ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿ : ಓದುಗರ ಒಕ್ಕೊರಲ ಕೂಗು

Posted By:
Subscribe to Oneindia Kannada

ಬೆಂಗಳೂರು, ಜುಲೈ 09 : ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆಜೆ ಜಾರ್ಜ್ ಕೈವಾಡವಿದೆಯೇ?, ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆಯೇ?, ಗಣಪತಿ ಅವರ ಸಾವಿನ ಕುರಿತ ಸತ್ಯ ಹೊರ ಬರುತ್ತದೆಯೇ?.....ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.

'ನನಗೆ ಮುಂದೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್‌ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ' ಎಂದು ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರು ಸುದ್ದಿವಾಹಿನಿಗೆ ನೀಡಿರುವ ಹೇಳಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. [ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]

mk ganapati

ಶನಿವಾರ ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, 'ಆತ್ಮಹತ್ಯೆ ಪ್ರಕರಣದಲ್ಲಿ ಮೇಲ್ನೋಟಕ್ಕೆ ಸಚಿವ ಕೆ.ಜೆ.ಜಾರ್ಜ್ ಕೈವಾಡ ಇದೆ ಎಂದು ಅನಿಸುತ್ತಿಲ್ಲ. ತನಿಖೆ ಮುಗಿಯದೆ ಈಗಲೇ ಏನೂ ಹೇಳಲಾಗುವುದಿಲ್ಲ. ಸಿಐಡಿ ತನಿಖೆ ಮುಗಿಯಲಿ. ಆಮೇಲೆ ಸತ್ಯ ಗೊತ್ತಾಗುತ್ತದೆ' ಎಂದು ಹೇಳಿದ್ದಾರೆ. [ಗಣಪತಿ ಆತ್ಮಹತ್ಯೆ, ಶುಕ್ರವಾರದ 10 ಬೆಳವಣಿಗೆಗಳು]

ಒನ್ ಇಂಡಿಯಾ ಕನ್ನಡ 'ಡಿವೈಎಸ್‌ಪಿ ಆತ್ಮಹತ್ಯೆ : ಆರೋಪ ಹೊತ್ತಿರುವ ಮಿನಿಸ್ಟರ್ ಕೆಜೆ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆ?' ಎಂದು ಓದುಗರನ್ನು ಪ್ರಶ್ನಿಸಿತ್ತು. ಈ ಪ್ರಶ್ನೆಗೆ 2 ಸಾವಿರಕ್ಕೂ ಅಧಿಕ ಜನರು ಫೇಸ್‌ ಬುಕ್‌ನಲ್ಲಿ ಕಮೆಂಟ್ ಮೂಲಕ ಉತ್ತರಿಸಿದ್ದಾರೆ. 498 ಜನರು Oneindia Kannada ಫೇಸ್‌ ಬುಕ್ ಪೇಜ್‌ನಿಂದ ಇದನ್ನು ಷೇರ್ ಮಾಡಿದ್ದಾರೆ. [ಗಣಪತಿ ಆತ್ಮಹತ್ಯೆ : ಯಾರು, ಏನು ಹೇಳಿದರು?]

ನಾವು ನೀಡಿದ್ದ ಆಯ್ಕೆಗಳು : 'ಡಿವೈಎಸ್‌ಪಿ ಆತ್ಮಹತ್ಯೆ : ಆರೋಪ ಹೊತ್ತಿರುವ ಮಿನಿಸ್ಟರ್ ಕೆಜೆ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆ?'

ಎ) ಹೌದು, ಖಂಡಿತ ದಾಖಲಿಸಬೇಕು
ಬಿ) ಬೇಡ, ಅವರೇನು ತಪ್ಪು ಮಾಡಿದ್ದಾರೆ?
ಸಿ) ಅವರನ್ನು ಸಂಪುಟದಿಂದ ಕಿತ್ತು ಬಿಸಾಡಲಿ

kj george

ಕಮೆಂಟ್ ಮಾಡಿ ಉತ್ತರ ನೀಡಿದವರಿಗೆ ಒನ್ ಇಂಡಿಯಾ ಧನ್ಯವಾದ ಅರ್ಪಿಸುತ್ತದೆ. ಈ ಪ್ರಶ್ನೆಗೆ ಬಂದ ಪ್ರಮುಖ ಕಮೆಂಟ್‌ಗಳು ಹೀಗಿವೆ.....

* Praveen Naik : ಹೌದು, ಖಂಡಿತ ದಾಖಲಿಸಬೇಕು. ನಿಷ್ಟಾವಂತ ಅಧಿಕಾರಿಗಳನ್ನ ಬಲಿ ತೆಗೆದು ಕೊಳ್ಳುತಿರುವ ಇಂಥವರಿಗೆ ತಕ್ಕ ದಂಡನೆಯಾಗಬೇಕು.

* Shanmukh Shetty : ಸರ್, ನಮ್ಮ CM ಸಿದ್ರಾಮಯ್ಯಾ ಕೆಳಗೆ ಇಳಿಯೋವರಗು ನಮ್ಮ ರಾಜ್ಯ ಉದ್ದಾರ ಆಗೋದಿಲ್ಲ
ಎಲ್ಲೆಡೆ ಕೋಮು ಗಲಭೆ-ಕೊಲೆ, ರಾಜು-ಕುಟ್ಟಪ್ಪ ಹತ್ಯೆ, ಮಂತ್ರಿಗಳ ದರ್ಪ-ಭ್ರಷ್ಟಾಚಾರ, ಸಾವಿರಾರು ರೈತರ ಆತ್ಮಹತ್ಯೆ, ಮಲ್ಲಿಕಾರ್ಜುನ ಬಂಡೆ-ಜಗದೀಶ್ ರಂತಹ ದಿಟ್ಟ ಅಧಿಕಾರಿಗಳ ಕಗ್ಗೊಲೆ, ಡಿಕೆ ರವಿ-ಕಲ್ಲಪ್ಪ-ಗಣಪತಿಯಂತಹ ಆಫೀಸರ್ ಗಳಿಗೆ ಕಿರುಕುಳ-ಆತ್ಮಹತ್ಯೆ, ತುಳಸಿ-ಶಿಖಾ-ಅನುಪಮಾ ರಂತಹ ದೊಡ್ಡ ದೊಡ್ಡ ಅಧಿಕಾರಿಗಳಿಗೆ ಹಿಂಸೆ. ರಾಜ್ಯದ ಜನರು ನಮ್ಮ ರಾಜಕಾರಣಿಗಳಿಗೆ ಚಪ್ಪಲಿ ಸೇವೆ ಮಾಡುವ ಕಾಲ ದೂರವಿಲ್ಲ. ನಾಚಿಕೆಯಾಗಬೇಕು...

* Shilpi Chidanand : ಏನ್ ಕಿಸ್ತರೂ ಆಗಲ್ಲಾ ಬಿಡ್ರೀ......ಡಿಕೆ ರವಿ ಕೇಸನ್ನೇ ಮುಚ್ಚಿದ ಮೇಲೆ ಇದೇನು ದೊಡ್ಡ ದು ಇಂಥವ್ರಿಗೆ.

* Ganesh Kulal : ದೇಶದ ರಕ್ಷಣೆ ಬಗ್ಗೆ ಅಷ್ಟೆಲ್ಲಾ ಮಾತನಾಡುವ ನಾವು, ಯಾವತ್ತಾದರೂ ರಾಜ್ಯದ ಗೃಹ ಖಾತೆಯಂತಹ ಮಹತ್ವದ ಜವಾಬ್ದಾರಿ ಹೊತ್ತಿದ್ದ ಕೆಜೆ ಜಾರ್ಜ್ ಅನ್ನೋ ವ್ಯಕ್ತಿಯ ಪೂರ್ವಾಪರದ ಬಗ್ಗೆ ಗಂಭೀರವಾಗಿ ಯೋಚಿಸಿದ್ದೇವೆಯಾ.? ಕೇವಲ ಹದಿನೈದಿಪ್ಪತ್ತು ವರ್ಷಗಳ ಹಿಂದೆ ಕೇರಳದಿಂದ ಕೊಡಗಿಗೆ ಟಿಂಬರ್ ವ್ಯಾಪರಕ್ಕೆಂದು ಬಂದ ಮಲೆಯಾಳಿ ಮಾಡಿದ್ದೆಲ್ಲವೂ ಅಕ್ರಮಗಳೇ.

ಕೊಡಗಿನ ಕಾಡಿನಲ್ಲಿ ಕದ್ದು ಮರ ಕಡಿದು ಕಡಿದೇ ನಾನೂರು ಎಕರೆ ತೋಟ ಮಾಡಿದ ನಂತರ ಆತನ ಕಬಂಧ ಬಾಹು ಚಾಚಿದ್ದು ಬೆಂಗಳೂರಿನ ಕಡೆಗೆ. ಅಲ್ಲಿ ಮರಳು ಮಾಫಿಯಾ, ರಿಯಲ್ ಎಸ್ಟೇಟ್ ದಂಧೆ, ಕೆರೆ ಒತ್ತುವರಿ ಅಂತಾ ಸಾವಿರಾರು ಕೋಟಿ ಲೂಟಿ ಹೊಡೆದ. ಇವತ್ತಿಗೆ ಅವನ ಅಪಾರ್ಟ್ ಮೆಂಟ್, ವಾಣಿಜ್ಯ ಕಟ್ಟಡಗಳಿಂದ ಬರುವ ಬಾಡಿಗೆಯೇ ತಿಂಗಳಿಗೆ ಕೋಟಿ ದಾಟುತ್ತದೆ. ಇಂಥಾ ಲೂಟಿಕೋರನಿಗೆ ಗೃಹ ಖಾತೆಯಂತಾ ಮಹತ್ವದ ಜವಾಬ್ದಾರಿ ನೀಡಿ ಇಟಲಿಯಮ್ಮ ಕರ್ನಾಟಕದ ಸಭ್ಯ ರಾಜಕಾರಣಕ್ಕೆ ಕೊನೇ ಮೊಳೆ ಹೊಡೆದು ಬಿಟ್ಟಳು.

* Anand Kumar G A : ಮೊದಲು ಮೂರು ಜನರ ಮೇಲೆ ೧೦೬ ಐಪಿಸಿ ಅಡಿ ಪ್ರಕರಣ ದಾಖಲಿಸಬೇಕು. ಅದರೆ ದೊಡ್ಡ ಮಟ್ಟದವರು ಪ್ರಕರಣವನ್ನು ಮುಚ್ಚಿಹಾಕುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇಲ್ಲಿ ಸತ್ತ ಪೊಲೀಸ್ ಅಧಿಕಾರಿಗೆ ನ್ಯಾಯ ಖಂಡಿತ ಸಿಗುವುದಿಲ್ಲ. ನೈತಿಕತೆ ಇದ್ದರೆ ಅವರೇ ರಾಜೀನಾಮೆ ನೀಡಬೇಕು.

* Krishna Yashas Yes : proper investigation is needed.but I am worried that when the currupt govt closed dk ravi case that they can do the same now.feeling sad.

* Rajunaik Naik : ಮೊದಲು ಕೇಸ್ ದಾಖಲಿಸಿ .ಈ ಮಲೆಯಾಳಿ ಸಚಿವನನ್ನು ಸಚಿವ ಸಂಪುಟದಿಂದ ಹೊರಗಟ್ಟಿ. ಮತ್ತು ಜೈಲಿಗಟ್ಟಿ.

* ಅಭಿಷೇಕ್ ಅಭಿ : ಹೌದು FIR ದಾಖಲಿಸಬೇಕು... IAS DK ರವಿ ಅವರ ಕೊಲೆ ಅಪರಾಧದಲ್ಲಿ KJ George ಅವರ ಹೆಸರು ಕೂಡ ಕೇಳಿ ಬಂದಿತ್ತು... ಅದೇ ರೀತಿಯಾಗಿ ಇದರಲ್ಲೂ ಕೂಡ ಅವರದೇ ಮೇಲು ಗೈ ಇದೆ ಅದ್ರಿಂದ ಅವರ ಮೇಲೆ FIR ದಾಖಲಿಸಬೇಕು... Dysp Ganapathi ಅವರು death note ಪ್ರಕಾರ ಅವರ ಹಿರಿಯ ಮೇಲಧಿಕಾರಿ ಹಾಗೂ ರಾಜಕೀಯ ಒತ್ತಡ ಹೆಚ್ಚಾಗಿತ್ತು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

* Thippesh Thippesh ಸಿಬಿಐ ತನಿಖೆಗೆ ಒಳಪಡಿಸಿ ಎಲ್ಲಾ ಸಂಬಂಧಗಳು ಬಯಲಾಗುತ್ತವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru Deputy Superintendent of Police (DySP) M.K. Ganapathi committed suicide July 7, 2016. Should FIR be filed against Minister K.J.Goerge in the case, Here are the public opinion report.
Please Wait while comments are loading...