಶ್ ಚಂದ್ರ ವರ್ಮಾ ಅವರು ನನಗೆ ವಾಚ್ ನೀಡಿದ್ದರು. ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ಅವರಿಗೂ ಗಿರೀಶ್ ಚಂದ್ರ ಅವರು ಚೆನ್ನಾಗಿ ಗೊತ್ತು' ಎಂದು ಹೇಳಿದರು. [ಗಡಿಯಾರದ ಗಲಾಟೆ, ಎಚ್ಡಿಕೆ ಬುಟ್ಟಿಯಲ್ಲಿ ಹೊಸ ಹಾವು!]

chief minister siddaramaiah

'ಕುಮಾರಸ್ವಾಮಿ ಅವರದ್ದು ಹಿಟ್ ಅಂಡ್ ರನ್ ಪ್ರಕರಣ. ಯಾವುದೇ ವಿಷಯವನ್ನು ಅವರು ಅಂತ್ಯಕ್ಕೆ ತಗೆದುಕೊಂಡು ಹೋಗುವುದಿಲ್ಲ. ಅವರು ಏನು ಹೇಳಿದ್ದಾರೆ ಎಂಬುದನ್ನು ಪೂರ್ಣವಾಗಿ ತಿಳಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ' ಎಂದು ತಿಳಿಸಿದರು. ['ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ ನನ್ನದಲ್ಲ']

ಕುಮಾರಸ್ವಾಮಿ ಹೇಳಿದ್ದೇನು? : ಬೆಂಗಳೂರಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, 'ಸರ್ಕಾರ ಕತೆಯನ್ನು ಚೆನ್ನಾಗಿ ಕಟ್ಟುತ್ತದೆ. ವಾಚ್ ವಿವಾದ ಹೊರಬಂದ ಮೊದಲ ದಿನವೇ ಸಿದ್ದರಾಮಯ್ಯ ಅವರ ಸ್ನೇಹಿತರು ಏಕೆ ಸ್ಪಷ್ಟನೆ ನೀಡಲಿಲ್ಲ?' ಎಂದು ಪ್ರಶ್ನಿಸಿದ್ದಾರೆ. [ಸಿದ್ದರಾಮಯ್ಯನವರ ಕೈಗಡಿಯಾರದ ಟೈಂ ಲೈನ್]

'ವಾಚು ಡಾ.ಸುಧಾಕರ್ ಶೆಟ್ಟಿ ಅವರಿಗೆ ಸೇರಿದ್ದು, ಅವರ ಮನೆಯಿಂದ ವಾಚ್ ಕಳ್ಳತನವಾದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರಿನ ಕುರಿತು ತನಿಖೆ ನಡೆದರೆ ವಾಚ್ ನೀಡಿದ್ದು ಯಾರು? ಎಂಬುದು ಬಹಿರಂಗವಾಗಲಿದೆ' ಎಂದು ಹೇಳಿದ್ದರು.

'ಡಾ.ಗಿರೀಶ್ ಚಂದ್ರ ವರ್ಮಾ ಅವರು 30 ವರ್ಷಗಳಿಂದ ಸಿದ್ದರಾಮಯ್ಯ ಅವರಿಗೆ ಆತ್ಮೀಯ ಸ್ನೇಹಿತರು. 1983ರಿಂದ ಸ್ನೇಹಿತರಾದ ಅವರು 2015ರ ಜುಲೈನಲ್ಲಿ ಸಿದ್ದರಾಮಯ್ಯ ಅವರಿಗೆ ತಮ್ಮ ಕೈಯಲ್ಲಿದ್ದ ವಾಚ್ ಬಿಚ್ಚಿ ಕೊಟ್ಟಿದ್ದರಂತೆ. ಹೊಸ ವಾಚನ್ನು ಅವರು ಯಾಕೆ ಕೊಡಲಿಲ್ಲ?' ಎಂದು ಲೇವಡಿ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+