ಕರ್ನಾಟಕದಲ್ಲಿ ಕೊವಿಡ್ 19 ರೋಗಿಗಳಿಗೆ ಪರಿಷ್ಕೃತ ಡಿಸ್ಚಾರ್ಜ್ ಮಾರ್ಗಸೂಚಿ
ನವದೆಹಲಿ, ಮೇ 27: ಕೊವಿಡ್ 19 ರೋಗಿಗಳಿಗೆ ಪರಿಷ್ಕೃತ ಡಿಸ್ಚಾರ್ಜ್ ಮಾರ್ಗಸೂಚಿಗಳನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ.
ಕೊವಿಡ್ ಪಾಸಿಟಿವ್ , ಲಕ್ಷಣಗಳಿರುವವರು:
-ಎಲ್ಲಾ ಕೊವಿಡ್ ಪಾಸಿಟಿವ್ ರೋಗಿಗಳನ್ನು, ಚಿಕಿತ್ಸೆಗಾಗಿಯೇ ಮೀಸಲಿಟ್ಟಿರುವ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಬೇಕು. ಅಥವಾ ಯಾವುದೇ ಸರ್ಕಾರಿ ಅಥವಾ ಖಾಸಗಿ ಕೊವಿಡ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಬಹುದಾಗಿದೆ.
-ಪ್ರತಿದಿನವೂ ರೋಗಿಯ ದೇಹದ ತಾಪಮಾನ, ನಾಡಿ ಮಿಡಿತವನ್ನು ಪರೀಕ್ಷಿಸುತ್ತಿರಬೇಕು.
-ಯಾವುದೇ ಲಕ್ಷಣಗಳು ಗೋಚರಿಸದೆ ಇದ್ದಲ್ಲಿ 10 ದಿನಗಳ ಬಳಿಕ ಡಿಸ್ಚಾರ್ಜ್ ಮಾಡಬಹುದಾಗಿದೆ.
-ಡಿಸ್ಚಾರ್ಜ್ ಆಗುವ ದಿನಕ್ಕೆ ಮೂರು ದಿನಗಳ ಹಿಂದಿನಿಂದ ಜ್ವರ ಸೇರಿದಂತೆ ರೋಗದ ಯಾವುದೇ ಲಕ್ಷಣಗಳು ಗೋಚರಿಸಬಾರದು.

-ಡಿಸ್ಚಾರ್ಜ್ ಮಾಡುವ ನಾಲ್ಕು ದಿನಗಳ ಹಿಂದಿನಿಂದ ಕೃತಕ ಆಮ್ಲಜನಕದ ಸಪೋರ್ಟ್ ಇರಬಾರದು.
-ರೋಗದ ಯಾವುದೇ ಲಕ್ಷಣಗಳು ಕಂಡು ಬರದಿದ್ದರೆ ಮೂರು ದಿನಗಳ ಬಳಿಕ ಆರ್‌ಟಿ-ಪಿಸಿಆರ್ ಟೆಸ್ಟ್ ನಡೆಸಬೇಕು. ರಿಪೋರ್ಟ್‌ನಲ್ಲಿ ನೆಗೆಟಿವ್ ಎಂದು ಬಂದರೆ ಮಾತ್ರ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ.
ಕೊರೊನಾ ಪಾಸಿಟಿವ್, ಯಾವುದೇ ಲಕ್ಷಣಗಳಿಲ್ಲ:
-ಆಸ್ಪತ್ರೆಯಲ್ಲಿರುವಾಗ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೊರೊನಾ ಪಾಸಿಟಿವ್ ಇದ್ದರೆ ಅವರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಿಸಬೇಕು. ಒಮ್ಮೆ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ ವಾರದ ಬಳಿಕ ಮತ್ತೊಮ್ಮೆ ಪರೀಕ್ಷೆ ಮಾಡಿಸಬೇಕು.
-ಡಿಸ್ಚಾರ್ಜ್ ಆದ ಬಳಿಕ ರೋಗಿಗೆ 14 ದಿನಗಳ ಹೋಂ ಕ್ವಾರಂಟೈನ್ ವಿಧಿಸಲಾಗುತ್ತದೆ.












Click it and Unblock the Notifications