ರೋಹಿಣಿ ಸಿಂಧೂರಿ ಅಭಿಮಾನಿಗಳಿಂದ ರೂಪಾಗೆ 9 ಪ್ರಶ್ನೆಗಳು!

Rohini Sindhuri Organization ಎಂಬ ಫೇಸ್‌ಬುಕ್ ಪೇಜ್ ಮೂಲಕ ಡಿ. ರೂಪಾಗೆ 9 ಪ್ರಶ್ನೆಗಳನ್ನು ಕೇಳಲಾಗಿದೆ.

ಬೆಂಗಳೂರು, ಫೆಬ್ರವರಿ 20; ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಮುಂದುವರೆದಿದೆ. ರಾಜ್ಯದಲ್ಲಿ ಈ ವಿಚಾರ ವಿಧಾನಸಭೆ ಚುನಾವಣೆಗಿಂತ ಹೆಚ್ಚಾಗಿ ಚರ್ಚೆಗೆ ಕಾರಣವಾಗಿದೆ.

ಇಬ್ಬರು ಅಧಿಕಾರಿಗಳ ನಡುವಿನ ಜಟಾಪಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನಕ ತಲುಪಿದೆ. ಸೋಮವಾರ ಸಿಎಂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಸೋಮವಾರ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ಸಹ ಮಾಧ್ಯಮಗಳ ಮುಂದೆ ಬಂದಿದ್ದಾರೆ. "ನಾನು ಕನ್ನಡಿಗ ಇಲ್ಲಿಯೇ ಹುಟ್ಟಿದ್ದೇನೆ. ಆಂಧ್ರ ಪ್ರದೇಶದಲ್ಲಿ ನಮಗೆ ಯಾವುದೇ ಸಂಬಂಧಿಕರು ಇಲ್ಲ. ರೋಹಿಣಿ ಸಿಂಧೂರಿಗೆ ಪ್ರಚಾರ ಬೇಕಾಗಿಲ್ಲ. ಯಾರಿಗೆ ಅವರು ಯಾವಾಗ ಫೋಟೋ ಕಳುಹಿಸಿದರೂ ಎಂಬುದನ್ನು ಬಹಿರಂಗ ಮಾಡಿ" ಎಂದು ಡಿ. ರೂಪಾಗೆ ಸವಾಲು ಹಾಕಿದ್ದಾರೆ.

ಮತ್ತೊಂದು ಕಡೆ Rohini Sindhuri Organization ಎಂಬ ಫೇಸ್‌ಬುಕ್ ಪೇಜ್ ಮೂಲಕ ಐಪಿಎಸ್ ಅಧಿಕಾರಿ ಡಿ. ರೂಪಾಗೆ 9 ಪ್ರಶ್ನೆಗಳನ್ನು ಕೇಳಲಾಗಿದೆ. #UttaraKodiRoopaAvre #ಉತ್ತರಕೊಡಿರೂಪಅವ್ರೆ ಎಂಬ ಹ್ಯಾಷ್‌ಟ್ಯಾಗ್‌ ಬಳಕೆ ಮಾಡಲಾಗಿದೆ. 'ಈ ಫೇಸ್ ಬುಕ್ ಖಾತೆಗೂ ಮತ್ತು ರೋಹಿಣಿ ಸಿಂಧೂರಿ ಅವರಿಗೂ ಯಾವುದೇ ಸಂಬಂಧವಿಲ್ಲ, ಇದೊಂದು ಅವರ ಅಭಿಮಾನಿಗಳ ಪೇಜ್ ಆಗಿರುತ್ತದೆ, ಎಲ್ಲಾ ಪೋಸ್ಟ್ ಗಳು ಅವರ ಅಭಿಮಾನಿಗಳದ್ದೆ ಆಗಿರುತ್ತದೆ' ಎಂದು ಪೇಜ್‌ನಲ್ಲಿ ಸ್ಪಷ್ಟನೆಯನ್ನು ನೀಡಲಾಗಿದೆ.

ಐಪಿಎಸ್ ಅಧಿಕಾರಿ ರೂಪಾಗೆ ಪ್ರಶ್ನೆಗಳು

ಐಪಿಎಸ್ ಅಧಿಕಾರಿ ರೂಪಾಗೆ ಪ್ರಶ್ನೆಗಳು

ಫೇಸ್‌ಬುಕ್ ಪೋಸ್ಟ್‌ನಲ್ಲಿ, 'ಈ ಫೇಸ್ ಬುಕ್ ಖಾತೆಗೂ ಮತ್ತು ರೋಹಿಣಿ ಸಿಂಧೂರಿ ಅವರಿಗೂ ಯಾವುದೇ ಸಂಬಂಧವಿಲ್ಲ, ಇದೊಂದು ಅವರ ಅಭಿಮಾನಿಗಳ ಪೇಜ್ ಆಗಿರುತ್ತದೆ, ಎಲ್ಲಾ ಪೋಸ್ಟ್ ಗಳು ಅವರ ಅಭಿಮಾನಿಗಳದ್ದೆ ಆಗಿರುತ್ತದೆ' ಎಂದು ಸ್ಪಷ್ಟಪಡಿಸಲಾಗಿದೆ.

'ಈ ಕೆಳಗೆ ನಾವು ಕೇಳಿರುವ ಪ್ರಶ್ನೆಗಳಿಗೂ ಮತ್ತು ರೋಹಿಣಿ ಸಿಂಧೂರಿ ಯವರಿಗೂ ಯಾವುದೇ ಸಂಬಂಧವಿಲ್ಲ. ರೋಹಿಣಿ ಸಿಂಧೂರಿ ಅವರ ಅಭಿಮಾನಿಗಳಾದ ನಾವುಗಳು ಈ ಪ್ರಶ್ನೆಗಳನ್ನು ಕೇಳಿರುತ್ತೇವೆ' ಎಂದು ತಿಳಿಸಲಾಗಿದೆ.

ಪ್ರಶ್ನೆ 9 ಮತ್ತು 8 ರೋಹಿಣಿ

ಪ್ರಶ್ನೆ 9 ಮತ್ತು 8 ರೋಹಿಣಿ

ಪ್ರಶ್ನೆ-9; ರೋಹಿಣಿ ಅವರ ಮೇಲೆ ಯಾವುದೇ ಆರೋಪ ಇದ್ದರೂ, ಅದನ್ನು ನೇರವಾಗಿ @CSofKarnataka ಹಾಗೂ @DgpKarnataka ರವರ ಗಮನಕ್ಕೆ ತರದೆ, WhastApp Screenshot ಗಳಲ್ಲಿ ತೆಗೆದ ಅವರ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು ಸರಿಯೇ?

ಪ್ರಶ್ನೆ-8; ಸಿಂಧೂರಿಯವರು ಕರ್ನಾಟಕಕ್ಕೆ ಬಂದ ಆರೇ ತಿಂಗಳಲ್ಲಿ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದನ್ನು ಕಲಿತಿದ್ದಾರೆ, ಅವರು ತಮ್ಮ ಕಚೇರಿ ವೇಳೆಯಲ್ಲಿ ಎಂದಾದರೂ ಕನ್ನಡಿಗರನ್ನು ಕಡೆಗಣಿಸಿರುವುದು ತಮ್ಮ ಗಮನಕ್ಕೆ ಬಂದಿದೆಯೇ?.

ಪ್ರಶ್ನೆ 7 ಮತ್ತು 6

ಪ್ರಶ್ನೆ 7 ಮತ್ತು 6

ಅಭಿಮಾನಿಗಳ ಪ್ರಶ್ನೆ-7; ಎಲ್ಲಾ ಕನ್ನಡಿಗರಿಗೆ ತಮ್ಮ ಮೇಲೆ ಅಪಾರ ಗೌರವವಿದೆ, ಕನ್ನಡದ ಎಲ್ಲಾ ಹೆಣ್ಣು ಮಕ್ಕಳಿಗೆ ತಾವೇ ದೊಡ್ಡ ಸ್ಪೂರ್ತಿ, ಇದರ ನಡುವೆ ಕರ್ನಾಟಕ ಸರ್ಕಾರದ ಹಿರಿಯ, ಮಹಿಳಾ ಅಧಿಕಾರಿಯನ್ನು ಬೇರೆ ರಾಜ್ಯದವರು ಎಂದು ಹೇಳಿ ನೋವುಂಟು ಮಾಡುವುದು ಸರಿಯೇ?. ಬೇರೆ ರಾಜ್ಯಗಳಲ್ಲಿ ಕನ್ನಡಿಗರು ಯಾರು ಸೇವೆ ಸಲ್ಲಿಸುತ್ತಿಲ್ಲವೇ?.

ಪ್ರಶ್ನೆ-6; 'ಗಾಯಕ ಲಕ್ಕಿ ಅಲಿ ಜಮೀನಿಗೂ ಮತ್ತು ನನಗೂ ಯಾವುದು ಸಂಬಂಧ ಇಲ್ಲ' ಎಂದು ಸಿಂಧೂರಿಯವರು ಸ್ಪಷ್ಟಪಡಿಸಿದ್ದಾರೆ, ಅವರ ಕುಟುಂಬದ ಯಾರ ಮೇಲೆ ಆರೋಪ ಬಂದರೂ, ಸಿಂಧೂರಿಯವರ ಮೇಲೆ ನೇರ ಆರೋಪ ಹೊರಿಸುವುದು ಏಕೆ?

ಡಿ. ರೂಪಾಗೆ ಪ್ರಶ್ನೆ 5, 4

ಡಿ. ರೂಪಾಗೆ ಪ್ರಶ್ನೆ 5, 4

ಪ್ರಶ್ನೆ-5; ಮೈಸೂರಿನ ಡಿಸಿ ನಿವಾಸದ ಈಜುಕೊಳ ನಿರ್ಮಾಣದ ಯೋಜನೆ ಮತ್ತು ಯೋಚನೆ ಎರಡು ನನ್ನದಲ್ಲ ಎಂದು ಸಿಂಧೂರಿಯವರು ಸ್ಪಷ್ಟಪಡಿಸಿದ್ದು ತಮ್ಮ ಗಮನಕ್ಕೆ ಬಂದಿಲ್ಲವೇ ಮೇಡಂ?

ಪ್ರಶ್ನೆ-4; ತಾವು ನಿನ್ನೆ @publictvnewsನೊಂದಿಗೆ ಮಾತನಾಡುವಾಗ 'ರೋಹಿಣಿಗೂ ನನಗೂ ಹೋಲಿಸಬೇಡಿ' ಎಂದಿದ್ರಿ, ಇಷ್ಟೆಲ್ಲಾ ನಡೆದರೂ 'ಎಂದಿನಂತೆ ಶ್ರದ್ಧೆಯಿಂದ ಕೆಲಸ ಮಾಡ್ತೀನಿ' ಎನ್ನುವ ಅವರೆಲ್ಲಿ.? ಮಾಧ್ಯಮಗಳ ಗಮನ ತಮ್ಮೆಡೆಗೆ ಪ್ರಯತ್ನಿಸುತ್ತಿರುವ ನೀವೆಲ್ಲಿ?

ಪ್ರಶ್ನೆ 3, 2, 1

ಪ್ರಶ್ನೆ 3, 2, 1

ಪ್ರಶ್ನೆ-3; ತಮ್ಮ ಟ್ವೀಟ್'ನಲ್ಲಿ ಶಿಲ್ಪಾನಾಗ್ ಅವರನ್ನು 'ಕನ್ನಡತಿ' ಎಂದು ಹೈಲೈಟ್ ಮಾಡಿರುವ ತಾವು, ಸಿಂಧೂರಿಯವರು ಎಂದಾದರೂ ಕನ್ನಡಿಗರನ್ನು ದ್ವೇಷಿಸಿದ್ದನ್ನು ನೋಡಿದ್ದೀರಾ? ಅವರು ಯಾವುದೇ ವೇದಿಕೆ ಮೇಲೆ ತೆಲುಗುನಲ್ಲಿ ಭಾಷಣ ಮಾಡಿದ್ದನ್ನು ನೋಡಿದ್ದೀರಾ?.

ಪ್ರಶ್ನೆ-2; ಹಿರಿಯ ಐಪಿಎಸ್ ಅಧಿಕಾರಿಯಾದ ತಮ್ಮ ಗಮನಕ್ಕೆ ಈ ಆದೇಶ ಬಂದಿಲ್ಲವೇ @D_Roopa_IPS ರವರೇ?.

ಪ್ರಶ್ನೆ- 1; ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ #RohiniSindhuri ಅವರದ್ದು ಏನೂ ತಪ್ಪಿಲ್ಲ ಎಂದು ಈಗಾಗಲೇ ಎಲ್ಲರಿಗೂ ತಿಳಿದಿದ್ದು, ಮತ್ತೆ ಮತ್ತೆ ನೀವು ಅವರ ಮೇಲೆ ಆರೋಪ ಹೊರಿಸುತ್ತಿರುವುದು ಏಕೆ @D_Roopa_IPS ರವರೇ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+