'ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಕೊಟ್ರೆ ತಪ್ಪೇನು..! ಸಚಿವರ ಸಮರ್ಥನೆ, ಜನಾಕ್ರೋಶ
ಹುಬ್ಬಳ್ಳಿ, ನವೆಂಬರ್ 12: ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಯ್ದೆಯಲ್ಲಿ ತಿದ್ದು ಮಾಡಿ, ಸಿವಿಲ್ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮಿಸಲಾತಿ ನೀಡಬೇಕು ಎಂದು ಹೇಳಿದ್ದರು. ಆಕ್ರೋಶ ಹೆಚ್ಚಾಗುತ್ತಿದ್ದಂತೆ ಅಂತಹ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿಬಿಟ್ಟಿದೆ. ಇದೀಗ ಸರ್ಕಾರದ ಈ ಧರ್ಮಾಧಾರಿತ ನಿರ್ಧಾರವನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಹೌದು, ಅಲ್ಪಸಂಖ್ಯಾತ ಗುತ್ತಿದಾರರಿಗೆ ರಾಜ್ಯದ ಕಾಮಗಾರಿಗಳಲ್ಲಿ ಮೀಸಲಾತಿಗೆ ನೀಡದರೆ ತಪ್ಪೇನು ಎಂದು ಸಕ್ಕರೆ ಸಚಿವ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು ಸಮರ್ಥಿಸಿಕೊಂಡಿದ್ದಾರೆ.

ಮಂಗಳವಾರ ಹುಬ್ಬಳ್ಳಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಗುತ್ತಿದಾರರಿಗೆ ಮೀಸಲಾತಿ ಕೊಟ್ಟರೆ ತಪ್ಪೇನು. ಮೀಸಲಾತಿ ಕೇಳೋದು ಎಲ್ಲರ ಹಕ್ಕಾಗಿದೆ. ಎಲ್ಲ ಸಮುದಾಯಕ್ಕೂ ಮೀಸಲಾತಿ ಕೇಳುವ ಹಕ್ಕು ಇದೆ ಆರ್ಥಿಕವಾಗಿ ಹಿಂದುಳಿರುವ ಸಮುದಾಯಕ್ಕೆ ಮೀಸಲಾತಿ ನೀಡಿದರೆ ತಪ್ಪೇನಿಲ್ಲ, ಎಂದ ಅವರು ಹಿಂದೂಗಳಲ್ಲಿ ಸಹ ಬಡವರ ಇದ್ದಾರೆ ಎಂದು ಸಬೂಬು ಹೇಳಿದರು.
ಲಿಂಗಾಯತರು ಸಹ ಮೀಸಲಾತಿ ಕೇಳುತ್ತಿದ್ದಾರೆ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳು ಮೀಸಲಾತಿ ಕೇಳುತ್ತಿವೆಒಟ್ಟಾರೆ ದೇಶದಲ್ಲಿ ಬಡವರ ಸಂಖ್ಯೆ ಜಾಸ್ತಿ ಇದೆ. ಗೊಲ್ಲ ಸಮುದಾಯ ಎಸ್‌ಸಿ ನೂ ಅಲ್ಲ, ಎಸ್ಟಿ ಅಲ್ಲಾ ಅಂತಹ ಸಮುದಾಯವನ್ನು ನೋಡಬೇಕು. ರಾಜಕೀಯವಾಗಿ ಹಿಂದೂ- ಮುಸ್ಲಿಂ ಅಂತ ಮಾತನಾಡುತ್ತಾ ನಾವು ಅವರು ವೈರಿಗಳು ಎನ್ನುವ ಮನಸ್ಥಿತಿಗೆ ಬಂದಿದ್ದೇವೆ ಎಂದರು.
ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರು ಮೀಸಲಾತಿ ಕೇಳಬಹುದು ಎಂದ ಅವರು ಆದರೆ ಅದನ್ನು ರಾಜಕೀಯ ಮಾಡಬಾರದು ಎಂದು ಹೇಳಿದರು.
ಮುಸ್ಲಿಮರಿಗೆ ಮೀಸಲಾತಿ ಚಿಂತನೆ ನಾಚೀಕೇಡು: ಬಿಜೆಪಿ ಶಾಸಕ
ಇನ್ನೂ ಹುಬ್ಬಳ್ಳಿಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ, ಬಿಜೆಪಿ ಶಾಸಕ ಮಹೇಶ್ ಟೆಂಗಿನ ಕಾಯಿ ಅವರು, ಮೀಸಲಾತಿ ನೀಡಲು ಸರ್ಕಾರ ನಡೆಸಿರುವ ಚಿಂತನೆ, ಸಿಎಂ ಸೂಚನೆಯು ನಾಚೀಕೇಡು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಈ ಹಿಂದೆ ಏನು ಮಾಡಿದ್ದೀತಿ. ಹಳೆ ಹುಬ್ಬಳ್ಳಿಯ ಗಲಿಭೆ ಪ್ರಕರಣದಲ್ಲಿ ಅಮಾಯಕರು ಎನ್ನುತ್ತಾರೆ ಅವರ ಮೇಲಿನ ಪ್ರಕರಣ ವಾಪಸ್ ಪಡೆಯುತ್ತಾರೆ.
ಇನ್ನೂ ಅನೇಕ ಕಡೆಗಳಲ್ಲಿನ ಪ್ರಕರಣದಲ್ಲಿ ಅವರ ಪರವಾಗಿ ಸರ್ಕಾರ ನಿಲ್ಲುತ್ತದೆ. ಆದರೆ ಈಗ ನಾಳೆ ರಾಜ್ಯದ ಮೂರು ಉಪ ಚುನಾವಣೆ ಸಂದರ್ಭದಲ್ಲಿ ಈ ರೀತಿ ಬಳಕೆ ಸರಿಯಲ್ಲ. ಅಲ್ಪಸಂಖ್ಯಾತರ ತುಷ್ಟೀಕರಣ ಪರಮೋಚ್ಚ ಸ್ಥಾನಕ್ಕೆ ಹೋಗಿದೆ. ನಿಮ್ಮದೇ ಆದ ಶಾಸಕರು ತಮ್ಮ ಬಗ್ಗೆ ಏನು ಮಾತನಾಡುತ್ತಿದ್ದಾರೆ. ಇತ್ತ ಭ್ರಷ್ಟಾಚಾರವು ತಾಂಡವವಾಡುತ್ತಿದ್ದು, ಮುಖ್ಯಮಂತ್ರಿಗಳು ಶೀಘ್ರವೇ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ತಿದ್ದುಪಡಿಗೆ ಸೂಚಿಸಿ, ಪ್ರಸ್ತಾವನೆ ಇಲ್ಲವೆಂದು ಸ್ಪಷ್ಟನೆ
ಸಿಎಂ ಸಿದ್ದಾಮಯ್ಯ ಅವರು ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿಗೆ ಸೂಚನೆ ನೀಡಿದ್ದರು. ಬಳಿಕ ಧರ್ಮಾಧಾರಿತವಾಗಿ ಮೀಸಲಾತಿ, ಒಂದು ಧರ್ಮಕ್ಕೆ ಸೀಮೀತವಾಗಿ ಸರಿಯಲ್ಲ ಎಂಬ ಚರ್ಚೆ ಜೋರಾಗಿ ನಡೆಯಿತು. ಉಪ ಚುನಾವಣೆ ಮೊದಲ ಇಂತಹ ನಿರ್ಧಾರ ಪ್ರಕಟಿಸಿದ್ದು, ಇದರ ಮೇಲಿನ ಗಂಭೀರ ಚರ್ಚೆಗಳು ರಾಜ್ಯ ಸರ್ಕಾರವನ್ನು ಧರ್ಮ ಸಂಕಷ್ಟಕ್ಕೆ ಸಿಲುಕಿತು. ಇದೆಲ್ಲ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಸಿಎಂ ಗೃಹ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ. ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಬೇಕೆಂಬ ಬೇಡಿಕೆ ಇದೇ. ಆದರೆ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ತಿಳಿಸಿತು.












Click it and Unblock the Notifications