ಯಾರ ಒತ್ತಡಕ್ಕೂ ಮಣಿದು ಟಿಕೆಟ್‌ ಕೊಡುವ ಪ್ರಶ್ನೆಯೇ ಇಲ್ಲ : ನಳಿನ್ ಕುಮಾರ್ ಕಟೀಲ್

ನಮ್ಮ ಬಳಿ ಸಂಸದೆ ಸುಮಲತಾ ಅಂಬರೀಶ್ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ನಳಿನ್‍ಕುಮಾರ್ ಕಟೀಲ್ ಸುಮಲತಾ ಸೇರ್ಒಡೆ ಕುರಿತು ಸುಳಿವು ನೀಡಿದರು.

ಮಂಡ್ಯ,ಮಾರ್ಚ್9: ವಿಧಾನಸಭಾ ಚುನಾವಣೆ ಹಿನ್ನಲೆ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರವನ್ನ ನಡೆಸುತ್ತಿವೆ. ಇತ್ತ ಜೆಡಿಎಸ್ ಮೊದಲ 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಕಾಂಗ್ರೆಸ್ ಮಾರ್ಚ್ 20 ರಂದು ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, ಬಿಜೆಪಿ ಅಭ್ಯರ್ಥಿಗಳ ವಿಚಾರದಲ್ಲಿ ಪಕ್ಷ ಸಾಕಷ್ಟು ಲೆಕ್ಕಾಚಾರವನ್ನ ಹಾಕಿಕೊಂಡಿದೆ.

ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ನಮ್ಮದು ರಾಷ್ಟ್ರೀಯ ಪಕ್ಷ ಹಾಗಾಗಿ, ನಮ್ಮ ಪಕ್ಷದಲ್ಲಿ ಯಾರ ಒತ್ತಡಕ್ಕೂ ಮಣಿದು ಟಿಕೆಟ್ ಕೊಡುವ ಪ್ರಶೆಯೇ ಇಲ್ಲ ಎಂದು ಹೇಳಿದ್ದಾರೆ. ಸಭೆ ಸಮಾರಂಭದಲ್ಲಿ ಜನರ ಸಂಖ್ಯೆ ನೋಡಿ ಟಿಕೆಟ್ ಕೊಡುವ ಸಂಸ್ಲೃತಿ ಬಿಜೆಪಿ ಪಕ್ಷದಲ್ಲಿಲ್ಲ. ನಾವು ರಾಜ್ಯದ 224 ಕ್ಷೇತ್ರಗಳಲ್ಲಿಯೂ ಈಗಾಗಲೇ ಮರ್ನಾಲ್ಕು ಬಾರಿ ಸಮೀಕ್ಷೆ ನಡೆಸಲಾಗಿದೆ ಎಂದು ಹೇಳಿದರು.

Siddaramaiah And Dk Shivakumar Will Never Be United Says Nalin Kumar Kateel

ರಾಜ್ಯದ ಹಲವು ಭಾಗದ ಜೆಡಿಎಸ್ ಹಾಗೂ ಕಾಂಗ್ರೆಸ್ ನ ನಾಯಕರು ಆದಷ್ಟು ಬೇಗ ಬಿಜೆಪಿ ಪಕ್ಷವನ್ನ ಸೇರಲಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಇನ್ನೂ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಹೊಂದಾಣಿಕೆಯಿಲ್ಲ. ಅವರಿಬ್ಬರೂ ಎಂದಿಗೂ ಒಂದಾಗುವುದಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ನಾಯಕರು ಬೇಸತ್ತು ನಮ್ಮ ಪಕ್ಷವನ್ನ ಸೇರುವ ತವಕದಲ್ಲಿದ್ದಾರೆ ಎಂದು ಹೇಳಿದರು.

ಮಂಡ್ಯ ಜಿಲ್ಲೆ ಜೆಡಿಎಸ್‌ ಭದ್ರಕೋಟೆ ಎಂಬುದು ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ಮುಗಿದ ಹೋದ ಆಧ್ಯಾಯವಾಗಿದೆ. ನಮ್ಮ ಪಕ್ಷಕ್ಕೆ ಯಾರನ್ನ ಸೇರಿಸಿಕೊಳ್ಳಬೇಕು ಅಥವಾ ಯಾರನ್ನ ಸೇರಿಸಿಕೊಳ್ಳಬಾರದೆಂಬ ಯೋಚನೆ ಮಾಡುತ್ತಿದ್ದೇವೆ. ನಮ್ಮ ಬಳಿ ಸುಮಲತಾ ಅಂಬರೀಶ್ ಯಾವುದೇ ಬೇಡಿಕೆ ಇಟ್ಟಿಲ್ಲ, ಸುಮಲತಾ ಅವರು ಮಂಡ್ಯ ಜಿಲ್ಲೆಯ ಸಂಸದರು. ಯಾವುದೇ [ಪಕ್ಷವನ್ನ ಸೇರುವುದು ಅವರ ವೈಯಕ್ತಿಕ ವಿಚಾರವಾಗಿದೆ ಎಂದು ಹೇಳಿದರು.

Siddaramaiah And Dk Shivakumar Will Never Be United Says Nalin Kumar Kateel

ಸುಮಲತಾ ಅವರು ಬಿಜೆಪಿ ಸೇರುತ್ತಾರೆ ಎಂದು ಬೇರೆ ಪಕ್ಷಗಳು ಒತ್ತಡ ಹಾಕುತ್ತಿವೆ. ಮೊದಲು ಸಂಸದರಾದ ಸುಮಲತಾ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿ. ಕ್ಷೇತ್ರ ಯಾವುದು ಅಂತ ಆನಂತರ ನೋಡೋಣ. ಆದರೆ, ಈ ವಿಷಯದಲ್ಲಿ ಸುಮಲತಾರವರು ನಮ್ಮಲ್ಲಿ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+