ರಾಷ್ಟೀಯ ಹೆದ್ದಾರಿಯಾಗಲಿರುವ ರಾಜ್ಯದ 7 ರಸ್ತೆಗಳು
ಬೆಂಗಳೂರು, ಜೂ.26 : ಕೇಂದ್ರದ ಯುಪಿಎ ಸರ್ಕಾರದಲ್ಲಿ ಭೂ ಸಾರಿಗೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡೀಸ್ ಅವರು ರಾಜ್ಯದ ಏಳು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಅಂಗೀಕಾರ ನೀಡಿದ್ದಾರೆ. ಒಟ್ಟು 1668.03 ಕಿ.ಮೀ. ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿದೆ.
ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಈ ಕುರಿತು ಮಾಹಿತಿ ನೀಡಿದ್ದು, ಮೇಲ್ದರ್ಜೆಗೆ ಏರಿಸಲು ಅನುಮತಿ ನೀಡಿದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿಯನ್ನು ಆರು ಪಥದ ರಸ್ತೆಯಾಗಿ ಪರಿವರ್ತಿಸುವ ಕಾಮಗಾರಿಗೆ ಸಹ ಒಪ್ಪಿಗೆ ದೊರೆತಿದೆ.

ಪರಿವರ್ತನೆಯಾಗಲಿರುವ ಹೆದ್ದಾರಿಗಳು : ಎನ್ಎಚ್ 161 : 260.81 ಕಿ.ಮೀ.ಉದ್ದದ ಈ ಮಾರ್ಗ ಬೀದರ್- ಹುನ್ಮಾಬಾದ್-ಗುಲ್ಬರ್ಗ-ಜೇವರ್ಗಿ-ಬಿಜಾಪುರ-ಹೊಸಪೇಟೆ ಮೂಲಕ ಹಾದು ಹೋಗಲಿದೆ. ಎನ್ಎಚ್ 50 : ಜೇವರ್ಗಿ-ಸಿರಗುಪ್ಪ-ಬಳ್ಳಾರಿ-ಹಿರಿಯೂರು-ಚಿಕ್ಕನಾಯಕನಹಳ್ಳಿ-ನಾಗಮಂಗಲ-ಶ್ರೀರಂಗಪಟ್ಟಣ-ಮೈಸೂರು ಈ ಮಾರ್ಗ 618.82 ಕಿ.ಮೀ.ಉದ್ದವಿದೆ. 73 ಕಿ.ಮೀ.ಉದ್ದರ ಮೂಡಿಗೆರೆ-ಚಿಕ್ಕಮಗಳೂರು ಮಾರ್ಗ. [ಆರು ಪಥವಾಗಲಿದೆ ಬೆಂಗಳೂರು-ಮೈಸೂರು ಹೆದ್ದಾರಿ]
367.46 ಕಿ.ಮೀಗಳ ಬಂಟ್ವಾಳ-ಪುತ್ತೂರು-ಸುಳ್ಯ-ಮಡಿಕೇರಿ-ಪಿರಿಯಾಪಟ್ಟಣ-ಮೈಸೂರು-ಶ್ರೀರಂಪಟ್ಟಣ-ಮಂಡ್ಯ-ರಾಮನಗರ-ಬೆಂಗೂರು ಎನ್ಎಚ್75. 156.62 ಕಿ.ಮೀ.ಉದ್ದ ಬನಾಪುರ-ಕುಕ್ಕನೂರು-ಯಲಬುರ್ಗ-ಗಜೇಂದ್ರಗಡ-ಬಾದಾಮಿ-ಗುಳೇದಗುದ್ದ-ಬಾಗಲಕೋಟೆಯ ಎನ್ಎಚ್ 67 ಮಾರ್ಗ. 104.80 ಕಿ.ಮೀ.ಗಳ ಗುಲ್ಬರ್ಗ-ಚೌದಾಪುರ-ಅಫ್ಜಲ್ ಪುರ-ಸೋಲ್ಲಾಪುರ ಮಾರ್ಗ ಎನ್ಎಚ್ 50. ತೀರ್ಥಹಳ್ಳಿ-ಆಗುಂಬೆ-ಹೆಬ್ರಿ-ಉಡುಪಿ ನಡುವಿನ 87.60 ಕಿ.ಮೀ.ಉದ್ದದ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. [ಭಾರತದ ಹೆದ್ದಾರಿಗಳು ಹಾಗೂ ವಾಜಪೇಯಿ ಕನಸು]
ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತುಮಕೂರು ಮತ್ತು ಶಿವಮೊಗ್ಗ ನಡುವಿನ 203 ಕಿ.ಮೀ.ರಸ್ತೆಯಲ್ಲಿ ನಾಲ್ಕು ಪಥವಾಗಿ ಪರಿವರ್ತನೆ ಮಾಡುವಂತೆಯೂ ಮನವಿ ಮಾಡಿದ್ದಾರೆ.












Click it and Unblock the Notifications