ಉಗ್ರರ ವಿರುದ್ಧ ಹೋರಾಡಲು ಅವಕಾಶ ಕೊಡಿ: ಮೋದಿಗೆ ಬಿದರಿ ಮನವಿ
ಬೆಂಗಳೂರು, ಫೆಬ್ರವರಿ 15: ಉಗ್ರರ ಹುಟ್ಟಡಗಿಸಲು ನನಗೆ ಅವಕಾಶ ಕೊಡಿ ನನ್ನನ್ನು ಕಾಶ್ಮೀರಕ್ಕೆ ಕಳುಹಿಸಿ ಕೊಡಿ ಎಂದು ಮಾಜಿ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಅವರು ಪ್ರಧಾನಿ ಮೋದಿಗೆ ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.
ನನಗೆ 64 ವರ್ಷ ವಯಸ್ಸು. ನೀವು ಈಗಲೂ ನನಗೆ ಅವಕಾಶ ಕೊಟ್ರೆ ನಾನು ಜಮ್ಮು-ಕಾಶ್ಮೀರಕ್ಕೆ ತೆರಳಿ ಅಲ್ಲಿನ ಉಗ್ರ ಸಂಘಟನೆ ವಿರುದ್ಧ ಹೋರಾಡುತ್ತೇನೆ ಎಂದು ಶಂಕರ್ ಬಿದರಿ ಅವರು ಟ್ವೀಟ್ ಮಾಡಿದ್ದಾರೆ.
ಆ ಪ್ರದೇಶದಲ್ಲಿನ ಭಯೋತ್ಪಾದನೆಯನ್ನು ಅಳಿಸಿ ಹಾಕಲು ಸಿದ್ಧನಿದ್ದೇನೆ. ಈ ಕಾರ್ಯಾಚರಣೆಯಲ್ಲಿ ನನ್ನ ಜೀವ ಹೋದರೂ ಪರವಾಗಿಲ್ಲ, ನನ್ನನ್ನು ಕಳುಹಿಸಿಕೊಡಿ ಎಂದು ಬಿದರಿ ಮೋದಿ ಅವರನ್ನು ಮನವಿ ಮಾಡಿದ್ದಾರೆ.

ಶಂಕರ್ ಬಿದರಿ ಅವರ ಟ್ವೀಟ್ ಇದೀಗ ವೈರಲ್ ಆಗಿದ್ದು, ನಿವೃತ್ತ ಪೊಲೀಸ್ ಅಧಿಕಾರಿಯ ಕೆಚ್ಚು, ಧೈರ್ಯ, ಹೋರಾಟದ ಹುಮ್ಮಸ್ಸು, ದೇಶಪ್ರೇಮವನ್ನು ಟ್ವಿಟ್ಟರ್ ಹಾಡಿ ಹೊಗಳಿದ್ದಾರೆ.
ಶಂಕರ್ ಬಿದರಿ ಅವರು ಕರ್ನಾಟಕದಲ್ಲಿ ಐಜಿ-ಡಿಜಿಪಿ ಆಗಿ ಕೆಲಸ ಮಾಡಿದ್ದರು. ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ತಂಡದ ನೇತೃತ್ವವನ್ನು ಅವರು ವಹಿಸಿಕೊಂಡಿದ್ದರು. ಅವರು ಸೇವೆಯಿಂದ ನಿವೃತ್ತರಾಗಿ ಕೆಲವು ವರ್ಷಗಳಾಗಿವೆ.












Click it and Unblock the Notifications