ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ದು. ನಮ್ಮ ಹುಡುಗರು, ಹುಡುಗಿಯರು ಪರೀಕ್ಷೆ ಬರೀತಾಯಿದಾರೆ

ಯುಗಾದಿ ಹಬ್ಬದ ಮರು ದಿನ ಗುರುವಾರ 8.77 ಲಕ್ಷ 10ನೇ ತರಗತಿ ವಿದ್ಯಾರ್ಥಿಗಳು, 2,770 ಪರೀಕ್ಷಾ ಕೇಂದ್ರಗಳಲ್ಲಿ ಪಬ್ಲಿಕ್ ಪರೀಕ್ಷೆ ಬರೆಯಲಿದ್ದಾರೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 30: ಇಂದಿನಿಂದ (ಗುರುವಾರ) 8.77 ಲಕ್ಷ 10ನೇ ತರಗತಿ ವಿದ್ಯಾರ್ಥಿಗಳು 2,770 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಸಾರ್ವಜನಿಕ ಮಾಹಿತಿ ಆಯುಕ್ತೆ ಸೌಜನ್ಯ ಮತ್ತು ಕೆಎಸ್ಇಇಬಿ ನಿರ್ದೇಶಕಿ ಯಶೋದಾ ಬೋಪಣ್ಣ ಪರೀಕ್ಷೆಯ ವಿವರಗಳ ಮಾಹಿತಿ ನೀಡಿದರು.[ಮಾರ್ಚ್ 30ರಿಂದ ಏಪ್ರಿಲ್ 12ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ]

ಪರೀಕ್ಷೆ ಬರೆಯಲಿರುವ ಒಟ್ಟು 8.77 ಲಕ್ಷ ವಿದ್ಯಾರ್ಥಿಗಳಲ್ಲಿ 4.69 ಲಕ್ಷ ಬಾಲಕರು ಹಾಗೂ 4.07 ಲಕ್ಷ ಬಾಲಕಿಯರಾಗಿದ್ದಾರೆ.

ನಿಯಮ ಕೈಬಿಟ್ಟ ಇಲಾಖೆ

ಆರಂಭದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪರೀಕ್ಷೆಗೆ 5 ನಿಮಿಷ ತಡವಾಗಿ ಬಂದರೂ ಪರೀಕ್ಷಾ ಕೊಠಡಿಗೆ ಪ್ರವೇಶ ನಿಷೇಧ ಎಂಬ ಸುತ್ತೋಲೆ ಹೊರಡಿಸಿತ್ತು. ಆದರೆ ವಿದ್ಯಾರ್ಥಿಗಳು ಮತ್ತು ಪೋಷಕರ ತೀವ್ರ ಒತ್ತಡದಿಂದಾಗಿ ನಿಯಮ ಕೈಬಿಟ್ಟಿದ್ದು 15 ನಿಮಿಷ ತಡವಾಗಿ ಬಂದರೂ ಪರೀಕ್ಷಾ ಕೊಠಡಿಗೆ ಪ್ರವೇಶ ಅವಕಾಶ ಕಲ್ಪಿಸಿದೆ. 9.30 ಕ್ಕೆ ಪರೀಕ್ಷೆ ಆರಂಭವಾಗಲಿದ್ದು 9.45ರ ವರೆಗೂ ಕೊಠಡಿಗೆ ವಿದ್ಯಾರ್ಥಿಗಳು ಬರಬಹುದು.[ಎಸ್ಸೆಸ್ಸೆಲ್ಸಿ ಪರೀಕ್ಷೆ, ಜಾಗೃತದಳದವರಿಗೂ ಮೊಬೈಲ್ ಫೋನ್ ನಿಷೇಧ]

ಪರೀಕ್ಷಾ ಕೇಂದ್ರಗಳು

ಪರೀಕ್ಷಾ ಕೇಂದ್ರಗಳು

ಸೂಕ್ಷ್ಮ - 72

ಅತೀ ಸೂಕ್ಷ್ಮ - 17

ಸರಕಾರಿ ಶಾಲೆಗಳು - 1,092

ಅನುದಾನಿತ ಶಾಲೆಗಳು - 1,084

ಖಾಸಗಿ ಶಾಲೆಗಳು - 594

ಒಟ್ಟು - 2,770

ವಿದ್ಯಾರ್ಥಿಗಳು- ನಗರ

ವಿದ್ಯಾರ್ಥಿಗಳು- ನಗರ

ಬಾಲಕರು - 2,02,707

ಬಾಲಕಿಯರು - 1,87,625

ಗ್ರಾಮೀಣ
ಬಾಲಕರು - 2,67,128

ಬಾಲಕಿಯರು - 2,19,714
ಒಟ್ಟು - 8,77,174

ನಕಲು ತಡೆಯಲು ಬಿಗಿ ಭದ್ರತೆ

ನಕಲು ತಡೆಯಲು ಬಿಗಿ ಭದ್ರತೆ

40 ಸಿಸಿಟಿವಿ ಕ್ಯಾಮೆರಾಗಳನ್ನು ಕೆಎಸ್ಇಇಬಿ ಕಚೇರಿಯಲ್ಲಿ ಅಳವಡಿಸಲಾಗಿದೆ. 30 ಜಿಲ್ಲಾ ಖಜಾನೆಗಳಲ್ಲೂ ಸಿಸಿಟಿವಿ ಅಳವಡಿಸಲಾಗಿದೆ. ದಿನದ 24 ಗಂಟೆಯೂ ಖಜಾನೆಗಳಿಗೆ ಭದ್ರತೆ ಒದಗಿಸಲಾಗಿದೆ. ಇನ್ನು 2,770 ಪರೀಕ್ಷಾ ಕೇಂದ್ರಗಳಲ್ಲಿ 1,184 ಕಡೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಈ ಮೂಲಕ ಪರೀಕ್ಷಾ ಅಕ್ರಮಗಳನ್ನು ತಡೆಯಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಬುಕ್ ಲೆಟ್ ಇಲ್ಲ

ಬುಕ್ ಲೆಟ್ ಇಲ್ಲ

ಹಿಂದಿನ ವರ್ಷದ ವರೆಗೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ಒಳಗೊಂಡ ಬುಕ್ ಲೆಟ್ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳು ಇದರಲ್ಲೇ ಉತ್ತರ ಬರೆಯಬೇಕಾಗಿತ್ತು. ಆದರೆ ಈ ಬಾರಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯನ್ನು ಬೇರೆ ಬೇರೆಯಾಗಿ ನೀಡಲಾಗುತ್ತದೆ. ಪರೀಕ್ಷೆ ಬರೆದು ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಮನೆಗೆ ಕೊಂಡೊಯ್ಯಬಹುದು.

ಸಹಾಯವಾಣಿ

ಸಹಾಯವಾಣಿ

ಎಸ್ಎಸ್ಎಲ್ಸಿ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಪರೀಕ್ಷಾ ದಿನಗಳಲ್ಲಿ ಮಧ್ಯಾಹ್ನ 2.30ರವರೆಗೆ ಈ ಸಹಾಯವಾಣಿ ಕಾರ್ಯಾಚರಿಸಲಿದೆ. ಸಹಾಯವಾಣಿ ಸಂಖ್ಯೆ 080-23310075, 76.

ಉಚಿತ ಬಸ್ ಪಾಸ್

ಉಚಿತ ಬಸ್ ಪಾಸ್

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ತಲುಪಲು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ನಿರ್ವಾಹಕರಿಗೆ ತಮ್ಮ ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತೆರಳುವ ವ್ಯವಸ್ಥೆಯನ್ನು ಮಾಡಲಾಗಿದೆ.

English summary
Totall 8.77 lakh students will appear for the SSLC examination beginning on Thursday in 2,770 examination centres across Karnataka. Among the 8.77 lakh candidates, 4.69 lakh are boys, while 4.07 lakh are girls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X