ಎಸ್ ಬಿಐನಲ್ಲಿ 6425 ಕ್ಲರ್ಕ್ ಹುದ್ದೆಗಳಿವೆ ಅರ್ಜಿ ಹಾಕಿ
ಬೆಂಗಳೂರು, ನ.19: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಹಾಗೂ ತನ್ನ ಜಾಲದಲ್ಲಿರುವ ಇತರೆ ಸ್ಟೇಟ್ ಬ್ಯಾಂಕುಗಳು ಸೇರಿ ಒಟ್ಟಾರೆ 6425 ಕ್ಲರ್ಕ್ ಹುದ್ದೆಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಭಾರತೀಯ ನಾಗರೀಕರು ಅರ್ಜಿಗಳನ್ನು 9/12/2014ರೊಳಗೆ ಆನ್ ಲೈನ್ ಮೂಲಕ ಎಸ್ ಬಿಐಗೆ ತಲುಪಿಸಬಹುದಾಗಿದೆ.
ವಯೋಮಿತಿ: ಅಭ್ಯರ್ಥಿ ವಯಸ್ಸು ಕನಿಷ್ಠ 2೦ ವರ್ಷ ಗರಿಷ್ಠ 28 (1/12/1986)ರಿಂದ 01/10/1994 ರ ಅವಧಿಯಲ್ಲಿ ಜನಿಸಿದವರಾಗಿರಬೇಕು. ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ ರಿಯಾಯಿತಿ ಇದೆ.
ವಿದ್ಯಾರ್ಹತೆ: ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು. ಅಥವಾ ತತ್ಸಮಾನ ಅರ್ಹತೆ ಹೊಂದಿರತಕ್ಕದು.
ಆಯ್ಕೆ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ(ಸಾಮಾನ್ಯ ಜ್ಞಾನ, ಇಂಗ್ಲೀಷ್, ಕಂಪ್ಯೂಟರ್ ಜ್ಞಾನ ಇತ್ಯಾದಿ) ಹಾಗೂ ಸಂದರ್ಶನವಿರುತ್ತದೆ.

ಅರ್ಜಿ ಶುಲ್ಕ: ಅರ್ಜಿ ಶುಲ್ಕ 600 ರು ಸಾಮಾನ್ಯ ಅಭ್ಯರ್ಥಿಗೆ, ಎಸ್ ಸಿ ಎಸ್ಟಿ ಅಭ್ಯರ್ಥಿಗಳಿಗೆ 100 ರು. ಆನ್ ಲೈನ್ ಮೂಲಕ ಹಣ ಪಾವತಿಸಬಹುದು. ಅಥವಾ ನೇರವಾಗಿ ಸ್ಟೇಟ್ ಬ್ಯಾಂಕಿನ ಯಾವುದೇ ಬ್ರ್ಯಾಂಚಿನಲ್ಲಿ ಕಂಪ್ಯೂಟರ್ ಚಲನ್ ಮೂಲಕ ಕಟ್ಟಬಹುದು. [ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಸುದ್ದಿ]
ಅರ್ಜಿ ಸಲ್ಲಿಸುವುದು ಹೇಗೆ?: ಅರ್ಹ ಅಭ್ಯರ್ಥಿಗಳೂ ಆನ್ ಲೈನ್ ಮೂಲಕ 2೦/11/2014 ರಿಂದ 09/12/2014 ರೊಳಗೆ ಅರ್ಜಿ ಸಲ್ಲಿಸಿ ಇ ರಸೀತಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ www.statebankofindia.com or www.sbi.co.in
ನಿಬಂಧನೆಗಳು:
* ಅಭ್ಯರ್ಥಿಗಳು ತಮ್ಮ ಭಾವಚಿತ್ರ, ಹಸ್ತಾಕ್ಷರ, ಇಮೇಲ್ ಇಡಿ, ಮೊಬೈಲ್ ನಂಬರ್ ವಿವರಗಳ ಸ್ಕ್ಯಾನ್ ಕಾಪಿ ಹೊಂದಿರಬೇಕು.
* ಸ್ಟೇಟ್ ಬ್ಯಾಂಕಿನ ವೆಬ್ ತಾಣದ ಮೂಲಕ ಅರ್ಜಿ ಹಾಕಲು ಈ ಲಿಂಕ್ ಕ್ಲಿಕ್ ಮಾಡಿ
* careers-with-us ಕ್ಲಿಕ್ ಮಾಡಿ ಆನ್ ಲೈನ್ ನೋಂದಣಿ ಮಾಡಿಕೊಳ್ಳಿ
* ಅರ್ಜಿ ಭರ್ತಿ ಮಾಡಿ, ಭಾವಚಿತ್ರ ಇನ್ನಿತರ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ ಲೋಡ್ ಮಾಡಿ.
* ನೋಂದಾಯಿತ ಅಭ್ಯರ್ಥಿ ಸಂಖ್ಯೆ, ಪಾಸ್ ವರ್ಡ್ ಹಾಗೂ ಇ ರಸೀತಿ ಪಡೆದುಕೊಳ್ಳಿ. ಆನ್ ಲೈನ್ ಪರೀಕ್ಷೆಗಳು ಡಿಸೆಂಬರ್ ನಲ್ಲಿ ನಡೆಯುವ ಸಾಧ್ಯತೆಯಿದೆ.
ಮುಖ್ಯವಾದ ದಿನಾಂಕಗಳು:
* ಆನ್ ಲೈನ್ ಅರ್ಜಿ ಸಲ್ಲಿಸಲು ಆರಂಭ: 20/11/2014
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 9/12/2014
* ನೇರವಾಗಿ ಅರ್ಜಿ ಶುಲ್ಕ ಸಲ್ಲಿಸಬೇಕಾದ ಅವಧಿ: 22-11-2014 to 11-12-2014.
* ಆನ್ ಲೈನ್ ಮೂಲಕದ ಅರ್ಜಿ ಸಲ್ಲಿಸಬೇಕಾದ ಅವಧಿ : 20-11-2014 to 09-12-2014
* ಅಭ್ಯರ್ಥಿಗಳಿಗೆ ಕಾಲ್ ಲೆಟರ್ : 07/1/2015 ನಂತರ ಸಿಗಲಿದೆ.
* ಸಂಭಾವ್ಯ ಪರೀಕ್ಷಾ ಸಮಯ: ಜನವರಿ/ ಫೆಬ್ರವರಿ 2015












Click it and Unblock the Notifications