ಓದಲು, ಬರೆಯಲು ಗೊತ್ತಿಲ್ಲ.. ಆದ್ರೂ SSLCಯಲ್ಲಿ 97% ಅಂಕ ಪಡೆದ ಜವಾನ.!-ಹೇಗೆ ಸಾಧ್ಯ?-ಮಾಹಿತಿ
SSLC Result 2024: ವಯಸ್ಕರು ಕೂಡ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಬರೆದು ಸಾಧನೆ ಮಾಡಿದ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಜವಾನನಿಗೆ ಓದಲು, ಬರೆಯಲು ಗೊತ್ತಿಲ್ಲ. ಆದರೂ ಎಸ್‌ಎಸ್‌ಎಲ್‌ಸಿಯಲ್ಲಿ ಶೇಕಡ 99ರಷ್ಟು ಅಂಕ ಗಳಿಸಿ ಗಮನ ಸೆಳೆದಿದ್ದಾರೆ. ಹಾಗಾದರೆ ಅವರ ಹಿನ್ನೆಲೆ ಏನು ಹಾಗೂ ಈ ಸಾಧನೆ ಹೇಗೆ ಸಾಧ್ಯ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 99.7ರಷ್ಟು ಅಂಕಗಳನ್ನು ಗಳಿಸಿದ್ದ 23 ವರ್ಷದ ಪ್ರಭು ಲಕ್ಷ್ಮೀಕಾಂತ್ ಲೋಕರೆ ಎಂಬ ಜವಾನನಿಗೆ ಓದಲು ಅಥವಾ ಬರೆಯಲು ಬರುವುದಿಲ್ಲ ಎಂದು ಅಂತಾ ಕನ್ನಡ ನ್ಯೂಸ್ ವರದಿ ಮಾಡಿದೆ. ಇನ್ನು ಇದರ ಬಗ್ಗೆ ಸ್ಪಷ್ಟನೆ ನೀಡುವಂತೆ ತನಿಖೆಯನ್ನು ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೊಪ್ಪಳ ಜಿಲ್ಲೆಯ ಸ್ಥಳೀಯ ನ್ಯಾಯಾಲಯದಲ್ಲಿ ಜವಾನನಾಗಿ ಕೆಲಸ ಪಡೆದರು. ಮೂಲಗಳ ಪ್ರಕಾರ, ಲೋಕರೆ ಅವರ 10ನೇ ತರಗತಿಯ ಅಂಕಗಳ ಆಧಾರದ ಮೇಲೆ ಜವಾನರ ನೇಮಕಾತಿ ಪರೀಕ್ಷೆಯ ಅಂತಿಮ ಮೆರಿಟ್ ಪಟ್ಟಿಯಲ್ಲಿ ಏಪ್ರಿಲ್ 22, 2024ರಂದು ಅವರ ಹೆಸರು ಕಾಣಿಸಿಕೊಂಡಾಗ ಅವರನ್ನು ಕೆಲಸಕ್ಕೆ ಆಯ್ಕೆ ಮಾಡಲಾಯಿತು. ಲೋಕರೆ ಅವರ ಶೈಕ್ಷಣಿಕ ದಾಖಲೆಗಳ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.
ಲೋಕರೆ ಅವರು ಓದಲು ಮತ್ತು ಬರೆಯಲು ಒದ್ದಾಡುತ್ತಿದ್ದಾರೆ ಅಂತಾ ನ್ಯಾಯಾಲಯದ ನ್ಯಾಯಾಧೀಶರು ಗಮನಿಸಿದ್ದು, ಲೋಕರೆ ಅವರ ಶೈಕ್ಷಣಿಕ ದಾಖಲೆಯ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಧೀಶರು ಅಂತಿಮವಾಗಿ ಪೊಲೀಸರಿಗೆ ಖಾಸಗಿ ದೂರು ದಾಖಲಿಸಿದರು.
ಈ ಪ್ರಕರಣದಲ್ಲಿ ಏಪ್ರಿಲ್ 26ರಂದು ಎಫ್‌ಐಆರ್ ದಾಖಲಿಸಲಾಗಿದ್ದು, ಲೋಕರೆ 7ನೇ ತರಗತಿಯ ನಂತರ ನೇರವಾಗಿ 10ನೇ ತರಗತಿ ಪರೀಕ್ಷೆಯಲ್ಲಿ ಭಾಗವಹಿಸಿ 625ರಲ್ಲಿ 623 ಅಂಕಗಳನ್ನು ಗಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಇನ್ನು ಅವರ ಅನುಕರಣೀಯ ಶೈಕ್ಷಣಿಕ ಸಾಧನೆಯ ಹೊರತಾಗಿಯೂ, ಅವರು ಕನ್ನಡ, ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಓದಲು ಅಥವಾ ಬರೆಯಲು ಸಾಧ್ಯವಿಲ್ಲ. ಇದು ಅವರ ರುಜುವಾತುಗಳ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಆದ್ದರಿಂದ ನ್ಯಾಯಾಧೀಶರು ತನಿಖೆಗೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications