ಶಿಡ್ಲಘಟ್ಟ ಪಕ್ಷೇತರ ಅಭ್ಯರ್ಥಿ ತೀವ್ರ ಅಸ್ವಸ್ಥ ಐಸಿಯುಗೆ ದಾಖಲು

ಚಿಕ್ಕಬಳ್ಳಾಪುರ, ಮೇ 12: ಶಿಡ್ಲಘಟ್ಟ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಾಸಕ ರಾಜಣ್ಣ ಅವರು ಮತದಾನದ ದಿನ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥವಾಗಿದ್ದು ಐಸಿಯುಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು 10 ಗಂಟೆ ಸುಮಾರಿಗೆ ತೀವ್ರ ಎದೆನೋವಿನಿಂದ ಕುಸಿದ ಅವರನ್ನು ಅವರ ಬೆಂಬಲಿಗರು ಶಿಡ್ಲಘಟ್ಟದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆರೋಗ್ಯ ಸ್ಥಿತಿ ವಿಷಮಗೊಂಡಿದ್ದ ಕಾರಣ ಅವರನ್ನು ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಶಾಸಕ ರಾಜಣ್ಣ ಅವರು ಕಳೆದ ಬಾರಿ ಜೆಡಿಎಸ್‌ ನಿಂದ ಗೆದ್ದು ಬಂದಿದ್ದರು ಆದರೆ ಈ ಬಾರಿ ಅವರು ಟಿಕೆಟ್ ವಂಚಿತರಾಗಿದ್ದಾರೆ. ಎರಡು ಬಾರಿ ಬಿ-ಫಾರಂ ದೊರೆತಿದ್ದರೂ ಸಹ ಕೊನೆ ಗಳಿಗೆಯಲ್ಲಿ ಅವರ ಬಿ-ಫಾರಂ ಅನ್ನು ರದ್ದು ಮಾಡಿ ಮೇಲೂರು ಬಿ.ಎನ್.ರವಿಕುಮಾರ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿತ್ತು.

Shidlaghatta Indipendent candidate suddenly ill, tranferd to ICU

ಕುಮಾರಸ್ವಾಮಿ ಅವರು ರಾಜಣ್ಣ ಅವರಿಗೆ ಅಭಯ ನೀಡಿ ಪಕ್ಷೇತರವಾಗಿ ಸ್ಪರ್ಧಿಸುವಂತೆ ತಿಳಿಸಿದ್ದರು, ಅದರಂತೆ ರಾಜಣ್ಣ ಅವರು ಪಕ್ಷೇತರವಾಗಿ ಸ್ಪರ್ಧಿಸಿ ಪ್ರಚಾರ ಕೈಗೊಂಡಿದ್ದರು ಆದರೆ ಬದಲಾದ ಸನ್ನಿವೇಶದಲ್ಲಿ ನಿನ್ನೆ ಕುಮಾರಸ್ವಾಮಿ ಅವರು ಶಿಢ್ಲಘಟ್ಟದ ಜನ ರವಿಕುಮಾರ್ ಅವರಿಗೆ ಬೆಂಬಲ ನೀಡಬೇಕು ವಿಡಿಯೋ ಮೂಲಕ ಸಂದೇಶ ನೀಡಿದ್ದರು ಇದರಿಂದ ರಾಜಣ್ಣ ಅವರು ತೀವ್ರ ನಿರಾಶೆ ಅನುಭವಿಸಿದ್ದರು ಎನ್ನಲಾಗಿದೆ.

Shidlaghatta Indipendent candidate suddenly ill, tranferd to ICU

ಶಿಢ್ಲಘಟ್ಟ ಮತ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ ಇದ್ದು, ರಾಜಣ್ಣ ಅವರು ಜೆಡಿಎಸ್‌ ಸೋಲಿಗೆ ಟೊಂಕಕಟ್ಟಿದ್ದಾರೆ ಎನ್ನಲಾಗುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+