ಹೆಣ್ಮಕ್ಕಳಿಗೆ ಉಚಿತ ಪ್ರಯಾಣ ಖುಷಿ ತಂದಿದೆ ಎಂದ ಶೋಭಾ ಕರಂದ್ಲಾಜೆ: ಇದಕ್ಕೆ ಕಾಂಗ್ರೆಸ್‌ ಹೇಳಿದ್ದೇನು?

ಬೆಂಗಳೂರು, ಜೂನ್‌ 10: ಕಾಂಗ್ರೆಸ್‌ ಸರ್ಕಾರ ಹೆಣ್ಮಕ್ಕಳ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದು ಖುಷಿ ತಂದಿದೆ. ಅವರಿಗೆ ಒಳ್ಳೆಯದಾಗಲಿ‌. ಮಹಿಳೆಯರು ಉಚಿತವಾಗಿ ಪ್ರವಾಸ ಮಾಡಬಹುದು‌, ಬೇರೆ ಕಡೆ ಹೋಗಬಹುದು ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ನಮ್ಮ ಯೋಜನೆಗಳೇ ಹಾಗೆ, ವಿರೋಧಿಗಳೂ ವಿರೋಧಿಸಲಾಗದೆ ಮೆಚ್ಚಲೇಬೇಕು ಎಂದು ಟ್ವೀಟ್‌ ಮಾಡಿದೆ.

Shobha Karandlaje promotes free bus travel scheme

'ಕಾಂಗ್ರೆಸ್ ಯೋಜನೆಗಳೇ ಹಾಗೆ, ವಿರೋಧಿಗಳೂ ವಿರೋಧಿಸಲಾಗದೆ ಮೆಚ್ಚಲೇಬೇಕು. ಉಚಿತ ಪ್ರಯಾಣದ ಮೂಲಕ ನಾಡಿನ ಹೆಣ್ಣುಮಕ್ಕಳ ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಬದುಕಿಗೆ ಅನುಕೂಲ ಮಾಡಿಕೊಡಲಿದೆ ನಮ್ಮ ಸರ್ಕಾರ. ದುಡಿಯುವ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ, ಈ ಮೂಲಕ ಸ್ತ್ರೀ ಸಬಲೀಕರಣದ ಮಹತ್ತರ ಹೆಜ್ಜೆಯಾಗಲಿದೆ' ಎಂದೂ ಕಾಂಗ್ರೆಸ್‌ ಹೇಳಿದೆ.

ಕರ್ನಾಟಕದಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ನೀಡುವ ಐದು ಚುನಾವಣಾ ಖಾತರಿಗಳಲ್ಲಿ ಮೊದಲನೆಯ 'ಶಕ್ತಿ' ಯೋಜನೆ ಅನುಷ್ಠಾನಕ್ಕೆ ವೇದಿಕೆ ಸಿದ್ಧಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಮಧ್ಯಾಹ್ನ 1 ಗಂಟೆಗೆ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಉಪಸ್ಥಿತರಿರಲಿದ್ದಾರೆ.

Shobha Karandlaje promotes free bus travel scheme

'ನಾವು ಐದು ಗ್ಯಾರಂಟಿಗಳಲ್ಲಿ ಒಂದನ್ನು ವಿಧಾನಸೌಧದಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಾರಂಭಿಸುತ್ತಿದ್ದೇವೆ. ಎಕ್ಸ್‌ಪ್ರೆಸ್ ಬಸ್ ಸೇವೆಗಳು ಸೇರಿದಂತೆ ಎಸಿ ಮತ್ತು ವೋಲ್ವೋ ಹೊರತುಪಡಿಸಿ ಎಲ್ಲಾ (ರಾಜ್ಯ ಸ್ವಾಮ್ಯದ) ಬಸ್‌ಗಳಲ್ಲಿ ಎಲ್ಲಾ ಮಹಿಳೆಯರು ಉಚಿತವಾಗಿ ರಾಜ್ಯದೊಳಗೆ ಪ್ರಯಾಣಿಸಲು ಅರ್ಹರಾಗಿರುತ್ತಾರೆ' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಹಿಳೆಯರು ಅಂತರರಾಜ್ಯ ಬಸ್‌ನಲ್ಲಿ ಪ್ರಯಾಣಿಸಲು ಬಯಸಿದರೆ ಸೇವೆಯು ಉಚಿತವಲ್ಲ, ಮಹಿಳೆ ತಿರುಪತಿಗೆ ಹೋಗಲು ಬಯಸಿದರೆ, ಅವರು ಉಚಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಕರ್ನಾಟಕದ ಗಡಿಯೊಳಗೆ ಎಲ್ಲಿ ಬೇಕಾದರೂ ಮಹಿಳೆ ಉಚಿತವಾಗಿ ಪ್ರಯಾಣಿಸಬಹುದು ಎಂದು ಅವರು ತಿಳಿಸಿದ್ದಾರೆ.

ಇತರ ನಾಲ್ಕು ಖಾತರಿಗಳ ಬಿಡುಗಡೆಯ ದಿನಾಂಕಗಳನ್ನು ವಿವರಿಸಿದ ಮುಖ್ಯಮಂತ್ರಿಗಳು, 200 ಉಚಿತ ಯೂನಿಟ್ ವಿದ್ಯುತ್ ನೀಡುವ 'ಗೃಹ ಜ್ಯೋತಿ' ಯೋಜನೆಯನ್ನು ಜುಲೈ 1 ರಿಂದ ಕಲಬುರಗಿಯಲ್ಲಿ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಅದೇ ದಿನ ಮೈಸೂರಿನಿಂದ ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಉಚಿತ ಅಕ್ಕಿ ಅಥವಾ ಆಹಾರ ಧಾನ್ಯ ನೀಡುವ 'ಅನ್ನ ಭಾಗ್ಯ' ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

'ಗೃಹ ಲಕ್ಷ್ಮಿ' ಯೋಜನೆಯನ್ನು (ಮನೆಯ ಮುಖ್ಯಸ್ಥ ಮಹಿಳೆಗೆ ಮಾಸಿಕ ₹ 2,000 ಆರ್ಥಿಕ ನೆರವು) ಆಗಸ್ಟ್ 15 ರಂದು ಬೆಳಗಾವಿಯಿಂದ ಪ್ರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+