5 ದಿನಗಳ ಕಾಲ ಮಳೆ.. ಮಳೆ.. ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... School Holiday

ಮಳೆ ಅಬ್ಬರಿಸುತ್ತಿರುವ ರೀತಿ ನೋಡಿದರೆ ಇನ್ನೂ ಹಲವು ದಿನಗಳ ಕಾಲ ಇದೇ ರೀತಿ ಮಳೆ ಸುರಿಯುತ್ತಾ ಭಾರಿ ದೊಡ್ಡ ಅವಾಂತರ ಸೃಷ್ಟಿ ಆಗುವುದು ಗ್ಯಾರಂಟಿ ಆಗಿದೆ. ಬೇಸಿಗೆ ಸಮಯದಲ್ಲೇ ಭಾರಿ ಮಳೆ ಸುರಿಯುತ್ತಿದ್ದ ಕಾರಣಕ್ಕೆ ಈಗಾಗಲೇ ಕರ್ನಾಟಕದ ಬಹುತೇಕ ಡ್ಯಾಂಗಳು ತುಂಬಿ ತುಳುಕುತ್ತಿವೆ. ಈ ಸಮಯದಲ್ಲಿ ಕೂಡ ಮತ್ತೆ ಭಾರಿ ಜೋರಾಗಿ ಮಳೆ ಸುರಿಯುವ ಮನ್ಸೂಚನೆ ಸಿಕ್ಕಿದೆ. ಅದ್ರಲ್ಲೂ, 5 ದಿನಗಳ ಕಾಲ ಮಳೆ.. ಮಳೆ.. ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ...

ಮಳೆ.. ಮಳೆ.. ಮಳೆ.. ಸಾಕು ನಿಲ್ಲಿಸು ಮಾರಾಯ ನಿನ್ನ ರಗಳೆ.. ಹಿಂಗೆ ಜನರು ಕವಿತೆ ಹೇಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಒಂದೇ ಒಂದು ಬಾರಿ ಜೋರಾಗಿ ಮಳೆ ಬರಲಿ ದೇವರೆ ಅಂತಾ ಬೇಡುತ್ತಿದ್ದ ಜನರೇ ಇದೀಗ ಮಳೆಗೆ ಶಾಪ ಹಾಕಿ ನಿಲ್ಲುವಂತೆ ಬೇಡುವ ಸ್ಥಿತಿ ಎದುರಾಗಿದೆ. ಈಗಾಗಲೇ ಭಾರಿ ಮಳೆ ಕಾರಣ ಎಲ್ಲಾ ಕಡೆ ಕೆರೆ & ಕಟ್ಟೆಗಳು ತುಂಬುವ ಜೊತೆಗೆ ನದಿಗಳು ಕೂಡ ಮೈದುಂಬಿ ಭಾರಿ ಜೋರಾಗಿ ಹರಿಯುತ್ತಿವೆ. ಆದರೆ ಇದೆಲ್ಲವನ್ನೂ ಮೀರಿ ಮತ್ತೆ ಭಾರಿ ಜೋರಾಗಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ.

School Holiday May Announce In Karnataka From July 22 For This Reason

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?

ಕರ್ನಾಟಕದ ಜನರು ಮತ್ತು ಅನ್ನದಾತ ರೈತರು ಮಾನ್ಸೂನ್ ಅಂದ್ರೆ ಮುಂಗಾರು ಮಳೆ ಅವಲಂಬಿಸಿ ಜೀವನ ಬಂಡಿಯನ್ನ ಸಾಗಿಸುತ್ತಾರೆ. ಉತ್ತರ ಕರ್ನಾಟಕ ಇರಲಿ & ದಕ್ಷಿಣ ಕರ್ನಾಟಕ ಇರಲಿ, ಈ ನಮ್ಮ ಕರ್ನಾಟಕಕ್ಕೆ ಮುಂಗಾರು ಮಳೆಯೇ ಆಧಾರ. ಅಕಸ್ಮಾತ್ ಮುಂಗಾರು ಮಳೆ ಕೈಕೊಟ್ಟು ಹೋದರೆ ಪರಿಸ್ಥಿತಿ ಭೀಕರ. ಜನರು ಕೂಡ ಹನಿ ಹನಿ ನೀರಿಗೆ ಒದ್ದಾಡುತ್ತಾರೆ ಎನ್ನಬಹುದು. 2023ರ ಸಮಯದಲ್ಲಿ ಕೂಡ ಮಳೆರಾಯ ಕೈಕೊಟ್ಟು ಮುಂಗಾರು ಮಳೆ ಸುರಿಯಲೇ ಇಲ್ಲ. ಹೀಗಾಗಿಯೇ ಬರ ಆವರಿಸಿತ್ತು, ಆದ್ರೆ 2024ರ ಆರಂಭದಿಂದಲೇ ಭರ್ಜರಿ ಮಳೆ ಸುರಿದು ಕರ್ನಾಟಕದ ಡ್ಯಾಂಗಳು ತುಂಬಿ ತುಳುಕಿವೆ. ಅದೇ ರೀತಿ 2025 ಕೂಡ ಮಳೆ ವಿಚಾರದಲ್ಲಿ ಭಾರಿ ಭರ್ಜರಿ ಅದೃಷ್ಟ ತಂದಿದೆ. ಇದೇ ಸಮಯದಲ್ಲಿ ಅತಿಯಾದ ಮಳೆ ಭಯ ಹುಟ್ಟು ಹಾಕುತ್ತಿದೆ...

ಮಳೆ.. ಮಳೆ.. ಮಳೆ..

ಇದೀಗ ಸಿಕ್ಕಿರುವ ಮಳೆ ಮುನ್ಸೂಚನೆ ಪ್ರಕಾರ, ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ತುಮಕೂರು, ಮಂಡ್ಯ, ಮೈಸೂರು ಭಾಗದಲ್ಲೂ ಭಾರಿ ಮಳೆ ಸುರಿಯಲಿದೆ. ಹಾಗೇ ಚಾಮರಾಜನಗರದ ಜನರಿಗೂ ಮಳೆ ಕಾಟ ತಪ್ಪುವುದಿಲ್ಲ. ಮತ್ತೊಂದು ಕಡೆ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮಳೆ ಸುರಿಯಲಿದೆ. ಇದರ ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಕೂಡ ಭಾರಿ ಮಳೆ ಗ್ಯಾರಂಟಿ ಆಗಿದೆ.

ಹಾಗೇ ಕೋಲಾರ, ಚಿಕ್ಕಬಳ್ಳಾಪುರ ಸೇರಿ ಸುತ್ತಮುತ್ತಲ ಭಾಗದಲ್ಲಿ ಭಾರಿ ಮಳೆ ಬೀಳಲಿದೆ. ಇನ್ನು ಬೆಳಗಾವಿ, ಹುಬ್ಬಳ್ಳಿ & ಧಾರವಾಡ ಸೇರಿದಂತೆ ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರಗಿ, ಗದಗ, ಬೀದರ್‌ ಬಳ್ಳಾರಿ ಜಿಲ್ಲೆಯಲ್ಲಿ ಕೂಡ ಮಳೆರಾಯ ತನ್ನ ಆರ್ಭಟ ತೋರಿಸಲಿದ್ದಾನೆ. ಹೀಗೆ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆರಾಯ ತನ್ನ ಆರ್ಭಟ ತೋರಿಸಲಿರುವ ಕಾರಣಕ್ಕೆ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಯಾವಾಗ ಬೇಕಾದರೂ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಈಗ ದಟ್ಟವಾಗಿದೆ.

ತುಂಬಿ ತುಳುಕುತ್ತಿವೆ ಕರ್ನಾಟಕದ ಡ್ಯಾಂಗಳು...

ಮಳೆ.. ಮಳೆ.. ಮಳೆ.. ಎಲ್ಲೆಲ್ಲೂ ಬರೀ ಮಳೆಯ ಸದ್ದೇ ಕೇಳಿ ಬರುತ್ತಿದ್ದು, ಜನರಿಗೂ ಬೇಸರವಾಗಿದೆ. ಹೌದು, ಕರ್ನಾಟಕ ರಾಜ್ಯದಲ್ಲಿ ಭಾರಿ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಜೂನ್ ತಿಂಗಳಲ್ಲೇ ಈ ಬಾರಿ ಜಲಾಶಯಗಳು ಅಂದ್ರೆ ಡ್ಯಾಂಗಳು ತುಂಬಿ ತುಳುಕಲು ಶುರು ಮಾಡಿವೆ. ಈ ಕಾರಣಕ್ಕೆ ರೈತರು ಹಾಗೂ ಕನ್ನಡ ನಾಡಿನ ಕನ್ನಡಿಗರು ಕೂಡ ಈ ವಿಚಾರದಲ್ಲಿ ಸಖತ್ ಖುಷಿ ಖುಷಿಯಾಗಿದ್ದಾರೆ. ಅದರಲ್ಲೂ, ಬೆಂಗಳೂರಿಗೆ ಕುಡಿಯುವ ನೀರು ನೀಡುವ ಕೃಷ್ಣರಾಜ ಸಾಗರ ಅಂದ್ರೆ ನಮ್ಮ ಕೆಆರ್‌ಎಸ್ ಈಗ ಫುಲ್ ತುಂಬಿ ತುಳುಕುತ್ತಿದ್ದು ತಮಿಳುನಾಡಿಗೆ ಈಗಾಗಲೇ ಸುಮಾರು 100 ಟಿಎಂಸಿ ನೀರು ಜುಲೈ ತಿಂಗಳಲ್ಲಿ ಹರಿದು ಹೋಗಿದೆ. ಇನ್ನು ಗರಿಷ್ಠ 124.80 ಅಡಿ ಇರುವ ಕೆಆರ್‌ಎಸ್ ಜಲಾಶಯ ಪೂರ್ಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+