ಸಿದ್ದರಾಮಯ್ಯ ಕೆಂಗಣ್ಣಿಗೆ ಗುರಿಯಾದ ಮೊಯಿದ್ದೀನ್ ಬಾವಾ

Posted By:
Subscribe to Oneindia Kannada

ಬೆಂಗಳೂರು, ಮೇ 30 : ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗರಂ ಆಗಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವಾ ಅವರ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕ ಮೊಯಿದ್ದೀನ್ ಬಾವಾ ಅವರ ವಿರುದ್ಧ ಅಸಮಾಧಾನಗೊಂಡರು. ಸಿದ್ದರಾಮಯ್ಯ ಮಾತು ಕೇಳಿದ ಸಚಿವರು ಕೆಲವು ಕ್ಷಣ ತಬ್ಬಿಬ್ಬಾದರು. [ನಾಮಪತ್ರ ಸಲ್ಲಿಸಿದ ಬಿ.ಎಂ.ಫಾರೂಕ್]

siddaramaiah

ಶಾಸಕ ಮೊಯಿದ್ದೀನ್ ಬಾವಾ ಅವರ ಸಹೋದರ ಬಿ.ಎಂ.ಫಾರೂಕ್ ಅವರು ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ಅವರು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಶಾಸಕಾಂಗ ಸಭೆಯಲ್ಲಿ ಸಿಕ್ಕ ಬಾವಾ ಅವರ ವಿರುದ್ಧ ಹರಿಹಾಯ್ದಿದ್ದಾರೆ. [ಜಮೀರ್ ವಿರುದ್ಧ ಕ್ರಮ ಕೈಗೊಳ್ಳುವ ದಿನ ಹತ್ತಿರ ಬಂದಿದೆ]

ಸಿದ್ದರಾಮಯ್ಯ ಹೇಳಿದ್ದೇನು? [ರಾಜ್ಯಸಭೆ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ]

* ರಾಜಕೀಯ ಎಂದರೆ ಏನೆಂದು ತಿಳಿದುಕೊಂಡಿದ್ದೀರಿ?, ಸಹೋದರನನ್ನು ಜೆಡಿಎಸ್‌ನಿಂದ ಹೇಗೆ ಕಣಕ್ಕಿಳಿಸಿದ್ದೀರಿ?, ನಿಮ್ಮ ಬೆಂಬಲವಿಲ್ಲದೆ ಕಣಕ್ಕಿಳಿಯಲು ಹೇಗೆ ಸಾಧ್ಯ?. ನೀವು ಹೇಳಿದ್ದರೆ ನಾಮಪತ್ರ ವಾಪಸ್ ಪಡೆಯುತ್ತಿರಲಿಲ್ಲವೇ?

* ಉದ್ದೇಶಪೂರ್ವಕವಾಗಿ ಸಹೋದರನನ್ನು ಜೆಡಿಎಸ್ ಮೂಲಕ ಕಣಕ್ಕಿಳಿಸಿದ್ದೀರಿ. ನಿಮ್ಮ ವಿರುದ್ಧ ಪಕ್ಷದ ಅಭ್ಯರ್ಥಿ ಆಸ್ಕರ್ ಫರ್ನಾಂಡೀಸ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಕೂಡಾ ಅಸಮಾಧಾನಗೊಂಡಿದ್ದಾರೆ.

ಸ್ಪಷ್ಟನೆ ಕೊಟ್ಟ ಬಾವಾ : ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದರಿಂದ ಶಾಸಕ ಮೊಯಿದ್ದೀನ್ ಬಾವಾ ಅವರು ಸ್ಪಷ್ಟನೆ ಕೊಟ್ಟರು. ಇದರಿಂದ ಗರಂ ಆಗ ಸಿದ್ದರಾಮಯ್ಯ ಮತ್ತಷ್ಟು ಪ್ರಶ್ನೆಗಳನ್ನು ಕೇಳಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದರು.

'ಸರ್ ನನಗೂ ನನ್ನ ಸಹೋದರನಿಗೂ ಸಂಬಂಧವಿಲ್ಲ. ನನ್ನ ಸಹೋದರ ಫಾರೂಕ್ ನನ್ನ ಮಾತು ಕೇಳುವುದಿಲ್ಲ' ಎಂದು ಬಾವಾ ಅವರು ಸ್ಪಷ್ಟನೆ ನೀಡಿದರು.

ಇದರಿಂದ ಮತ್ತಷ್ಟು ಕೋಪಗೊಂಡ ಸಿದ್ದರಾಮಯ್ಯ ಅವರು, 'ನನ್ನ ಮಾತು ಕೇಳುವುದಿಲ್ಲ, ಸಂಬಂಧವಿಲ್ಲ ಎಂದು ಹೇಳಿದರೆ ಏನರ್ಥ. ವಿಂಡ್ ಪವರ್ ವ್ಯವಹಾರದಲ್ಲಿ ಸಂಬಂಧವಿರಲಿಲ್ಲಿವೇ?, ಸಹೋದರನನ್ನು ಕರೆದುಕೊಂಡು ಬಂದಿರಲಿಲ್ಲವೇ?' ಎಂದು ತರಾಟೆಗೆ ತೆಗೆದುಕೊಂಡರು.

bm farook

ಬಿ.ಎಂ.ಫಾರೂಕ್ ಯಾರು? : ಉದ್ಯಮಿ ಬಿ.ಎಂ.ಫಾರೂಕ್ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಎ.ಮೊಯಿದ್ದೀನ್ ಬಾವಾ ಅವರ ಸಹೋದರ. ಬೆಂಗಳೂರಿನ ಬ್ಯಾರೀಸ್ ವೆಲೆಧೀರ್ ಅಸೋಸಿಯೇಶನ್‌ನ ಅಧ್ಯಕ್ಷರು. ಇಂಜಿನಿಯರಿಂಗ್ ಶಿಕ್ಷಣ ಪಡೆದಿರುವ ಅವರು ಪವನ ವಿದ್ಯುತ್, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister Siddaramaiah angry with Mangaluru North MLA B.A.Moideen Bava (Congress) for his brother connection with JDS. Moideen Bava B.M.Farook contest for Rajya Sabha election 2016 as JDS candidate.
Please Wait while comments are loading...