ಎಸ್ ಎಂ ಕೃಷ್ಣ ಹಿಂದೆನೇ ರಮ್ಯಾ ಕೂಡಾ ಬಿಜೆಪಿಗೆ? ಏನೇನೋ ಸುದ್ದಿ!

Written By:
Subscribe to Oneindia Kannada

ಮಾತೆತ್ತಿದರೆ ಬಿಜೆಪಿ ಮತ್ತು ಪ್ರಧಾನಮಂತ್ರಿ ವಿರುದ್ದ ಟೀಕಾಸ್ತ್ರ ಪ್ರಯೋಗಿಸುತ್ತಿದ್ದ ಮಾಜಿ ಕಾಂಗ್ರೆಸ್ ಸಂಸದೆ ರಮ್ಯಾ, ತಮ್ಮ ರಾಜಕೀಯ ಗುರು ಎಸ್ ಎಂ ಕೃಷ್ಣ ಹಿಂದೆನೇ ಬಿಜೆಪಿಗೆ ಸೇರಲಿದ್ದಾರಾ?

ಇದು ಎಷ್ಟು ಸತ್ಯನೋ, ಸುಳ್ಳೋ.. ಒಟ್ಟಿನಲ್ಲಿ ಮಂಡ್ಯ ಭಾಗದಲ್ಲಿ ಕೃಷ್ಣ, ಅಂಬರೀಶಣ್ಣನ ಜೊತೆ ರಮ್ಯಾನೂ ಬಿಜೆಪಿ ಸೇರಲಿದ್ದಾರೆಂದು ಸುದ್ದಿಯೋ ಸುದ್ದಿ.

ಕೃಷ್ಣ ಅಂತಾ ಹಿರಿಯ ಕಾಂಗ್ರೆಸ್ ಮುಖಂಡರೇ ಬಿಜೆಪಿಗೆ ಸೇರುತ್ತಿರುವಾಗ, ರಮ್ಯಾ ಕಾಂಗ್ರೆಸ್ ನಲ್ಲಿ ಮುಂದುವರಿಯಲು ಚಾನ್ಸೇ ಇಲ್ಲ, ಇವರು ಕೂಡಾ ಸದ್ಯದಲ್ಲೇ ಬಿಜೆಪಿ ಕದ ತಟ್ಟಲಿದ್ದಾರೆ ಎನ್ನುವುದು ಸದ್ಯ ಇಲ್ಲಿ ಬಹು ಚರ್ಚಿತ ವಿಷಯ.

ಈ ಸುದ್ದಿಗೆ ಪೂರಕ ಎನ್ನುವಂತೆ, ಬಿಜೆಪಿಯ ಕಾರ್ಯಕರ್ತನೊಬ್ಬ ರಮ್ಯಾ ಬಿಜೆಪಿಗೆ ಸೇರಿದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದು ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ನಾನು ಬಂದ ಮೇಲೆ ನನ್ನದೇ ಹವಾ ಎನ್ನುವ ನಟ ಯಶ್ ಡೈಲಾಗ್ ನಂತೆ, ಮೋದಿ ಪ್ರಧಾನಿಯಾದ ನಂತರ ದೇಶದಲ್ಲೆಲ್ಲಾ ಅವರದೇ ಹವಾ ಇರುವಾಗ ರಮ್ಯಾ ಬಿಜೆಪಿ ಸೇರಲಿದ್ದಾರೆ ಎನ್ನುವ ಮಂಡ್ಯದಲ್ಲಿ ಹರಿದಾಡುತ್ತಿರುವ ಸುದ್ದಿ ' ನಿಜವೇ' ಎಂದು ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಮುಂದೆ ಓದಿ..

ಕೃಷ್ಣ ಜೊತೆ ಕಾಂಗ್ರೆಸ್ ನಾಯಕರ ದಂಡೇ ಬಿಜೆಪಿಗೆ?

ಕೃಷ್ಣ ಜೊತೆ ಕಾಂಗ್ರೆಸ್ ನಾಯಕರ ದಂಡೇ ಬಿಜೆಪಿಗೆ?

ರಾಜ್ಯ ಕಾಂಗ್ರೆಸ್ಸಿನ ಮಾಸ್ ಲೀಡರ್ ಗಳಲ್ಲಿ ಒಬ್ಬರಾಗಿದ್ದವರು ಎಸ್ ಎಂ ಕೃಷ್ಣ. ಈಗ ಅವರು ಬುಧವಾರ (ಮಾ 15) ಬಿಜೆಪಿಗೆ ಸೇರಲಿರುವ ಹಿನ್ನಲೆಯಲ್ಲಿ, ಮುಂದಿನ ದಿನಗಳಲ್ಲಿ ಹಳೇ ಮೈಸೂರು ಭಾಗದ ಕಾಂಗ್ರೆಸ್ ನಾಯಕರ ದಂಡೇ ಬಿಜೆಪಿ ಸೇರಲಿದ್ದಾರೆ ಎನ್ನುವುದು ಈ ಭಾಗದಲ್ಲಿ ಬಹಳ ಚರ್ಚೆಯಾಗುತ್ತಿರುವ ವಿಷಯ.

ರಮ್ಯಾ ರಾಜಕೀಯಕ್ಕೆ ಸೇರುವ ವಿಚಾರ, ಮಂಡ್ಯದಲ್ಲಿ ಸುದ್ದಿ

ರಮ್ಯಾ ರಾಜಕೀಯಕ್ಕೆ ಸೇರುವ ವಿಚಾರ, ಮಂಡ್ಯದಲ್ಲಿ ಸುದ್ದಿ

ಅಂಬರೀಶ್ ಕೂಡಾ ಬಿಜೆಪಿಗೆ ಸೇರುವ ವಿಚಾರ ಹೆಚ್ಚುಕಮ್ಮಿ ಕನ್ಫರ್ಮ್ ಆಗಿರುವ ಬೆನ್ನಲ್ಲೇ, ರಾಜಕೀಯದಲ್ಲಿ ಕೃಷ್ಣ, ಸಿನಿಮಾದಲ್ಲಿ ಅಂಬರೀಶ್ ನೆರಳಲ್ಲಿ ಬೆಳೆದ ರಮ್ಯಾ ಕೂಡಾ ಬಿಜೆಪಿ ಸೇರುವ ದಿನ ದೂರವಿಲ್ಲ ಎನ್ನಲಾಗುತ್ತಿದೆ.

ಬಿಜೆಪಿಗೆ ಸೇರಿಸಿಕೊಳ್ಳಬಾರದು, ಕಾರ್ಯಕರ್ತರ ಒತ್ತಡ

ಬಿಜೆಪಿಗೆ ಸೇರಿಸಿಕೊಳ್ಳಬಾರದು, ಕಾರ್ಯಕರ್ತರ ಒತ್ತಡ

ರಮ್ಯಾ ಬಿಜೆಪಿ ಸೇರಲಿದ್ದಾರೆ ಎನ್ನುವ ಊಹಾಪೋಹ ಸುದ್ದಿಗೆ ಈಗಲೇ ಬಿಜೆಪಿ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿಯ ಮಾತೃ ಸಂಘಟನೆ ಆರ್ ಎಸ್ ಎಸ್ ವಿರುದ್ದ ಇನ್ನಿಲ್ಲದಂತೇ ಟೀಕಿಸಿದ್ದ ರಮ್ಯಾ ಯಾವ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳಬಾರದು ಎನ್ನುವುದು ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ.

ರಮ್ಯಾ ಬಿಜೆಪಿಗೆ ಸೇರಿಸಿಕೊಂಡರೆ ಆತ್ಮಹತ್ಯೆ

ರಮ್ಯಾ ಬಿಜೆಪಿಗೆ ಸೇರಿಸಿಕೊಂಡರೆ ಆತ್ಮಹತ್ಯೆ

ಬಿಜೆಪಿ ಕಾರ್ಯಕರ್ತ ಮಂಜುನಾಥ್ ಎನ್ನುವವರು ಯಡಿಯೂರಪ್ಪನವರಿಗೆ ಪತ್ರ ಬರೆದು, ರಮ್ಯಾ ಈ ಹಿಂದೆ ಬಿಜೆಪಿಯ ವಿರುದ್ಧವಾಗಿ ಮಾತನಾಡಿದ್ದಾರೆ. ಆದ್ರೆ ಈಗ ರಮ್ಯಾ ಬಿಜೆಪಿ ಸೇರುವ ಬಗ್ಗೆ ಊಹಾಪೋಹ ಕೇಳಿ ಬರುತ್ತಿದೆ. ಒಂದು ವೇಳೆ ರಮ್ಯಾ ಬಿಜೆಪಿಗೆ ಸೇರಿಸಿಕೊಂಡರೆ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. (ಚಿತ್ರ: ಪಬ್ಲಿಕ್ ಟಿವಿ)

ರಮ್ಯಾ ಕಾಂಗ್ರೆಸ್ ಮುಖಂಡರ ಜೊತೆ ಮುನಿಸಿಕೊಂಡಿದ್ದಾರಾ?

ರಮ್ಯಾ ಕಾಂಗ್ರೆಸ್ ಮುಖಂಡರ ಜೊತೆ ಮುನಿಸಿಕೊಂಡಿದ್ದಾರಾ?

ಈ ನಡುವೆ ರಾಜಕೀಯದಿಂದ ಕೆಲವು ತಿಂಗಳಿನಿಂದ ರಮ್ಯಾ ಕಾಣಿಸಿಕೊಳ್ಳದೇ ಇರುವುದು, ರಮ್ಯಾ ಕಾಂಗ್ರೆಸ್ ಮುಖಂಡರ ಜೊತೆ ಮುನಿಸಿಕೊಂಡಿದ್ದಾರಾ? ಇದು ಬಿಜೆಪಿಗೆ ಸೇರುವ ಮುನ್ಸೂಚನೆಯಾ? ಇಂದಲ್ಲಾ ನಾಳೆ ಇದಕ್ಕೆ ಉತ್ತರ ಸಿಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rumors in Mandya: Former Congress MP from Mandya Ramyaa too joining BJP.
Please Wait while comments are loading...