Elephants: ಕರ್ನಾಟಕದಲ್ಲಿ ಏಳು ತಿಂಗಳಲ್ಲಿ ಏಳು ಆನೆ ಸಾವು

ಬೆಂಗಳೂರು, ಜುಲೈ 18: ಕರ್ನಾಟಕದಲ್ಲಿ ಆನೆಗಳ ಅಸಹಜ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರಸ್ತಕ ವರ್ಷದಲ್ಲಿ ಕಳೆದ ಏಳು ತಿಂಗಳಲ್ಲಿ ಏಳು ಆನೆಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿವೆ ಎಂದು ವರದಿ ಆಗಿದೆ.

ದೇಶದಲ್ಲಿಯೇ ಅತ್ಯಧಿಕ ಆನೆಗಳು ಕರ್ನಾಟಕದಲ್ಲಿವೆ ಎಂಬುದು ಹೆಮ್ಮೆಯ ಸಂಗತಿ. ಆದರೆ ಸದ್ಯದ ವಿಚಾವೇನೆಂದರೆ, ವರ್ಷದಿಂದ ವರ್ಷಕ್ಕೆ ಆನೆಗಳು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯ. 2023ರ ಜನವರಿಯಿಂದ ಈವರೆಗಿನ ಏಳು ತಿಂಗಳಲ್ಲಿ ಆನೆಗಳು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಸಂಗತಿ ಬೆಳಕಿಗೆ ಬಂದಿದೆ. ಈ ಮೂಲಕ ಕರ್ನಾಟಕ ಹೆಚ್ಚು ಆನೆಗಳ ಸಾವಿಗೆ ಕಾರಣವಾಗಿದೆ.

Seven Elephants Have Been Electrocuted In Karnataka Since January 2023

ಈ ಏಳು ಆನೆಗಳು ಸೇರಿದಂತೆ ಇತ್ತೀಚಿನ ದಿನಗಳಲ್ಲಿಯೇ ಸುಮಾರು 20 ಆನೆಗಳ ಸಾವಾಗಿದೆ ಎಂದು ತಿಳಿದು ಬಂದಿದೆ. ಕೆಲವು ಎನ್‌ಜಿಒ ಸಂಸ್ಥೆಗಳು ಆನೆಗಳನ್ನು ರಕ್ಷಿಸುತ್ತಿವೆ. ಅರಣ್ಯ ವ್ಯಾಪ್ತಿಯಲ್ಲಿ ಬೆಳೆಗಳ ರಕ್ಷಣೆಗೆ ಹೊಲಗಳ ಸುತ್ತಲೂ ಹೀಗೆ ವಿದ್ಯುತ್ ಅಳವಡಿಸುವುದು ಸಾಮಾನ್ಯ. ಅದರಲ್ಲೂ ಆನೆ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರೈತರು ರಕ್ಷಣೆಗೆ ಇಂತಹ ಮಾರ್ಗ ಅನುಸರಿಸುವುದು ಅನಿವಾರ್ಯವಾಗಿರುತ್ತದೆ.

ಅರಣ್ಯ ಇಲಾಖೆ, ಪಂಚಾಯತ್, ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿ ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿದೆ. ಇವರ ಅಡಿ ವಿದ್ಯುತ್ ಕಳ್ಳತನವನ್ನು ನಿಯಂತ್ರಣದಲ್ಲಿಡುವುದು ಮತ್ತು ಆನೆಗಳನ್ನು ರಕ್ಷಿಸಲು ಸಮಿತಿಯನ್ನು ರೂಪಿಸುವ ಹಿಂದಿನ ಚಿಂತನೆ ಆಗಿತ್ತು.

2022 ರಲ್ಲಿ 17 ಆನೆ ಸಾವು

ಗಮನಿಸಬೇಕಾದ ಅಂಶವೆಂದರೆ ಕಳೆದ ಇದೇ ಅವಧಿಯಲ್ಲಿ ಅಂದರೆ 2022ರ ಜನವರಿ ಮತ್ತು ಜೂನ್ ವರೆಗೆ 17 ಆನೆಗಳು ಸಾವನ್ನಪ್ಪಿವೆ ಮತ್ತು ಕೇವಲ ಎರಡು ವಿದ್ಯುದಾಘಾತ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಜನವರಿ ಮತ್ತು ಜೂನ್ 2021 ರ ನಡುವೆ, 32 ಸಾವುಗಳು ವರದಿಯಾಗಿದ್ದರೆ, ಕೇವಲ ಎರಡು ಆನೆಗಳು ವಿದ್ಯುತ್ ಆಘಾತದಿಂದ ಸಾವನ್ನಪ್ಪಿವೆ.

Seven Elephants Have Been Electrocuted In Karnataka Since January 2023

ಕರ್ನಾಟಕದ ಮೈಸೂರು ಸುತ್ತಮುತ್ತಲಿನ ಪ್ರದೇಶ, ಚಾಮರಾಜನಗರ, ಕೊಡಗು, ಮಡಿಕೇರಿ ಹಾಗೂ ಇನ್ನಿತರ ಭಾಗಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿರುತ್ತದೆ. ಈ ಆನೆಗಳಿಗೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಆದರೆ ಮನುಷ್ಯರಿಗಿಂತ ಆನೆಗಳು ಸಾವಿನ ಪ್ರಮಾಣ ಹೆಚ್ಚಿದೆ. ಮೂಕ ಜೀವಗಳು ವಿದ್ಯುತ್ ಸ್ಪರ್ಶ ಹಾಗೂ ಇನ್ನಿತರ ಕಾರಣಗಳಿಂದ ಅಹಸಜವಾಗಿ ಸಾವನ್ನಪ್ಪುತ್ತಿವೆ.

ಆನೆಗಳ ಸಾವನ್ನ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಅರಣ್ಯ ಇಲಾಖೆ (ಕೆಎಫ್‌ಡಿ), ಆನೆಗಳ ವಿದ್ಯುದಾಘಾತ ಸಮಸ್ಯೆಯಾಗಿ ಇಲಾಖೆಯು ಹೆಣಗಾಡುತ್ತಿರುವಾಗ, ಅಂತಹ ಘಟನೆಗಳನ್ನು ನಿಯಂತ್ರಣದಲ್ಲಿಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+