ಬರ ಪರಿಹಾರದ ₹800 ಕೋಟಿ ಜಮೆ ಆಗಿದೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳಿದ್ರಾ?: ಹಾಗಾದ್ರೆ ಸತ್ಯವೇನು?

ಬೆಂಗಳೂರು, ನವೆಂಬರ್ 22: ಕರ್ನಾಟಕದಲ್ಲಿ ಬರಗಾಲ ತಾಂಡವವಾಡುತ್ತಿದೆ. ಬರ ಪರಿಹಾರದಡಿ ಜಿಲ್ಲಾಧಿಕಾರಿಗಳ ಖಾತೆಗಳಿಗೆ ಸುಮಾರು 800 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಆದರೆ ಇಷ್ಟು ಹಣ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿಗಳು ಸುಳ್ಳು ಹೇಳಿದ್ದಾರೆ ಎಂದು ಆಮ್ ಆದ್ಮಿ ಪಕ್ಷವು ತಿಳಿಸಿದೆ.

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಎಎಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಟಿ ನಾಗಣ್ಣ ಅವರು ಮಾತನಾಡಿ, ಮುಖ್ಯಮಂತ್ರಿಗಳ ಪರಿಹಾರ ಬಿಡುಗಡೆ ಹೇಳಿಕೆಯ ಸತ್ಯ ಪರಿಶೀಲನೆ ಮಾಡಿದಾಗ ಇದುವರೆಗೆ 324 ಕೋಟಿ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. 800 ಕೋಟಿ ಜಮೆ ಆಗಿಲ್ಲ. ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆಂದು ಆರೋಪಿಸಿದರು.

Rs 800 Crore of Drought Compensation Not Credited To DC Accounts, CM Had Lied said: AAP

ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರುಗಳು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕಿದ್ದಾರೆ. ಮೈಸೂರು ಜಿಲ್ಲೆಗೆ ಬರಪರಿಹಾರದಡಿ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗಾಗಿ 13 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ತುಮಕೂರು ಜಿಲ್ಲೆಗೆ ಈವರೆಗೆ ಕೇವಲ 15 ಕೋಟಿ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ ಎಂದ ಅವರು ಎಲ್ಲ ಜಿಲ್ಲೆಗಳಿಗೆ ಬಿಡುಗಡೆಯಾದ ಹಣದ ವಿವರ ನೀಡಿದರು.

ರಾಜ್ಯ ಸರ್ಕಾರ ತನ್ನ ಪಾಲು ಏಕೆ ನೀಡಿಲ್ಲ?

ರಾಜ್ಯ ಸರ್ಕಾರ ಅಧ್ಯಯನ ಮಾಡಿ ಬರಪೀಡಿತ ಪ್ರದೇಶಗಳಿಗೆ ಒಟ್ಟು 35,000 ಕೋಟಿ ರೂ. ಹಣದ ಅಗತ್ಯವಿರುವುದಾಗಿ ವರದಿ ತಯಾರಿಸಿದೆ. ಇದರಲ್ಲಿ ಕೇಂದ್ರ ಸರ್ಕಾರ 18,000 ಕೋಟಿ ರೂ. ನೀಡಬೇಕು ಎಂದು ಪತ್ರ ಬರೆದಿರುವುದಾಗಿ ಸಿಎಂ ಹೇಳಿದ್ದಾರೆ. ಉಳಿದ 17,000 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನೀಡಬೇಕು. ಆದರೆ, ಇದುವರೆಗೆ ಈ ಹಣವನ್ನು ಏಕೆ ಬಿಡುಗಡೆ ಮಾಡಿಲ್ಲ ಎಂಬುದನ್ನು ಉತ್ತರಿಸಲಿ ಎಂದು ಆಗ್ರಹಿಸಿದರು.

ಮೊದಲು ರಾಜ್ಯ ಸರ್ಕಾರ ತನ್ನ ಪಾಲನ್ನು ನೀಡಿ ಆಮೇಲೆ ಕೇಂದ್ರದ ಮೇಲೆ ಒತ್ತಡ ಹಾಕಲಿ. ಬರೀ ಕೇಂದ್ರ ಸರ್ಕಾರವನ್ನು ದೂರಿಕೊಂಡು, ತಾವು ಕೊಡಬೇಕಾದ ಪಾಲು ಕೊಡದಿದ್ದರೆ ರೈತರಿಗೆ ಅನ್ಯಾಯ ಮಾಡಿದಂತೆ. ರೈತರು ಸತ್ತಮೇಲೆ ತಾವು ಹಣ ಬಿಡುಗಡೆ ಮಾಡುತ್ತೀರಾ ಎಂದು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

Rs 800 Crore of Drought Compensation Not Credited To DC Accounts, CM Had Lied said: AAP

ನೀವು ಕೊಡುವ ಹಣ ಮೇವಿಗೆ ಸಾಕಾಗಲ್ಲ

ಬರಗಾಲ ಇದ್ದಾಗ ಜಾನುವಾರುಗಳಿಗೆ ಮೇವು ಎಲ್ಲಿಂದ ಬರುತ್ತದೆ?. ಅದನ್ನು ಖರೀದಿಸಿ ತರಬೇಕು. ನೀವು ಕೊಟ್ಟಿರುವ ಹಣದಲ್ಲಿ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಯಾವ ಆಧಾರದ ಮೇಲೆ ಹಣ ಬಿಡುಗಡೆ ಮಾಡಿದ್ದೀರಾ? ಬರಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಾಯಕರು ಪರಸ್ಪರ ಕಿತ್ತಾಡಿಕೊಂಡು ನಾಟಕ ಆಡುತ್ತಿದ್ದೀರಾ ಟೀಕಿಸಿದರು.

ಇನ್ನೊಂದು ವಾರದಲ್ಲಿ ರಾಜ್ಯ ಸರ್ಕಾರ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡದಿದ್ದರೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುವುದು, ಇದನ್ನು ಜನಾಂದೋಲನವಾಗಿ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕರ್ನಾಟಕವನ್ನು ಸತತವಾಗಿ ಕಡೆಗಣಿಸಲಾಗುತ್ತಿದೆ. 2017ರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ 35 ಸಾವಿರ ಕೋಟಿ ನಷ್ಟವಾಗಿತ್ತು. ಅಂದು ಕೂಡ ಯಾವ ಕೇಂದ್ರದ ನಾಯಕರು ರಾಜ್ಯಕ್ಕೆ ಭೇಟಿ ನೀಡಲಿಲ್ಲ. ಆದರೆ, ಗುಜರಾತ್‌ನಲ್ಲಿ ಪ್ರವಾಹ ಆದಾಗ ಸ್ವತಃ ಪ್ರಧಾನಿಗಳೇ ಹೋಗಿ ಪರಿಶೀಲನೆ ನಡೆಸಿದರು. ಅಂದು ಕೇಂದ್ರ ಕೇವಲ 1,500 ಕೋಟಿ ಪರಿಹಾರ ನೀಡಿತು. ಕರ್ನಾಟಕ ಪ್ರತಿ ವರ್ಷ ಸುಮಾರು 5 ಲಕ್ಷ ಕೋಟಿ ತೆರಿಗೆ ನೀಡುತ್ತಿದೆ. ಅವರು ರಾಜ್ಯಕ್ಕೆ ಭಿಕ್ಷೆ ಕೊಡುತ್ತಿದ್ದಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರೆಂಟ್ ಕಳ್ಳ, ಹಲೋ ಅಪ್ಪಾ, ಬ್ಲೂ ಫಿಲಂ ಹೆಸರಲ್ಲಿ ಕಿತ್ತಾಟ

2019ರಲ್ಲಿ ಪ್ರವಾಹ ಆದಾಗ 50ಸಾವಿರ ಕೋಟಿ ರೂ.ನಷ್ಟ ಆಗಿದೆ ಎಂದು ರಾಜ್ಯ ವರದಿ ಕೊಟ್ಟರೆ, ಕೇಂದ್ರ ಕೊಟ್ಟದ್ದು ಕೇವಲ 1,900 ಕೋಟಿ ರೂ. ಮಾತ್ರ. ಈಗ ಇಲ್ಲಿ ಬರ ಬಂದಿದ್ದರೆ, ಕೇಂದ್ರ ನಾಯಕರು ಇತರೆ ರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ಯದಲ್ಲಿ ಕರೆಂಟ್ ಕಳ್ಳ, ಹಲೋ ಅಪ್ಪಾ, ಬ್ಲೂ ಫಿಲಂ ಎಂದುಕೊಂಡು ಕಿತ್ತಾಡುತ್ತಿದ್ದಾರೆ. ಕೂಡಲೇ ಸಿದ್ದರಾಮಯ್ಯನವರು ಎಚ್ಚೆತ್ತು ಹಣ ಬಿಡುಗಡೆ ಮಾಡಲಿ ಎಂದರು.

7 ಗಂಟೆ ವಿದ್ಯುತ್ ಕೊಡದೆ ಅನ್ಯಾಯ

ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ಸದಂ ಅವರು ಮಾತನಾಡಿ, ರೈತರು ವಿದ್ಯುತ್ ಕಂಪನಿಯಿಂದ ಪಂಪ್‌ಸೆಟ್‌ಗಳಿಗೆ ಹಣ ನೀಡಿ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಈ ಆದೇಶ ವಾಪಸ್ ಪಡೆದಿರುವುದಾಗಿ ಸಿಎಂ ಸಿದ್ದರಾಮಯ್ಯ ಪತ್ರಕರ್ತರ ಮುಂದೆ ಸುಳ್ಳು ಹೇಳಿದ್ದಾರೆ. ಆದರೆ, ಅಧಿಕಾರಿಗಳಿಗೆ ಈ ಬಗ್ಗೆ ಅಧಿಕೃತ ಆದೇಶ ನೀಡಿಲ್ಲ ಎಂದು ಹೇಳಿದರು.

ದೆಹಲಿಯಲ್ಲಿ ಪ್ರತಿಭಟನೆ ಮಾಡಿ: ಸಿಎಂಗೆ ಸಲಹೆ

ಕೃಷಿ ಪಂಪ್ ಸೆಟ್ ಅಳವಡಿಕೆ ಅನುಮತಿ ಕೋರಿ ಸಲ್ಲಿಕೆಯಾಗಿರುವ ಸುಮಾರು 4,30,000 ಅರ್ಜಿಗಳು ಬಾಕಿ ಉಳಿದಿವೆ. ಇದಕ್ಕೆ 6000 ಕೋಟಿ ರೂಪಾಯಿ ಖರ್ಚಾಗುತ್ತದೆ ಇಷ್ಟು ಹಣ ನಮ್ಮಲ್ಲಿ ಇಲ್ಲ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಅವರು ಕೈಚೆಲ್ಲಿ ಕೂತಿದ್ದು, ರೈತರು ಏನು ಮಾಡಬೇಕು. ರೈತರಿಗೆ 7 ಗಂಟೆ ವಿದ್ಯುತ್ ನೀಡುವುದಾಗಿ ಸಿಎಂ ಹೇಳಿದ್ದರೂ ಕೂಡ ಅದು ವಾಸ್ತವವಾಗಿ ಜಾರಿಯಾಗಿಲ್ಲ. ಪ್ರಧಾನಿ ಮೇಲೆ ಗೂಬೆಕೂರಿಸುವ ಬದಲು ಹೋರಾಟದಿಂದ ಬಂದ ತಾವು ಎಲ್ಲಾ ಶಾಸಕರನ್ನು ಕರೆದುಕೊಂಡು ಹೋಗಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿ ಎಂದು ಸಲಹೆ ನೀಡಿದರು.

ಒಂದೂವರೆ ವರ್ಷದಲ್ಲಿ 1,219 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಾರಿ ಬೆಳೆ ಬೆಳೆಯಲು ಸಾಲ ಮಾಡಿಕೊಂಡಿದ್ದಾರೆ. ಬರದಿಂದ ಈಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ರೈತರ ಆತ್ಮಹತ್ಯೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ, ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಮಾಡುವುದನ್ನು ಬಿಟ್ಟು ರೈತರಿಗೆ ನೆರವಾಗಲಿ ಎಂದು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+