Get Updates
Get notified of breaking news, exclusive insights, and must-see stories!

ನಟ ದರ್ಶನ್‌ನಿಂದಾಗಿ ವಿಲ್ಸನ್‌ ಗಾರ್ಡನ್‌ ನಾಗನಿಗೂ ಬಂತು ಕುತ್ತು!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಅವರನ್ನು ಮೊದಲಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ, ಅಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗಿತ್ತು ಎನ್ನುವ ಫೋಟೋ ವೈರಲ್‌ ಆದ ಬಳಿಕ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿತ್ತು. ಅಂದು ದರ್ಶನ್‌ ಜೊತೆಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದ ಬೆಂಗಳೂರಿನ ನಟೋರಿಯಸ್‌ ರೌಡಿ ವಿಲ್ಸನ್‌ ಗಾರ್ಡನ್‌ ನಾಗನಿಗೂ ಈಗ ಕಂಟಕ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಅಲಿಯಾಸ್‌ ನಾಗರಾಜ್‌ನನ್ನು ಇಲ್ಲಿಂದ ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಉತ್ತರ ಕರ್ನಾಟಕದ ಯಾವುದಾದರೂ ಜೈಲಿಗೆ ನಾಗ ಶಿಫ್ಟ್‌ ಆಗುವುದು ಬಹುತೇಕ ಪಕ್ಕಾ ಎನ್ನಲಾಗಿದೆ.

Rowdy Wilson Garden Naga Who Was In Jail With Ator Darshan Will Be Shifted To Another Jail

ಸಿದ್ದಾಪುರದ ಮಹೇಶ್‌ ಎಂಬಾತನ ಕೊಲೆ ಕೇಸ್‌ನಲ್ಲಿ ವಿಲ್ಸನ್‌ ನಾಗನನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು. ಇದಾದ ಬಳಿಕ ರೇಣುಕಾಸ್ವಾಮಿ ಕೊಲೆ ಕೇಸ್‌ ಹೊರಬಂದು, ಇದರಲ್ಲಿ ನಟ ದರ್ಶನ್‌ ಕೂಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಈ ವೇಳೆ ನಾಗನ ಜೊತೆ ದರ್ಶನ್‌ ಆತ್ಮೀಯವಾಗಿದ್ದರು ಎಂದು ಹೇಳಲಾಗಿತ್ತು. ಅಲ್ಲದೆ ದರ್ಶನ್‌ಗೆ ಜೈಲಿನಲ್ಲೂ ರಾಜಾತಿಥ್ಯ ನೀಡಲಾಗುತ್ತಿತ್ತು. ಇದರ ಹೊಣೆಯನ್ನು ವಿಲ್ಸನ್‌ ಗಾರ್ಡನ್‌ ನಾಗನೇ ವಹಿಸಿಕೊಂಡಿದ್ದ ಎಂಬ ಗುಸುಗುಸು ಇತ್ತು.

ಈ ವದಂತಿ ಬೆನ್ನಲ್ಲೇ ನಟ ದರ್ಶನ್‌ ಅವರು ಜೈಲಿನಲ್ಲಿದ್ದ ಫೋಟೋವೊಂದು ಲೀಕ್‌ ಆಗಿ ಎಲ್ಲೆಡೆ ಹರಿದಾಡಿತ್ತು. ಇದರಲ್ಲಿ ದರ್ಶನ್‌ ಈ ನಟೋರಿಯಸ್‌ ರೌಡಿ ವಿಲ್ಸನ್‌ ಗಾರ್ಡನ್‌ ನಾಗನ ಜೊತೆ ಕುಳಿತುಕೊಂಡು, ಕೈಯಲ್ಲಿ ಕಾಫಿ ಮಗ್‌ ಹಾಗೂ ಸಿಗರೇಟ್‌ ಸೇದಿಕೊಂಡು ಆರಾಮವಾಗಿದ್ದರು. ಬಳಿಕ ಈ ರಾಜಾತಿಥ್ಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.

Rowdy Wilson Garden Naga Who Was In Jail With Ator Darshan Will Be Shifted To Another Jail

ಕೂಡಲೇ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರವು ಜೈಲಿನಲ್ಲಿ ಇದಕ್ಕೆಲ್ಲ ಅವಕಾಶ ನೀಡಿದ್ದ ಅಧಿಕಾರಿಗಳು ಸೇರಿದಂತೆ ಹಲವರನ್ನು ಸಸ್ಪೆಂಡ್‌ ಮಾಡಿದ್ದಲ್ಲದೆ, ನಟ ದರ್ಶನ್‌ ಅವರನ್ನು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡುವಂತೆ ಸೂಚನೆ ನೀಡಿತ್ತು. ಅದರಂತೆ ದರ್ಶನ್‌ ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ.

ಇತ್ತ ದರ್ಶನ್‌ಗೆ ಸ್ಪೆಷಲ್‌ ಅರೇಂಜ್‌ಮೆಂಟ್‌ ಮಾಡಿದ್ದ ವಿಲ್ಸನ್‌ ಗಾರ್ಡನ್‌ ನಾಗನಿಗೂ ಕಂಟಕ ಶುರುವಾಗಿದೆ. ನಾಗನನ್ನು ಕಲಬುರಗಿ ಅಥವಾ ಉತ್ತರ ಕರ್ನಾಟಕ ಭಾಗದ ಯಾವುದಾರೂ ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇನ್ನು ಜೈಲಿನಲ್ಲಿ ಈ ರಾಜಾತಿಥ್ಯ ಸಂಬಂಧ ಈಗಾಗಲೇ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಸಿಸಿಬಿ ಜಂಟಿ ಪೊಲೀಸ್‌ ಕಮಿಷನರ್ ಚಂದ್ರಗುಪ್ತ ಅವರ ನೇತೃತ್ವದಲ್ಲಿ ತನಿಖೆ ಕೂಡ ಪ್ರಗತಿಯಲ್ಲಿದೆ.

ಪರಪ್ಪನ ಅಗ್ರಹಾರ ಜೈಲಲ್ಲಿ ಆರೋಪಿ ನಟ ದರ್ಶನ್‌ಗೆ ವಿಶೇಷ ಆತಿಥ್ಯದ ಜವಾಬ್ದಾರಿಯನ್ನು ವಿಲ್ಸನ್‌ ಗಾರ್ಡನ್‌ ನಾಗ ವಹಿಸಿಕೊಂಡಿದ್ದ ವಿಚಾರವು ತನಿಖೆಗೆ ದೃಢವಾಗಿತ್ತು. ಹಾಗಾಗಿ ರೌಡಿ ನಾಗನನ್ನು ಸಹ ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಜೈಲು ಅಧಿಕಾರಿಗಳು, ಬೆಂಗಳೂರು ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು. ಕೋರ್ಟ್‌ ಕೂಡ ರೌಡಿ ನಾಗನನ್ನು ಶಿಫ್ಟ್‌ ಮಾಡಲು ಅನುಮುತಿ ನೀಡಿದ್ದು, ಶೀಘ್ರದಲ್ಲೇ ಬೇರೆ ಜೈಲಿಗೆ ನಾಗ ಹೋಗುವುದು ಪಕ್ಕಾ ಎಂದು ಹೇಳಲಾಗಿದೆ.

ಇತ್ತೀಚೆಗೆ ಸಿಸಿಬಿ ಅಧಿಕಾರಿಗಳ ದಾಳಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದರು. ಈ ವೇಳೆ ವಿಲ್ಸನ್ ಗಾರ್ಡನ್ ನಾಗನ ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ಸೀಜ್‌ ಮಾಡಿದ್ದರು. ದಾಳಿ ವೇಳೆ ವಿಲ್ಸನ್‌ ಗಾರ್ಡನ್‌ ನಾಗ ಮತ್ತು ಅವನ ಜೊತೆಗಾರರ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದರು. ಮೊಬೈಲ್ ಮಾತ್ರವಲ್ಲದೆ, ಜೈಲಿನಲ್ಲಿ ಡ್ರಗ್ಸ್, ಹಣ ಕೂಡ ಸಿಕ್ಕಿತ್ತು ಎಂದು ಹೇಳಲಾಗಿದೆ. ಅಂದು ನಟ ದರ್ಶನ್‌ಗೆ ರಾಜಾತಿಥ್ಯ ನೀಡಿದ ತಪ್ಪಿಗೆ ವಿಲ್ಸನ್‌ ಗಾರ್ಡನ್‌ ನಾಗನಿಗೂ ಇಂದು ಬೇರೆ ಜೈಲಿಗೆ ಶಿಫ್ಟ್‌ ಆಗುವ ಭಾಗ್ಯ ಬಂದೊದಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+