ಗಾಯದ ಮೇಲೆ ಬರೆ: ತಮಿಳುನಾಡಿಗೆ ನೀರು ಹರಿಸಿ ಎಂದ ಸುಪ್ರೀಂ
ನವದೆಹಲಿ, ಸೆಪ್ಟೆಂಬರ್, 05: ಮುಂದಿನ 10 ದಿನಗಳ ಕಾಲದಲ್ಲಿ 13.5 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಸೋಮವಾರ ನೀಡಿದೆ.
ಅಂದರೆ ಪ್ರತಿದಿನ 15 ಸಾವಿರ ಕ್ಯೂಸೆಕ್ [ ಟಿಎಂಸಿ= 11 574 ಕ್ಯೂಸೆಕ್ಸ್] ನೀರನ್ನು ಕರ್ನಾಟಕ ಹರಿಸಬೇಕಾಗುತ್ತದೆ. ಕಾವೇರಿ ಪಾತ್ರದಿಂದ 50.52 ಟಿಎಂಸಿ ನೀರು ನೀಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ನೀಡಿದೆ.[ನಮಗೇ ನೀರಿಲ್ಲ, ಇನ್ನು ತಮಿಳ್ನಾಡಿಗೆ ಎಲ್ಲಿಂದ ಬಿಡೋಣ?]

ದೀಪಕ್ ಮಿಶ್ರಾ ನೇತೃತ್ವದ ದ್ವಿಸದಸ್ಯ ಪೀಠ ಆದೇಶ ನೀಡಿದ್ದು ರಾಜ್ಯದಲ್ಲಿ ಮತ್ತೊಂದು ಹೋರಾಟಕ್ಕೆ ಕಾರಣವಾಗಬಹುದು. ಸುಪ್ರೀಂ ಕೋರ್ಟ್ ಆದೇಶ ಇದಾಗಿರುವುದರಿಂದ ಕರ್ನಾಟಕ ಅನಿವಾರ್ಯವಾಗಿ ನೀರು ಬಿಡಲೇಬೇಕಾಗುತ್ತದೆ.












Click it and Unblock the Notifications