ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಸರ್ವ್ ಬ್ಯಾಂಕ್ ಆಫ್ ಕೈಲಾಸ: ಸ್ವಾಮಿ ನಿತ್ಯಾನಂದನ ಹೊಸ ಘೋಷಣೆ

|
Google Oneindia Kannada News

ಬೆಂಗಳೂರು, ಆ 18: ಹಸು ಬಾಯಿಯಿಂದ ತಮಿಳು, ಸಂಸ್ಕೃತ ಮಾತನಾಡಿಸುತ್ತೇನೆ ಎಂದು ಹೇಳಿದ್ದ ಬಿಡದಿಯ ಸ್ವಾಮಿ ನಿತ್ಯಾನಂದ, ಹೊಸ ಬ್ಯಾಂಕ್ ಅನ್ನು ತೆರೆಯುವುದಾಗಿ ಘೋಷಣೆ ಮಾಡಿದ್ದಾರೆ.

Recommended Video

Israel ಒಪ್ಪಂದದ ಬಗ್ಗೆ UAE ಮೇಲೆ ದಾಳಿ ಮಾಡುವುದಾಗಿ Iran ಬೆದರಿಕೆ ಹಾಕಿದೆ | Oneindia Kannada

ಹೊಸ ಬ್ಯಾಂಕಿಗೆ 'ರಿಸರ್ವ್ ಬ್ಯಾಂಕ್ ಆಫ್ ಕೈಲಾಸ'ಎಂದು ಹೆಸರಿಟ್ಟಿದ್ದು, ಬ್ಯಾಂಕಿನ ಕರೆನ್ಸಿ ಮತ್ತು ಇತರ ನಿಯಮಗಳನ್ನು ಗಣೇಶ ಚತುರ್ಥಿಯ ದಿನದಂದು ಪ್ರಕಟಿಸುವುದಾಗಿ ನಿತ್ಯಾನಂದ ಹೇಳಿದ್ದಾರೆ.

ಕೊರೊನಾಕ್ಕೆ ಕಿಕ್ ಕೊಡಲು ನಿತ್ಯಾನಂದನಿಂದ ಪಚ್ಚೈ ಪತ್ತಿನಿ ವೃತ ಆರಂಭ!ಕೊರೊನಾಕ್ಕೆ ಕಿಕ್ ಕೊಡಲು ನಿತ್ಯಾನಂದನಿಂದ ಪಚ್ಚೈ ಪತ್ತಿನಿ ವೃತ ಆರಂಭ!

"ಹೊಸ ಬ್ಯಾಂಕಿಗೆ ಸಂಬಂಧಿಸಿದ ಎಲ್ಲಾ ರೂಪುರೇಷೆಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಮುನ್ನೂರು ಪೇಜಿನ ಡಾಕ್ಯುಮೆಂಟ್ ಅನ್ನು ಸಿದ್ದಪಡಿಸಲಾಗಿದ್ದು, ಹೊಸ ಬ್ಯಾಂಕಿಗೆ ಸಂಬಂಧಿಸಿದ ಪಾಲಿಸಿಗಳೂ ಇದರಲ್ಲಿದೆ" ಎಂದು ನಿತ್ಯಾನಂದ ಹೇಳಿದ್ದಾರೆ.

Self-styled godman Nithyananda sets up a bank called Reserve Bank of Kailasa

"ರಿಸರ್ವ್ ಬ್ಯಾಂಕ್ ಆಫ್ ಕೈಲಾಶದ ಹೊಸ ಕರೆನ್ಸಿಯನ್ನು ಆಂತರಿಕವಾಗಿ ಮತ್ತು ವಿಶ್ವದ ಇತರ ಭಾಗದಲ್ಲಿ ಹೇಗೆ ಬಳಸಬೇಕು ಎನ್ನುವುದರ ಬಗ್ಗೆಯೂ ಪಾಲಿಸಿ ರೂಪಿಸಲಾಗಿದೆ" ಎಂದು ನಿತ್ಯಾನಂದ ಪ್ರಕಟಿಸಿದ್ದಾರೆ.

ವಿಡಿಯೋ ಮೂಲಕ ಈ ವಿಷಯವನ್ನು ತಿಳಿಸಿರುವ ಸ್ವಾಮಿ ನಿತ್ಯಾನಂದ, "ರಿಸರ್ವ್ ಬ್ಯಾಂಕ್ ಮತ್ತು ಸರಕಾರದ ಅನುಮತಿಯನ್ನು ಪಡೆದು, ಕಾನೂನಾತ್ಮಕವಾಗಿಯೇ ಈ ಬ್ಯಾಂಕ್ ಅನ್ನು ತೆರೆಯಲಾಗುತ್ತಿದೆ" ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ.

ಪ್ರಾಣಿಗಳಿಗೂ ಧ್ವನಿಶಾಸ್ತ್ರವನ್ನು ಕಲಿಸುವ ಸಾಫ್ಟ್ ವೇರ್ ಅನ್ನು ಅಭಿವೃದ್ದಿ ಪಡಿಸಲಾಗುತ್ತಿದ್ದು, ಇನ್ನೊಂದು ವರ್ಷದಲ್ಲಿ ಅದನ್ನು ಹೊರತರುವುದಾಗಿ ನಿತ್ಯಾನಂದ ಹೇಳಿ ಎರಡು ವರ್ಷಗಳಾಗಿ ಹೋಗಿದೆ.

English summary
Self-styled godman Nithyananda sets up a bank called Reserve Bank of Kailasa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X