Get Updates
Get notified of breaking news, exclusive insights, and must-see stories!

ಹಿತವಾಗಿ ಕಾಡುತ್ತಿದೆ 'ವೆಡ್ಡಿಂಗ್ ಗಿಫ್ಟ್' ಚಿತ್ರದ 'ರೋಮಾಂಚಕ' ಹಾಡು

ಬೆಂಗಳೂರು, ಏಪ್ರಿಲ್ 30: ವೆಡ್ಡಿಂಗ್ ಗಿಫ್ಟ್ ಸಿನಿಮಾ ಇನ್ನೇನು ತೆರೆಗೆ ಬರಲು ಎಲ್ಲಾ ಸಿದ್ಧತೆ ನಡೆಸಿಕೊಂಡಿದೆ. ಸಿನಿಮಾದ ಒಂದೊಂದೇ ಸ್ಪೆಷಾಲಿಟಿಗಳನ್ನು ಜನರ ಮುಂದಿಟ್ಟು ಸಿನಿಮಾದ ಗಟ್ಟಿತನವನ್ನು ತೋರಿಸುತ್ತಿದೆ. ಇದೀಗ ಹಾಡೊಂದನ್ನು ರಿಲೀಸ್ ಮಾಡಿ, ಎಲ್ಲರ ಗಮನ ಸೆಳೆದಿದೆ. 'ರೋಮಾಂಚಕ' ಎಂಬ ಡ್ಯುಯೆಟ್ ಹಾಡು ಅಷ್ಟೇ ರೋಮಾಂಚನಕಾರಿಯಾಗಿದೆ.

ವಿಕ್ರಂಪ್ರಭು ಅವರಿಗೆ ಇದು ಮೊದಲ ಸಿನಿಮಾ. ಸಿನಿಮಾ ಅಪ್ಡೇಟ್ ಗಳನ್ನು ಗಮನಿಸುತ್ತಿದ್ದರೆ ಮೊದಲ ಬಾರಿಗೆ ವಿಕ್ರಂ ಪ್ರಭು ಗೆಲ್ಲುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. ಜಯಂತ್ ಕಾಯ್ಕಿಣಿ ಅವರ ಸಾಹಿತ್ಯದಲ್ಲಿ ಡ್ಯುಯೆಟ್ ಸಾಂಗ್ ಸಿದ್ಧವಾಗಿದೆ. ಈ ಹಾಡಿಗೆ ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು ಅವರೇ ಧ್ವನಿಯಾಗಿದ್ದಾರೆ.

 Romantic Song from Wedding Gift Released

ಹೈಟ್ ಮಂಜು ಚಂದವಾಗಿ ಕೊರಿಯೋಗ್ರಾಫ್ ಮಾಡಿದ್ದಾರೆ. ಈಗಾಗಲೇ ಸಾಂಗ್ ನೋಡಿ ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಕಮೆಂಟ್ ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

 Romantic Song from Wedding Gift Released

ಬೆಂಗಳೂರು, ಮಂಗಳೂರು, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ:

ಬೆಂಗಳೂರು, ಮಂಗಳೂರು, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮುಗಿದಿದೆ. ಹೆಣ್ಣು ಮಕ್ಕಳ ಸುರಕ್ಷತೆ, ಕಾನೂನು, ಉಪಯೋಗ-ದುರುಪಯೋಗದ ಕಥಾಹಂದರವನ್ನು ಸಿನಿಮಾ ಹೊಂದಿದೆ. ವಿಕ್ರಮ್ ಪ್ರಭು ನಿರ್ದೇಶನ ಮಾತ್ರವಲ್ಲ ವಿಕ್ರಂ ಪ್ರಭು ಫಿಲಂಸ್ ಪ್ರೊಡಕ್ಷನ್ ಹೌಸ್ ನಡಿ ಸಿನಿಮಾ ಕೂಡ ನಿರ್ಮಿಸಿದ್ದಾರೆ. ಉದಯ್ ಲೀಲಾ ಕ್ಯಾಮೆರಾ ವರ್ಕ್ ಎಷ್ಟು ಅಂದವಾಗಿದೆ ಎಂಬುದು ಹಾಡಿನಲ್ಲೂ ಅನಾವರಣವಾಗಿದೆ.

 Romantic Song from Wedding Gift Released

'ವೆಡ್ಡಿಂಗ್ ಗಿಫ್ಟ್' ಚಿತ್ರದಲ್ಲಿ ದೊಡ್ಡ ತಾರಾ ಬಳಗ:

ನಿಶಾನ್ ನಾಣಯ್ಯ, ಸೋನು ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ನಟಿ ಪ್ರೇಮ ಲಾಯರ್ ಅವತಾರದಲ್ಲಿ ನಾಲ್ಕು ವರ್ಷಗಳ ಬಳಿಕ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+