ಗೌರಿ, ಕಲಬುರ್ಗಿ ಹತ್ಯೆಗೆ ಬಳಸಿದ್ದು ಒಂದೇ ಪಿಸ್ತೂಲ್

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 14 : ಗೌರಿ ಲಂಕೇಶ್ ಮತ್ತು ಎಂ.ಎಂ.ಕಲಬುರ್ಗಿ ಅವರ ಹತ್ಯೆಗೆ ಒಂದೇ ಪಿಸ್ತೂಲ್ ಬಳಸಲಾಗಿದೆ ಎಂಬುದು ತನಿಖೆಯಿಂದ ಬಹಿರಂಗೊಂಡಿದೆ. ಸೆ.5ರಂದು ಗೌರಿ ಲಂಕೇಶ್ ಹತ್ಯೆ ನಡೆದಿತ್ತು. ಎಸ್‌ಐಟಿ ಈ ಪ್ರಕರಣದ ತನಿಖೆ ನಡೆಸುತ್ತಿದೆ.

ಬ್ಯಾಲಿಸ್ಟಿಕ್ ವರದಿ ಅನ್ವಯ ಎಸ್‌ಐಟಿ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ. ಬುಲೆಟ್ ಮತ್ತು ಕಾರ್ಟೆಜ್‌ಗಳ ಮೇಲಿನ ಸಹಿ ಒಂದೇ ಮಾದರಿಯಲ್ಲಿದೆ. ಆದ್ದರಿಂದ, ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಹತ್ಯೆಗೆ ಒಂದೇ ಬಂದೂಕು ಬಳಸಲಾಗಿದೆ ಎಂಬ ನಿರ್ಧಾರಕ್ಕೆ ಎಸ್‌ಐಟಿ ಬಂದಿದೆ.

ಹತ್ಯೆದಿನ ಹಂತಕ ಗೌರಿ ಲಂಕೇಶ್ ಮನೆ ಸುತ್ತ 3 ಬಾರಿ ಬಂದು ಹೋಗಿದ್ದ!

Same pistol killed Gauri Lankesh-Kalburgi : Ballistics

ಈ ವರದಿ ಕೈ ಸೇರಿದ ಬಳಿಕ ಎಸ್‌ಐಟಿ ಎರಡೂ ಹತ್ಯೆಗಳಲ್ಲಿರುವ ಸಾಮ್ಯತೆಯನ್ನು ಪರಿಶೀಲನೆ ನಡೆಸುತ್ತಿದೆ. 2015ರ ಆಗಸ್ಟ್ 30ರಂದು ಧಾರವಾಡದ ಕಲ್ಯಾಣ ನಗರದ ನಿವಾಸದಲ್ಲಿ ಎಂ.ಎಂ.ಕಲಬುರ್ಗಿ ಹತ್ಯೆ ನಡೆದಿತ್ತು. ಒಂದೇ ಗುಂಪು ಈ ಎರಡೂ ಹತ್ಯೆಗಳನ್ನು ಮಾಡಿರಬಹುದೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗೌರಿ ಹತ್ಯೆ ತನಿಖಾ ತಂಡದ ಅಧಿಕಾರಿಗಳ ಸಂಖ್ಯೆ ಹೆಚ್ಚಳ

ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಎಸ್‌ಐಟಿ ಅಧಿಕಾರಿಗಳು ಕಾಯುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿರುವ ಎಸ್‌ಐಟಿ ಒಬ್ಬ ವ್ಯಕ್ತಿ ಗೌರಿ ಲಂಕೇಶ್ ಹತ್ಯೆ ಮಾಡಿದ್ದಾನೆ ಎಂದು ಹೇಳಿದ್ದಾರೆ. ಹಂತಕ ಬಿಳಿಯ ಶರ್ಟ್ ಧರಿಸಿದ್ದ. ಆದರೆ, ಹೆಲ್ಮೆಟ್ ಧರಿಸಿದ್ದರಿಂದ ಮುಖ ಸ್ಪಷ್ಟವಾಗಿ ಗುರುತು ಸಿಗುತ್ತಿಲ್ಲ.

ಎಂ.ಎಂ.ಕಲಬುರ್ಗಿ ಹತ್ಯೆಯಾಗಿ 2ವರ್ಷ, ಹಂತಕರು ಯಾರು?

ಎಸ್‌ಐಟಿ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಪೊಲೀಸರ ಜೊತೆ ಸಂಪರ್ಕದಲ್ಲಿದೆ. ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳನ್ನು ಎಸ್‌ಐಟಿ ಭೇಟಿ ಮಾಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Special Investigation Team is closing on the similarities in the murders of Gauri Lankesh and M M Kalburgi. It has been ascertained that the same gun was used in both the murders.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ