ಸಿದ್ದರಾಮಯ್ಯ ಬಜೆಟ್ : ಕನ್ನಡ ಪತ್ರಿಕೆಗಳ ಹೆಡ್‌ಲೈನ್ ಹೀಗಿದೆ
ಬೆಂಗಳೂರು, ಮಾ. 14 : ಹಣಕಾಸು ಖಾತೆಯನ್ನು ಹೊಂದಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 1,42, 534 ಕೋಟಿ ರೂ. ಮೊತ್ತದ ಬಜೆಟ್ ಮಂಡನೆ ಮಾಡಿದ್ದಾರೆ. ಸಿಎಂ ಆಗಿ ಮೂರನೇ ಬಜೆಟ್ ಮಂಡಿಸಿರುವ ಅವರು, ಅಹಿಂದ ವರ್ಗದ ಜನರ ಓಲೈಕೆಗೆ ಮುಂದಾಗಿದ್ದಾರೆ.
ತಮ್ಮ ಬಜೆಟ್‌ನಲ್ಲಿ ಹತ್ತಾರು ಬಗೆಯ ಅನುದಾನಗಳು, ಶೈಕ್ಷಣಿಕ ಪ್ರೋತ್ಸಾಹಧನಗಳು, ನಾನಾ ಯೋಜನೆಗಳ ಮಹಾಪೂರವನ್ನೇ ರಾಜ್ಯದ ಅಹಿಂದ ಸಮುದಾಯಕ್ಕೆ ಸಿಎಂ ಸಿದ್ದರಾಮಯ್ಯ ಹರಿಸಿದ್ದಾರೆ. ಕರ್ನಾಟಕದಲ್ಲಿ ಕೇಳಿಬರುತ್ತಿರುವ ದಲಿತ ಮುಖ್ಯಮಂತ್ರಿ ಕೂಗಿಗೆ ಸಿಎಂ ಬಜೆಟ್‌ನಲ್ಲಿ ಉತ್ತರ ನೀಡಿದ್ದಾರೆ.
ಕನ್ನಡದ ದಿನಪತ್ರಿಕೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2015-16ನೇ ಸಾಲಿನ ಬಜೆಟ್ ಸುದ್ದಿಗಳನ್ನು ವಿವರವಾಗಿ ಪ್ರಕಟಿಸಿದ್ದು, ಅಹಿಂದ ವರ್ಗಕ್ಕೆ ಆದ್ಯತೆ ನೀಡಿದ್ದನ್ನು ಹೆಡೆಲೈನ್‌ನಲ್ಲಿಯೇ ಹೇಳಿವೆ. ಉದಯವಾಣಿ 'ಇದು ದಲಿತ ಭಾಗ್ಯವಯ್ಯಾ!' ಎಂಬ ಶೀರ್ಷಿಕೆಯನ್ನು ನೀಡಿದೆ. [ಸಿದ್ದರಾಮಯ್ಯ ಬಜೆಟ್ ಮುಖ್ಯಾಂಶಗಳು ಇಲ್ಲಿವೆ]
ವಿಜಯಕರ್ನಾಟಕ 'ಅಹಿಂದ ಭಾಗ್ಯ, ಒಟ್ಟಾರೆ ಯೋಗ್ಯ' ಎಂಬ ಶೀರ್ಷಿಕೆ ನೀಡಿದೆ. ವಿಜಯವಾಣಿ 'ಸಿದ್ಧ ಸೂತ್ರದ ಭಾಗ್ಯವಯ್ಯಾ' ಎಂಬ ಶೀರ್ಷಿಕೆ ನೀಡಿದ್ದರೆ, ಕನ್ನಡ ಪ್ರಭ 'ಅಹಿಂದ ಕರಗತ' ಎಂಬ ಶೀರ್ಷಿಕೆ ನೀಡಿದೆ. ಕನ್ನಡದ ದಿನಪತ್ರಿಕೆಗಳ ಬಜೆಟ್ ಹೆಡ್‌ಲೈನ್‌ಗಳನ್ನು ನೋಡೋಣ ಬನ್ನಿ

'ಅಹಿಂದ ಭಾಗ್ಯ, ಒಟ್ಟಾರೆ ಯೋಗ್ಯ'
ವಿಜಯ ಕರ್ನಾಟಕ ಪತ್ರಿಕೆ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ಅಹಿಂದ ಭಾಗ್ಯ ಎಂದಿದೆ. ಮುಖಪುಟದಲ್ಲಿ 'ಅಹಿಂದ ಭಾಗ್ಯ, ಒಟ್ಟಾರೆ ಯೋಗ್ಯ' ಎಂಬ ಶೀರ್ಷಿಕೆ ನೀಡಿದೆ.

'ಸಿದ್ಧ ಸೂತ್ರದ ಭಾಗ್ಯವಯ್ಯಾ'
ಸಿಎಂ ಸಿದ್ದರಾಮಯ್ಯ ಮಂಡಿಸಿದ 2015-16ನೇ ಸಾಲಿನ ಬಜೆಟ್ 'ಸಿದ್ಧ ಸೂತ್ರದ ಭಾಗ್ಯವಯ್ಯಾ' ಎಂದು ವಿಜಯವಾಣಿ ಪತ್ರಿಕೆ ಹೇಳಿದೆ. ಮತ್ತೆ ಅಹಿಂದ ಮಂತ್ರ ಎಂಬ ಉಪ ಶೀರ್ಷಿಕೆಯನ್ನು ನೀಡಿದೆ.

'ಇದು ದಲಿತ ಭಾಗ್ಯವಯ್ಯಾ!'
ಉದಯವಾಣಿ 'ಇದು ದಲಿತ ಭಾಗ್ಯವಯ್ಯಾ' ಎಂದು ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ಸುದ್ದಿಗೆ ಹೆಡ್‌ಲೈನ್ ನೀಡಿದೆ.

'ಈ ಬಾರಿ ದಲಿತರಿಗೆ ಬಜೆಟ್ ಭಾಗ್ಯ'
ಅಹಿಂದ ವರ್ಗಕ್ಕೆ ಹೆಚ್ಚು ಆದ್ಯತೆ ನೀಡಿದ ಬಜೆಟ್ ಅನ್ನು ಪ್ರಜಾವಾಣಿ ಪತ್ರಿಕೆ 'ಈ ಬಾರಿ ದಲಿತರಿಗೆ ಬಜೆಟ್ ಭಾಗ್ಯ' ಎಂದು ಬಣ್ಣಿಸಿದೆ.

ಅಹಿಂದಾಯ ನಮಃ
ಸಂಯುಕ್ತ ಕರ್ನಾಟಕ ಕರ್ನಾಟಕದ 2015-16ನೇ ಬಜೆಟ್ ಅನ್ನು 'ಅಹಿಂದಾಯ ನಮಃ' ಎಂದು ಹೇಳಿದೆ. ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ಒದೇ ಶೀರ್ಷಿಕೆಯಡಿ ಪ್ರಕಟಿಸಿದೆ.

'ಅಹಿಂದ ಕರಗತ'
ಕನ್ನಡಪ್ರಭ ಕರ್ನಾಟಕದ ಬಜೆಟ್ ಸುದ್ದಿಯನ್ನು 'ಅಹಿಂದ ಕರಗತ' ಎಂದು ಬಣ್ಣಿಸಿದೆ. ರಾಜ್ಯದಲ್ಲಿ ಸಿದ್ದರಾಮ ಸಂವತ್ಸರ, ಮುಂಗಡ ಪತ್ರ ಹಿತಕರ ಎಂಬ ಉಪ ಶೀರ್ಷಿಕೆ ನೀಡಿದೆ.

ಸಮಪಾಲು ಸಮಬಾಳು
ವಾರ್ತಾಭಾರತಿ 'ಸಮಪಾಲು ಸಮಬಾಳು' ಎಂಬ ಶೀರ್ಷಿಕೆಯಡಿ ಬಜೆಟ್ ಸುದ್ದಿಗಳನ್ನು ಪ್ರಕಟಿಸಿದೆ.

ಸಿದ್ದು ಅಹಿಂದ ಪಾಠ
ಹೊಸದಿಗಂತ ಸಿದ್ದರಾಮಯ್ಯ ಮಂಡಿಸಿದ ಬಜೆಟ್ 'ಅಹಿಂದ ಪಾಠ' ಎಂದು ಹೇಳಿದೆ. 'ಸಿದ್ದು ಅಹಿಂದ ಪಾಠ' ಎಂಬ ಶೀರ್ಷಿಕೆಯನ್ನು ಮುಖಪುಟದಲ್ಲಿ ನೀಡಿದೆ.












Click it and Unblock the Notifications