ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹಂಪ್‌ಗಳಿಂದ ಮುಕ್ತಿ
ರಾಮನಗರ, ಮೇ 21 : ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಗಿದ್ದ ಹಂಪ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭಿಸಿದೆ. ಮೊದಲ ಹಂತದಲ್ಲಿ ರಾಮನಗರ ಬಳಿ ಇದ್ದ 7 ಹಂಪ್‌ಗಳನ್ನು ತೆಗೆದುಹಾಕಿದೆ.
ನಗರ ಪ್ರದೇಶದಲ್ಲಿ ಅತ್ಯಗತ್ಯವಾದ ಹಂಪ್‌ಗಳನ್ನು ಹೊರತುಪಡಿಸಿ, ಉಳಿದ ಹಂಪ್‌ಗಳನ್ನು ತೆರವುಗೊಳಿಸಲು ಪ್ರಾಧಿಕಾರ ಚಿಂತನೆ ನಡೆಸಿದ್ದು, ಕಾರ್ಯಾಚರಣೆ ಆರಂಭಿಸಿದೆ. ಬಿಡದಿ ಹೋಬಳಿಯ ವಂಡರ್ ಲಾ ಗೇಟ್, ಬೈರಮಂಗಲ ಗೇಟ್, ಕಾಡುಮನೆ ಹೋಟೆಲ್, ಕುಂಬಳಗೋಡು ಬಸ್ ನಿಲ್ದಾಣದ ಬಳಿಯ ಹಂಪ್‌ಗಳಿಗೆ ಮುಕ್ತಿ ನೀಡಲಾಗಿದೆ. [ಬೆಂ-ಮೈ ಆರು ಪಥದ ರಸ್ತೆ : ಅಧ್ಯಯನ ವರದಿಯಲ್ಲೇನಿದೆ?]

10 ಹಂಪ್‌ಗೆ ಮುಕ್ತಿ ಇಲ್ಲ : ಚನ್ನಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿರುವ ಕೆಂಗಲ್, ವಂದಾರಗುಪ್ಪೆ, ಕುಡಿನೀರು ಕಟ್ಟೆ ಬಳಿಯ ಹಂಪ್‌ಗಳನ್ನು ತೆಗೆಯಲಾಗಿದ್ದು. ರಾಮನಗರ, ಚನ್ನಪಟ್ಟಣ ನಗರ ಪ್ರದೇಶದಲ್ಲಿನ ಸುಮಾರು 10 ಹಂಪ್‌ಗಳನ್ನು ಹಾಗೆಯೇ ಉಳಿಸಲಾಗಿದೆ. [ಬೆಂಗಳೂರು-ಮೈಸೂರು ಆರು ಪಥದ ರಸ್ತೆ ವಿಳಂಬ?]
ವಾಹನ ಸವಾರರಿಗೆ ತೊಂದರೆ : ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿಯಲ್ಲಿನ ಹಂಪ್‌ಗಳಿಂದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿತ್ತು. ವಾರಾಂತ್ಯದಲ್ಲಿ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಆದ್ದರಿಂದ, ಅಗತ್ಯವಿಲ್ಲದ ಹಂಪ್‌ಗಳನ್ನು ತೆರವು ಮಾಡಲಾಗುತ್ತಿದೆ. ಹೆದ್ದಾರಿಯಲ್ಲಿ ಒಟ್ಟಾರೆ 108 ಹಂಪ್‌ಗಳಿವೆ.
ಕೇಂದ್ರ ಸರ್ಕಾರ ಬೆಂಗಳೂರು- ಮೈಸೂರು ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಂಪ್‌ಗಳು ಇರಬಾರದು ಎಂಬ ನಿಯಮ ಇದೆ. ಅದರಂತೆ ಹಂತ ಹಂತವಾಗಿ ಹಂಪ್ ತೆರವು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications