Get Updates
Get notified of breaking news, exclusive insights, and must-see stories!

ರಂಗಸೌರಭ: ಕರ್ನಾಟಕದ ಹವ್ಯಾಸಿ ರಂಗಭೂಮಿಯ ಯುವ ಪ್ರತಿಭೆಗಳ ರಾಜ್ಯಮಟ್ಟದ ಸ್ಪರ್ಧೆ

ಹವ್ಯಾಸಿ ರಂಗಭೂಮಿಯಲ್ಲಿ ವೈಶಿಷ್ಠ್ಯತೆ ಹಾಗೂ ವಿಭಿನ್ನ ರಂಗಪ್ರಯೋಗಗಳ ಮೂಲಕ ಹೆಸರುವಾಸಿಯಾಗಿರುವ ರಂಗಸೌರಭ ಕಾಲೇಜು ರಂಗಭೂಮಿಯನ್ನು ಸದೃಢಗೊಳಿಸಲು ಅವ್ಯಾಹತ ಪ್ರಯತ್ನ ನಡೆಸುತ್ತಿದೆ. ಈ ಪ್ರಯತ್ನದ ಸಾಫಲ್ಯತೆಯೇ ಸೌರಭ - ರಾಜ್ಯಮಟ್ಟದ ಅಂತರ ಕಾಲೇಜು ರಂಗಸ್ಪರ್ಧೆಗಳು.

ಸೌರಭ ಕಾರ್ಯಕ್ರಮವು ರಂಗಾಸಕ್ತ ಯುವ ಮನಸ್ಸುಗಳನ್ನು ಒಂದೇ ಸೂರಿನಡಿಯಲ್ಲಿ ಕಲೆಯುವಿಕೆಯ ಅತ್ಯದ್ಭುತ ಪರಿಕಲ್ಪನೆಯಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಯಿಂದ ಈಗಾಗಲೇ ನೂರಾರು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಹತ್ತಾರು ಕಾಲೇಜುಗಳ ಕಲಾತಂಡಗಳು ಪಾಲ್ಗೊಳ್ಳುತ್ತಿವೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಎಂಜಿನಿಯರಿಂಗ್‌ ಸೇರಿದಂತೆ ಪದವಿ ಕಾಲೇಜುಗಳು ನಾಟಕ ಪ್ರದರ್ಶಿಸಲಿವೆ.

Saurabha 2026

ಸೌರಭ ರಂಗಸ್ಪರ್ಧೆಯಲ್ಲಿ ನಾಟಕ ಜೊತೆಗೆ ಮೂಕಾಭಿನಯ, ಜಾನಪದ ನೃತ್ಯ ಹಾಗೂ ರಂಗಗೀತೆಗಳನ್ನು ಒಳಗೊಂಡ ರಂಗಗೀತೆ ದೃಶ್ಯಾವಳಿ ಸ್ಪರ್ಧೆಯು ಸಹ ನಡೆಯಲಿದೆ. ವೈಯಕ್ತಿಕ ವಿಭಾಗದ ಸ್ಪರ್ಧೆಗಳು ಸೇರಿದಂತೆ ಒಟ್ಟು 20 ವಿವಿಧ ಸ್ಪರ್ಧೆಗಳು ನಡೆಯಲಿದ್ದು ವಿಜೇತರಿಗೆ ಫೆಬ್ರವರಿ 28 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆ.

ಎಲ್ಲಾ ಸ್ಪರ್ಧೆಗಳಲ್ಲಿಯೂ ಅತ್ಯುತ್ತಮ ನಿರ್ವಹಣೆ ತೋರಿದ ಕಾಲೇಜಿಗೆ ಪದ್ಮಭೂಷಣ ಡಾ. ರಾಜ್‌ಕುಮಾರ್‌ ಸರ್ವೋತ್ತಮ ಕಾಲೇಜು ಪಾರಿತೋಷಕವನ್ನು ನೀಡಲಾಗುತ್ತಿದೆ. ಈ ಪಾರಿತೋಷಕವನ್ನು ಪುನೀತ್‌ ರಾಜ್‌ಕುಮಾರ್‌ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಪ್ರಾಯೋಜಿಸಿದ್ದಾರೆ. 70 ಕೆಜಿ ತೂಕವುಳ್ಳ ಕಂಚಿನ ಮಹಾನಟನ ಮೂರ್ತಿಯನ್ನು ಕನ್ನಡ ನಾಡಿನ ಹೆಸರಾಂತ ಕಲಾ ನಿರ್ದೇಶಕ ಶಶಿಧರ ಅಡಮ ಅವರು ನಿರ್ಮಿಸಿಕೊಟ್ಟಿದ್ದಾರೆ.

Saurabha 2026

ನಟಿ ಗಿರಿಜಾ ಲೋಕೇಶ್‌ ಅವರ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿಯನ್ನು ನಟ ಹಾಗೂ ನಿರ್ಮಾಪಕ ಸೃಜನ್‌ ಲೋಕೇಶ್‌ ಅವರು ಪ್ರಾಯೋಜಿಸಿದ್ದಾರೆ. ಇದಲ್ಲದೇ ನಾಟಕ ವಿವಿಧ ವಿಭಾಗಗಳಿಗೆ ನೀಡುವ ಪ್ರಶಸ್ತಿಯನ್ನು ನಾಡಿನ ಹೆಸರಾಂತ ಹವ್ಯಾಸಿ ರಂಗ ತಂಡಗಳು ನೀಡಿವೆ.

ಸೌರಭ ರಂಗ ಸ್ಪರ್ಧೆಗಳು ವಿಜೃಂಭಣೆಯಿಂದ ನಡೆದಿದೆ. ಇಲ್ಲಿಯವರೆಗೂ ಕಾರ್ಯಕ್ರಮದಲ್ಲಿ ಹಿರಿಯ ನಟ ಅನಂತ್‌ ನಾಗ್, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ರಕ್ಷಿತ್‌ ಶೆಟ್ಟಿ, ರಾಜ್‌ ಬಿ ಶೆಟ್ಟಿ, ಕಿಶೋರ್‌, ಶರತ್‌ ಲೋಹಿತಾಶ್ವ,ಶ್ವೇತಾ ಶ್ರೀವಾತ್ಸವ್, ಅಭಿಷೇಕ್‌ ಅಂಬರೀಷ್‌, ಸಪ್ತಮಿ ಗೌಡ ಮುಂತಾದ ಖ್ಯಾತನಾಮರು ಆಗಮಿಸಿ ರಂಗಾಸಕ್ತ ಯುವಜನತೆಗೆ ಉತ್ಸಾಹ ತುಂಬಿದ್ದಾರೆ.

'ಸೌರಭ 26'ಕ್ಕೆ ವೇದಿಕೆ ಸಿದ್ಧಗೊಂಡಿದ್ದು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಫೆಬ್ರುವರಿ 11 ರಿಂದ 28 ರವರೆಗೆ ವಿವಿಧ ರಂಗ ಸ್ಪರ್ಧೆಗಳು ನಡೆಯಲಿವೆ. ಫೆಬ್ರವರಿ 11ರ ಸಂಜೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ರಂಗಮಂದಿರದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಹಿರಿಯ ರಂಗಕರ್ಮಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀ ಅವರು ನೆರವೇರಿಸಿ ಕೊಡಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಶ್ರೀಯುತ ನಾಗರಾಜ ಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಯುತ್ತಿರುವ ಸೌರಭ 26 ರ ಆವೃತ್ತಿಯಲ್ಲಿ ಸರಿಸುಮಾರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+