ರಾಜ್ಯಪಾಲ ವಾಲ ಅವರ ವಿಮಾನಯಾನ ಖರ್ಚು ವೆಚ್ಚ ಮಾಹಿತಿ ಬಹಿರಂಗ

Posted By:
Subscribe to Oneindia Kannada

ಬೆಂಗಳೂರು, ಸೆ. 11: ಗುಜರಾತ್ ಮೂಲದ ವಜುಭಾಯಿ ವಾಲಾ ಅವರು ಕಳೆದ ಇಪ್ಪತ್ತೇ ತಿಂಗಳಲ್ಲಿ ವಿಮಾನದಲ್ಲಿ ಸಂಚರಿಸಲು ಖರ್ಚು ಮಾಡಿದ ವೆಚ್ಚವನ್ನು ನೋಡಿದರೆ ಎಲ್ಲರ ಹುಬ್ಬೇರುತ್ತದೆ.

20 ತಿಂಗಳಿನಲ್ಲಿ ವಿಶೇಷ ವಿಮಾನ ಸಂಚಾರಕ್ಕೆ ಬರೊಬ್ಬರಿ 2.89 ಕೋಟಿ ರು ವೆಚ್ಚ ಮಾಡಿದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆ ಮೂಲಕ ತಿಳಿದು ಬಂದಿದೆ. ಈ ಮಾಹಿತಿ ಪಡೆಯಲು ಕಾರ್ಯಕರ್ತರೊಬ್ಬರು ಒಂದು ವರ್ಷಕಾಲ ಶ್ರಮಿಸಿದ್ದು ಬೆಳಕಿಗೆ ಬಂದಿದೆ.[ವಜುಭಾಯಿ ಅವರ ಪರಿಚಯ ಇಲ್ಲಿದೆ]

ಕರ್ನಾಟಕದಲ್ಲಿ ಈ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ಸುಮಾರು 6 ವರ್ಷಗಳಲ್ಲಿ ವಿಮಾನಯಾನಕ್ಕೆ ಕೇವಲ 60.95 ಲಕ್ಷ ರು ಮಾತ್ರ ಖರ್ಚು ಮಾಡಿದ್ದರು. [ರಾಜ್ಯಪಾಲರು ಹಿಂದಿಯಲ್ಲೇಕೆ ಭಾಷಣ ಮಾಡಬೇಕು?]

ಆದರೆ, 2014ರ ಸೆಪ್ಟೆಂಬರ್ ನಲ್ಲಿ ಕರ್ನಾಟಕಕ್ಕೆ ಕಾಲಿಟ್ಟ ಗುಜರಾತ್ ಮೂಲದ ವಿ.ಆರ್. ವಾಲಾ ಅವರು ಇಲ್ಲಿ ತನಕ ವಿಶೇಷ ವಿಮಾನ ಸೌಲಭ್ಯ ಬಳಸಿ 2.89 ಕೋಟಿ ರೂ. ವೆಚ್ಚ ಮಾಡಿದ್ದಾರೆ ಎಂದು ಅರ್ ಟಿಐ ಅರ್ಜಿ ಮೂಲಕ ತಿಳಿದು ಬಂದಿದೆ.

RTI reveals Governor Vajubhai Rudabhai Vala flight expenses

ವಿವಿಧ ಕಾರ್ಯ೯ಕ್ರಮಗಳಲ್ಲಿ ಭಾಗವಹಿಸಲು ಖಾಸಗಿ ಹೆಲಿಕಾಪ್ಟರ್ ಮತ್ತು ವಿಶೇಷ ವಿಮಾನಗಳನ್ನೇ ಹೆಚ್ಚಾಗಿ ಬಳಕೆ ಮಾಡಿರುವುದು ಸಿಬ್ಬ೦ದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಾಹಿತಿ ಹಕ್ಕು ಅಧಿನಿಯಮದ ಅಡಿ ನೀಡಿರುವ ಮಾಹಿತಿಯಿ೦ದ ತಿಳಿದುಬ೦ದಿದೆ. ಹುಬ್ಬಳ್ಳಿ, ಧಾರವಾಡ, ಹ೦ಪಿ, ಬೆಳಗಾವಿ, ತೋರಣಗಲ್ ಸೇರಿ ದೂರದ ಊರುಗಳಿಗೆ ಹೆಚ್ಚಾಗಿ ವಿಶೇಷ ವಿಮಾನ ಅಥವಾ ಖಾಸಗಿ ಹೆಲಿಕಾಪ್ಟರ್ ಗಳನ್ನೇ ಬಳಕೆ ಮಾಡಿದ್ದಾರೆ. [ರಾಷ್ಟ್ರಗೀತೆ ವೇಳೆ ವೇದಿಕೆ ಬಿಟ್ಟಿಳಿದ ರಾಜ್ಯಪಾಲರು]

ವಿಮಾನ ಹಾರಾಟವಷ್ಟೇ ಅಲ್ಲದೆ ಇತರೆ ಖಚು೯ಗಳಲ್ಲಿಯೂ ರಾಜಭವನದಲ್ಲಿ ದು೦ದುವೆಚ್ಚವಾಗುತ್ತಿದ್ದು, ಅದನ್ನು ತಿಳಿಯಲು ಸಾವ೯ಜನಿಕರಿಗೆ ಸ೦ವಿಧಾನದತ್ತವಾಗಿ ದೊರಕಿರುವ ಮಾಹಿತಿ ಹಕ್ಕು ಕಾಯ್ದೆ ಮೂಲಕ ಅವಕಾಶ ನೀಡಬೇಕು ಎ೦ದು ಮಾಹಿತಿ ಹಕ್ಕು ಕಾಯ೯ಕತ೯ ಟಿ. ನರಸಿ೦ಹಮೂತಿ೯ ಅಭೀಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ಪಡೆದ ಮಾಹಿತಿಯಂತೆ 77 ವರ್ಷ ವಯಸ್ಸಿನ ರಾಜ್ಯಪಾಲ ವಾಲಾ ಅವರು ನೆಲೆಸಿರುವ ರಾಜಭವನ ಕಟ್ಟಡ ದುರಸ್ತಿಗಾಗಿ 2.4 ಕೋಟಿ ರು ಖರ್ಚು ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Governor Vajubhai Rudabhai Vala’ had spent nearly Rs. 2.89 crore on air travel In the last 20 months,The activist had filed an RTI application on August 21, 2015, seeking information about the air travel expenditure that the Governor had incurred.
Please Wait while comments are loading...