Special Train: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: 04 ವಿಶೇಷ ರೈಲುಗಳು ಸಂಚಾರ, ವೇಳಾಪಟ್ಟಿ ವಿವರ
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, ದಕ್ಷಿಣ ಮಧ್ಯ ರೈಲ್ವೆ (SCR) ಸಿಕಂದರಾಬಾದ್ ಮತ್ತು ಮೈಸೂರು ಮತ್ತು ಚರ್ಲಪಲ್ಲಿ ಮತ್ತು ಕಾಕಿನಾಡ ಪಟ್ಟಣ ನಡುವೆ ವಿಶೇಷ ರೈಲುಗಳನ್ನು ಕಾರ್ಯಾಚರಣೆ ಮಾಡಲು ಮುಂದಾಗಿದೆ. ಈ ಮಧ್ಯೆ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಸಿಕಂದರಾಬಾದ್ ರೈಲ ಅನ್ನು ಬೀದರ್, ಕಲಬುರಗಿ ಮಾರ್ಗವಾಗಿ ಓಡಿಸುವಂತೆ ಹಾಗೂ ದೈನಂದಿನ ರೈಲು ಸಂಚಾರಕ್ಕೆ ಅನುಮೋದನೆ ನೀಡಬೇಕೆಂಬ ಒತ್ತಾಯ ಸಹ ಜೋರಾಗಿದೆ.
ಸ್ವಾತಂತ್ರೋತ್ಸವ 2025 ಹಾಗೂ ಗಣೇಶ ಚತುರ್ಥಿ ಹಬ್ಬ ಹಿನ್ನೆಲೆಯಲ್ಲಿ ಈ ತಿಂಗಳು ಸಾಲು ಸಾಲು ರಜೆಗಳು ಇವೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಸಿಕಂದರಾಬಾದ್ - ಮೈಸೂರು ಮತ್ತು ಚರ್ಲಪಲ್ಲಿ - ಕಾಕಿನಾಡ ಪಟ್ಟಣ ನಡುವೆ ವಿಶೇಷ ರೈಲುಗಳ ಸಂಚರಿಸಲಿವೆ. ಅವುಗಳ ವೇಳಾಪಟ್ಟಿ ಇಲ್ಲಿದೆ.

ರೈಲುಗಳ ವಿವರ, ದಿನಾಂಕ, ವೇಳಾಪಟ್ಟಿ
* ಸಿಕಂದರಾಬಾದ್ - ಮೈಸೂರು ಎಕ್ಸ್‌ಪ್ರೆಸ್ ರೈಲು (07033) ವಾರದಲ್ಲಿ ಎರಡು ದಿನ ಸೋಮವಾರ ಮತ್ತು ಶುಕ್ರವಾರ ಸಂಚರಿಸುತ್ತದೆ. 22:10 ಗಂಟೆ ಹೊರಟು, ಮರುದಿನ 16:00 ಗಂಟೆಗೆ ತಲುಪುತ್ತದೆ. ಈ ರೈಲು ಆಗಸ್ಟ್ 08 ರಿಂದ 29 ರವರೆಗೆ ಓಡಾಡಲಿದೆ.
* ಮೈಸೂರು-ಸಿಕಂದರಾಬಾದ್ ಎಕ್ಸ್‌ಪ್ರೆಸ್ ರೈಲು (07034) ಮಂಗಳವಾರ ಮತ್ತು ಶನಿವಾರ ಸಂಚರಿಸಲಿದ್ದು, 17:20 ಗಂಟೆಗೆ ನಿರ್ಗಮಿಸಿ, ಮರುದಿನ 11:00 ಗಂಟೆಗೆ ಆಗಮಿಸಲಿದೆ. ಈ ರೈಲು ಆಗಸ್ಟ್ 09ರಿಂದ ಆಗಸ್ಟ್ 30ರವರೆಗೆ ಕಾರ್ಯಚರಣೆ ಮಾಡಲಿದೆ.
ನಿಲುಗಡೆ ನಿಲ್ದಾಣಗಳು ಯಾವುವು?
ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್, ತಾಂಡೂರು, ಸೇಡಂ, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯ ರಸ್ತೆ, ಆದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ಬೆಂಗಳೂರು ಕ್ಯಾಂಟ್., ಕೆಎಸ್‌ಆರ್ ಬೆಂಗಳೂರು, ಕೆಂಗೇರಿ, ಮಂಡ್ಯ ಮೂಲಕ ಮೈಸೂರು ತಲುಪುತ್ತದೆ.
ಚರ್ಲಪಲ್ಲಿ - ಕಾಕಿನಾಡ ಎಕ್ಸ್‌ಪ್ರೆಸ್ ರೈಲು ವಿವರ
ಆಗಸ್ಟ್ 08ರಂದು ಚರ್ಲಪಲ್ಲಿ - ಕಾಕಿನಾಡ ಎಕ್ಸ್‌ಪ್ರೆಸ್ ರೈಲು (07031) ಶುಕ್ರವಾರ ಒಂದು ದಿನ 19:30 ಗಂಟೆಗೆ ನಿರ್ಗಮಿಸಿ ಮರುದಿನ 09 ಗಂಟೆಗೆ ಆಗಮಿಸುತ್ತದೆ. ಮರಳಿ ಆಗಸ್ಟ್ 10 ಕಾಕಿನಾಡ ಟೌನ್ - ಚರ್ಲಪಲ್ಲಿ ರೈಲು (07032) ಭಾನುವಾರ ಅಲ್ಲಿಂದ 20:10 ಗಂಟೆಗೆ ಹೊರಟು ಮರಳಿ ಮರುದಿನ 08:30 ಗಂಟೆಗೆ ನಿದಗಿತ ನಿಲ್ದಾಣ ತಲುಪುತ್ತದೆ.
ಈ ರೈಲು ನಲ್ಗೊಂಡ, ಮಿರ್ಯಾಲಗುಡ, ಸತ್ತೇನಪಲ್ಲಿ, ಗುಂಟೂರು, ವಿಜಯವಾಡ, ಗುಡಿವಾಡ, ಕೈಕಲೂರು, ಅಕಿವೀಡು, ಭೀಮಾವರಂ ಟೌನ್, ತಣುಕು, ರಾಜಮಂಡ್ರಿ, ಸಮಲ್ಕೋಟ್ ನಲ್ಲಿ ನಿಲುಗಡೆ ನೀಡಲಿದೆ. ಹೆಚ್ಚಿನ ಮಾಹಿತಿಗೆ, ಟಿಕೆಟ್ ಬುಕ್ ಮಾಡಲು IRCTC ವೆಬ್‌ಸೈಟ್ ಸಂಪರ್ಕಿಸಬೇಕು. 139 ಸಹಾಯವಾಣಿಗೂ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications