SM Krishna: ರಮ್ಯಾ ಅವರಿಗೆ ತಂದೆಯ ಸ್ಥಾನದಲ್ಲಿ ನಿಂತು ಎಸ್.ಎಂ. ಕೃಷ್ಣ ಅವರು ಸಹಾಯ...
ರಮ್ಯಾ ಕನ್ನಡದ ಕ್ವೀನ್ ಅಂತಾ ಬಿರುದು ಪಡೆದವರು, ಕನ್ನಡ ಸಿನಿಮಾ ರಂಗದಲ್ಲಿ ಇದೇ ನಟಿ ರಮ್ಯಾ ಅವರು ಮಿಂಚಿ ಮರೆಯಾದರು. ಹೀಗೆ ರಮ್ಯಾ ಸಿನಿಮಾ ಜೀವನ ಬಿಟ್ಟಿದ್ದರೂ ಕನ್ನಡದಲ್ಲಿ ಅವರಿಗೆ ಇರುವ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ. ಹಾಗೇ ಕನ್ನಡ ಮಾತ್ರ ಅಲ್ಲದೆ ತಮಿಳು, ತೆಲುಗು, ಮಲಯಾಳಂ & ಹಿಂದಿಯಲ್ಲಿ ಕೂಡ ನಟಿ ರಮ್ಯಾ ಅವರಿಗೆ ಭಾರಿ ದೊಡ್ಡ ಪ್ರಮಾಣದಲ್ಲಿ ಕೋಟಿ, ಕೋಟಿ ಅಭಿಮಾನಿಗಳು ಇದ್ದಾರೆ. ಹಾಗಾದ್ರೆ, ರಮ್ಯಾ ಅವರಿಗೆ ತಂದೆಯ ಸ್ಥಾನದಲ್ಲಿ ನಿಂತು ಎಸ್.ಎಂ. ಕೃಷ್ಣ ಅವರು ಸಹಾಯ...
ಮೋಹಕತಾರೆ ರಮ್ಯಾ ಬಗ್ಗೆ ಕೋಟ್ಯಂತರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯ ಮೂಟೆಯನ್ನೆ ಇಟ್ಟುಕೊಂಡು ಕಾಯುತ್ತಿದ್ದರು. ಸಾಲು ಸಾಲು ಬ್ಲಾಕ್ ಬಸ್ಟರ್ ಸಿನಿಮಾಗಳನ್ನ ನೀಡಿದ್ದ & ಕೋಟಿ ಕೋಟಿ ಅಭಿಮಾನಿಗಳನ್ನು ತಮ್ಮ ಸಿನಿಮಾಗಳ ಮೂಲಕವೇ ಸಂಪಾದನೆ ಮಾಡಿದ್ದ ನಟಿ ರಮ್ಯಾ ದಿಢೀರ್ ಕನ್ನಡ ಸಿನಿಮಾ ರಂಗ ಬಿಟ್ಟು ಹೊರಗೆ ಬಂದುಬಿಟ್ಟರು. ಹೀಗಿದ್ದಾಗ, ರಮ್ಯಾ ಅವರಿಗೆ ತಂದೆಯ ಸ್ಥಾನದಲ್ಲಿ ನಿಂತು ಎಸ್.ಎಂ. ಕೃಷ್ಣ ಅವರು ಸಹಾಯ...

ರಮ್ಯಾ ಅವರಿಗೆ ತಂದೆಯ ಸ್ಥಾನದಲ್ಲಿ...
ಹೌದು, ಎಸ್.ಎಂ. ಕೃಷ್ಣ ಅವರು ನಟಿ ರಮ್ಯಾ ಅವರಿಗೆ ದೊಡ್ಡ ಸಹಾಯ ಮಾಡಿದ್ದರು. ಅದರಲ್ಲೂ ನಟಿ ರಮ್ಯಾ ಅವರು ರಾಜಕೀಯವಾಗಿ ಎಲ್ಲವನ್ನೂ ಎದುರಿಸಿ ನಿಲ್ಲಲು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕಾರಣರಾದರು. ಒಂದು ಹಂತದಲ್ಲಿ ರಮ್ಯಾ ಅವರಿಗೆ ತಂದೆಯ ಸ್ಥಾನದಲ್ಲಿ ನಿಂತು ಎಸ್.ಎಂ. ಕೃಷ್ಣ ಅವರು ಸಹಾಯ ಮಾಡಿ, ರಾಜಕೀಯದಲ್ಲಿ ಕೂಡ ಗೆದ್ದು ಬೀಗುವಂತೆ ಮಾಡಿದರು, ಎಂಬ ಮಾತುಗಳು ಕರ್ನಾಟಕದ ರಾಜಕೀಯದಲ್ಲಿ ಪದೇ ಪದೇ ಓಡಾಡುತ್ತವೆ...
ಮೋಹಕ ತಾರೆ ರಮ್ಯಾ ಅವರಿಗೆ ತಂದೆಯ ಸ್ಥಾನದಲ್ಲಿ ನಿಂತು ಎಸ್.ಎಂ. ಕೃಷ್ಣ ಅವರು, ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಗೆಲ್ಲುವಂತೆ ಬೆಂಬಲವಾಗಿ ನಿಂತಿದ್ದರು. ಹೀಗೆ 2013ರ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಮೋಹಕ ತಾರೆ ರಮ್ಯಾ ಅವರು ಗೆದ್ದು, ಲೋಕಸಭಾ ಸದಸ್ಯರಾಗಿ ಭಾರತದ ಶಕ್ತಿ ಕೇಂದ್ರಕ್ಕೂ ಎಂಟ್ರಿ ಕೊಟ್ಟಿದ್ದರು. ಹೀಗೆ ನಟಿ ರಮ್ಯಾ ಅವರ ಹಿಂದಿನ ಶಕ್ತಿಯಾಗಿ ನಿಂತು ಸಹಾಯ ಮಾಡಿದ್ದರು ಎಸ್.ಎಂ. ಕೃಷ್ಣ ಅವರು ಎಂಬ ಮಾತುಗಳು ಕರ್ನಾಟಕದ ರಾಜಕೀಯ ವಲಯದಲ್ಲಿ ಹರಿದಾಡಿತ್ತು.
ಸಿನಿಮಾ ರಂಗ ಬಿಟ್ಟು ಹೋಗಿದ್ದರು!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಮೂಲಕ, ಹೀರೋಯಿನ್ ಆಗಿ ಎಂಟ್ರಿ ಕೊಟ್ಟಿದ್ದರು ಮೋಹಕತಾರೆ ರಮ್ಯಾ. ಹೀಗೆ ಮೋಹಕತಾರೆ ರಮ್ಯಾ ಮುಂದೆ ಲೋಕಸಭೆಯಲ್ಲಿ ಕೂಡ ತಮ್ಮ ಹವಾ ತೋರಿಸಲಿದ್ದಾರೆ ಅಂತಾ ಯಾರೂ ಅಂದುಕೊಂಡಿರಲಿಲ್ಲ. ಆದರೆ ಆ ಮಾತು 2013ರ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ನಿಜವಾಗಿತ್ತು. ಅಲ್ಲದೆ ರಮ್ಯಾ ಅವರ ಗೆಲುವಿನ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಹಾಯ ಕೂಡ ಇತ್ತು ಎಂಬ ಮಾತು ಹರಿದಾಡಿತ್ತು, ಆದರೆ ಇದ್ಯಾವುದೂ ಅಧಿಕೃತವಾಗಿರಲಿಲ್ಲ.
'ಐಟಿ & ಬಿಟಿ' ಪಿತಾಮಹ ಎಸ್.ಎಂ. ಕೃಷ್ಣ
ನಾವು ಕನ್ನಡಿಗರು ಪ್ರತಿಕ್ಷಣ ಹೆಮ್ಮೆ ಪಡುವಷ್ಟು ವಿಚಾರಗಳು ನಮ್ಮ ಕನ್ನಡ ನಾಡಲ್ಲಿ, ಅಂದರೆ ಕರ್ನಾಟಕದಲ್ಲಿ ಇದೆ. ಅದರಲ್ಲೂ, 'ಐಟಿ & ಬಿಟಿ' ತವರು ಎಂಬ ಹೆಮ್ಮೆಯನ್ನು ಗಳಿಸಿದ್ದ, ಪ್ರಪಂಚದ ಮೂಲೆ ಮೂಲೆಗೂ ನಮ್ಮ ಬೆಂಗಳೂರು ತನ್ನ ಕೀರ್ತಿ ಪತಾಕೆ ಹಬ್ಬಿಸಿದ್ದ ಸಾಧನೆ ಹಿಂದಿನ ಕಾರಣವೇ ಎಸ್.ಎಂ. ಕೃಷ್ಣ ಅವರದ್ದು. ಆದರೆ, ಇದೀಗ ಅವರ ಅಗಲಿಕೆ ಅವರ ಅಭಿಮಾನಿಗಳು & ಬೆಂಬಲಿಗರಿಗೆ ಸಾಕಷ್ಟು ನೋವು ತರಿಸಿದೆ. ಹಾಗೇ ಅಂತಿಮ ಕಾರ್ಯಕ್ಕೆ ಇದೀಗ ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು, ಸಕಲ ಸರ್ಕಾರಿ ಗೌರವದ ಮೂಲಕ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಅಂತಿಮ ವಿಧಿವಿಧಾನ ನೆರವೇರಲಿದೆ.












Click it and Unblock the Notifications