Rain Alert: ಮಳೆ.. ಮಳೆ.. ಶಾಲಾ & ಕಾಲೇಜುಗಳಿಗೆ ನಾಳೆ ರಜೆ ಘೋಷಣೆ!
ಮಳೆ ಅಬ್ಬರ ಕೈಮೀರಿ ಹೋಗುತ್ತಿದ್ದು, ಕರ್ನಾಟಕದ ಜನರು ಭಾರಿ ಭರ್ಜರಿ ಮಳೆಗೆ ಈಗ ತತ್ತರಿಸಿ ಹೋಗಿದ್ದಾರೆ. ಕೆಲವು ತಿಂಗಳ ಹಿಂದೆ ಮಳೆ ಬರಲಿ ದೇವರೆ ಅಂತಾ ಬೇಡಿಕೊಂಡ ಜನರೇ ಇದೀಗ ಮಳೆ ನಿಂತರೆ ಸಾಕಪ್ಪಾ ಅಂತಾ ಬೇಡುವ ಪರಿಸ್ಥಿತಿ ಬಂದಿದೆ. ಹೀಗಿದ್ದಾಗಲೇ ನಾಳೆ ಕೂಡ ವಿನಾಶಕಾರಿ ಮಳೆ ಬೀಳುವ ಬಗ್ಗೆ ಎಚ್ಚರಿಕೆ ನೀಡಿದ ನಂತರ, ಈ ಜಿಲ್ಲೆಗಳಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಅಂದಹಾಗೆ ಈಗಿನ ಮಾಹಿತಿ ಪ್ರಕಾರ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಭಾಗದಲ್ಲಿ ಹಾಗೇ ಉತ್ತರ ಕನ್ನಡ & ಹಾಸನದ ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರ ತೋರುವುದು ಪಕ್ಕಾ ಆಗಿದೆ. ಇದರ ಜೊತೆಗೆ ಉತ್ತರ ಒಳನಾಡು ಭಾಗದಲ್ಲೂ 2 ದಿನಗಳ ಕಾಲ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ಇದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ಕೂಡ ನೀಡಿದ್ದಾರೆ. ಹೀಗಾಗಿ, ಮುಂದಿನ 2 ದಿನ ಕರ್ನಾಟಕ ಕರಾವಳಿ ಭಾಗದಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಹಾಗಿದ್ರೆ ಇದೀಗ ಶಾಲಾ & ಕಾಲೇಜುಗಳಿಗೆ ರಜೆ ನೀಡಿರುವುದು ಯಾವ ಯಾವ ಜಿಲ್ಲೆಗಳಲ್ಲಿ? ಮಾಹಿತಿಗೋಸ್ಕರ ಮುಂದೆ ಓದಿ.

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ
ಮುಂಗಾರು ಮಳೆ ಅಬ್ಬರ ಜೋರಾದ ಪರಿಣಾಮ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಾಳೆ ರಜೆ ಘೋಷಣೆ ಮಾಡಲಾಗಿದೆ. ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಆಗುತ್ತಿರುವ ಕಾರಣಕ್ಕೆ ಜಿಲ್ಲೆಯ ಕೊಪ್ಪ, ಕಳಸ, ಮೂಡಿಗೆರೆ, ಚಿಕ್ಕಮಗಳೂರು & ಶೃಂಗೇರಿ ತಾಲೂಕಿನ ಅಂಗನವಾಡಿ, ಸರ್ಕಾರಿ & ಖಾಸಗಿ ಪ್ರಾಥಮಿಕ ಶಾಲೆಗಳು & ಪ್ರೌಢ ಶಾಲೆಗಳು ಸೇರಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಜುಲೈ 31 ರಂದು ರಜೆ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಜೆ ಘೋಷಣೆ ಬಗ್ಗೆ ಆದೇಶ ಹೊರಡಿಸಿದ್ದು ಹಾಗೇ ಕೊಡಗು ಜಿಲ್ಲೆಯಲ್ಲೂ ಶಾಲಾ & ಕಾಲೇಜುಗಳಿಗೆ ರಜೆ ನೀಡಲಾಗಿದೆ. ಶಿವಮೊಗ್ಗದಲ್ಲೂ ಭಾರಿ ಮಳೆ ಆಗುತ್ತಿದ್ದು, ಸಾಗರ, ತೀರ್ಥಹಳ್ಳಿ, ಹೊಸನಗರ ತಾಲೂಕುಗಳಲ್ಲೂ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನದಿ & ಜಲಪಾತಗಳ ಬಳಿ ಹೋಗಬೇಡಿ
ಇದಿಷ್ಟೇ ಅಲ್ಲದೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲೂ ಭರ್ಜರಿ ಮಳೆ ಸುರಿಯುವ ಕುರಿತು ಮುನ್ಸೂಚನೆ ಈಗ ಇದ್ದು, ಅಗತ್ಯ ಇರುವ ಕಡೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನದಿ & ಹಳ್ಳಗಳ ಬಳಿ ಯಾರೂ ಸುಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಈಗಾಗಲೇ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳ ಬಳಿ ಎಚ್ಚರಿಕೆ ಬೋರ್ಡ್‌ನ ಅಳವಡಿಸಲಾಗಿದೆ.
ಪ್ರವಾಸಿಗರು ಜಲಪಾತಗಳ ಬಳಿ ಸುಳಿಯದಂತೆ ಆದೇಶ ಹೊರಡಿಸಲಾಗಿದ್ದು, ನಿಯಮಗಳನ್ನು ಮೀರುವವರ ವಿರುದ್ಧ ಕ್ರಮಕ್ಕೆ ಕೂಡ ಆದೇಶ ನೀಡಲಾಗಿದೆ. ಕರ್ನಾಟಕದಲ್ಲಿ ಮುಂಗಾರು ಮಳೆ ಇದೇ ರೀತಿ ಇನ್ನೂ ಕೆಲವು ದಿನಗಳ ಕಾಲ ಅಬ್ಬರಿಸುವ ಸಾಧ್ಯತೆ ದಟ್ಟವಾಗಿದೆ. ಹೀಗೆ 2023 ರಲ್ಲಿ ಬರ ಕರುಣಿಸಿದ್ದ ವರುಣದೇವ ಇದೀಗ 2024 ರಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿ ಭಯ ಹುಟ್ಟಿಸಿದ್ದು ಜನರಲ್ಲಿ ಆತಂಕ ಮೂಡಿಸಿದೆ.












Click it and Unblock the Notifications