Get Updates
Get notified of breaking news, exclusive insights, and must-see stories!

ಕರ್ನಾಟಕದ ಮುಂದಿನ ಸಿಎಸ್‌ ಆಗಿ ಶಾಲಿನಿ ರಜನೀಶ್ ನೇಮಕ?

ಬೆಂಗಳೂರು, ಜೂನ್ 07: ಕರ್ನಾಟಕದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್‌ ನೇಮಕಗೊಳ್ಳುವ ನಿರೀಕ್ಷೆ ಇದೆ. ಹಾಲಿ ಮುಖ್ಯ ಕಾರ್ಯದರ್ಶಿಯಾಗಿರುವ ರಜನೀಶ್ ಗೋಯೆಲ್ ಅವಧಿ ಜುಲೈ 31ಕ್ಕೆ ಅಂತ್ಯಗೊಳ್ಳಲಿದೆ.

1986ರ ಬ್ಯಾಚ್‌ನ ಐಎಎಸ್ ಅಧಿಕಾರಿ ರಜನೀಶ್ ಗೋಯೆಲ್ ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇವರ ಪತ್ನಿ ಶಾಲಿನಿ ರಜನೀಶ್‌ ಹೆಸರು ಮುಂದಿನ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕೇಳಿ ಬರುತ್ತಿದೆ.

Shalini Rajneesh May Appoint As Next Chief Secretary Of Karnataka

ಜೇಷ್ಠತೆಯ ಆಧಾರದ ಮೇಲೆ ಶಾಲಿನಿ ರಜನೀಶ್‌, ಅಜಯ್ ಸೇಠ್ ಹೆಸರು ಇದೆ. ಇಬ್ಬರ ಪೈಕಿ ಶಾಲಿನಿ ರಜನೀಶ್ ಅವರೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸುವ ಸಾಧ್ಯತೆ ಇದೆ. ಮುಖ್ಯ ಕಾರ್ಯದರ್ಶಿ ನೇಮಕದ ಕುರಿತು ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.

ಉನ್ನತ ಹುದ್ದೆಯಲ್ಲಿ ದಂಪತಿಗಳ ಕಾರ್ಯ: ಕರ್ನಾಟಕದ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್‌ ನೇಮಕಗೊಂಡರೆ ರಾಜ್ಯದ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ ದಂಪತಿ ಎಂಬ ಹೆಗ್ಗಳಿಕೆ ಶಾಲಿನಿ ರಜನೀಶ್ ಮತ್ತು ರಜನೀಶ್ ಗೋಯೆಲ್ ಅವರದ್ದಾಗಲಿದೆ.

1989ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಮತ್ತು ಅಜಯ್ ಸೇಠ್‌ ಹೆಸರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕೇಳಿ ಬರುತ್ತಿದೆ. ಶಾಲಿನಿ ರಜನೀಶ್ ಅವರು 2027ರ ಜೂನ್ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ. ಸುದೀರ್ಘ ಅಧಿಕಾರ ಅವಧಿ ಇರುವ ಅಧಿಕಾರಿಯನ್ನು ನೇಮಕ ಮಾಡಿದರೆ ಆಡಳಿತ ಯಂತ್ರ ಸುಗಮವಾಗಿ ಸಾಗಲು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರವೂ ಇದೆ.

ಜೇಷ್ಠತೆಯ ಆಧಾರದ ಮೇಲೆ ಅಜಯ್ ಸೇಠ್‌ ಹೆಸರು ಕೇಳಿ ಬರುತ್ತಿದೆ. ಪ್ರಸ್ತುತ ಅವರು ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿದ್ದಾರೆ. ಅವರ ಅಧಿಕಾರಾವಧಿ 2025ರ ಜೂನ್‌ಗೆ ಮುಕ್ತಾಯಗೊಳ್ಳಲಿದೆ.

ರಾಷ್ಟ್ರಮಟ್ಟದ ಮಹತ್ವದ ಹುದ್ದೆಗಳಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ವ್ಯವಹಾರ ಕಾರ್ಯದರ್ಶಿ ಹುದ್ದೆಯೂ ಒಂದು. ಆದ್ದರಿಂದ ಅಂತಹ ಹುದ್ದೆಯನ್ನು ಬಿಟ್ಟು 11 ತಿಂಗಳ ಅವಧಿಗೆ ಅಜಯ ಸೇಠ್‌ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಲು ಬಯಸುವರೇ? ಎಂಬುದು ಪ್ರಶ್ನೆ.

ರಾಜ್ಯ ಸರ್ಕಾರದ ಮಹತ್ವದ ಹುದ್ದೆಯಾದ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಈ ಹಿಂದೆ ಬಿ. ಕೆ. ಭಟ್ಟಾಚಾರ್ಯ ಹಾಗೂ ತೆರೇಸಾ ಭಟ್ಟಾಚಾರ್ಯ ದಂಪತಿ ಕಾರ್ಯ ನಿರ್ವಹಣೆ ಮಾಡಿದ್ದರು. ಈಗ ಶಾಲಿನಿ ರಜನೀಶ್ ಮುಖ್ಯ ಕಾರ್ಯದರ್ಶಿಯಾದರೆ ರಜನೀಶ್ ಗೋಯಲ್ ಮತ್ತು ಶಾಲಿನಿ ರಜನೀಶ್ ದಂಪತಿ ಮಹತ್ವದ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದಂತೆ ಆಗಲಿದೆ.

2023ರ ನವೆಂಬರ್‌ನಲ್ಲಿ ರಜನೀಶ್ ಗೋಯಲ್ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡರು. ವಂದಿತಾ ಶರ್ಮಾ ಅವರು ಸೇವಾ ನಿವೃತ್ತಿ ಹೊಂದಿದ ಮೇಲೆ ರಜನೀಶ್ ಗೋಯಲ್ ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು, ಅವರು ಅಧಿಕಾರವಹಿಸಿಕೊಂಡರು.

ರಜನೀಶ್ ಗೋಯಲ್ 1986ರ ಆ.25ರಂದು ಐಎಎಸ್ ಸೇವೆಗೆ ಸೇರಿದರು. ರಜನೀಶ್ ಗೋಯಲ್ ನೇಮಕವಾಗುವ ಸಂದರ್ಭದಲ್ಲಿ ವಿ. ಮಂಜುಳಾ, ಅಜಯ್ ಸೇಠ್, ಡಾ. ಇ. ವಿ. ರಮಣ ರೆಡ್ಡಿ, ಅನಿಲ್ ಕುಮಾರ್ ಝಾ ಜೇಷ್ಠತಾ ಪಟ್ಟಿಯಲ್ಲಿದ್ದರು. ಆದರೆ ಸರ್ಕಾರ ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+