ವಿಶ್ವಾಸಮತಯಾಚನೆ : ರೆಸಾರ್ಟ್‌ಗೆ ಕಾಂಗ್ರೆಸ್, ಬಿಜೆಪಿ ಶಾಸಕರು!

Recommended Video

      ಮತ್ತೊಂದು ರೆಸಾರ್ಟ್ ರಾಜಕೀಯಕ್ಕೆ ಸಾಕ್ಷಿಯಾಗಲಿದೆ ನಮ್ಮ ಕರ್ನಾಟಕ | Oneindia Kannada

      ಬೆಂಗಳೂರು, ಜುಲೈ 12 : ಕರ್ನಾಟಕದಲ್ಲಿ ಮತ್ತೊಮ್ಮೆ ರೆಸಾರ್ಟ್ ರಾಜಕೀಯ ಆರಂಭವಾಗುವ ನಿರೀಕ್ಷೆ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರನ್ನು ರೆಸಾರ್ಟ್‌ಗೆ ಕಳಿಸಲು ತೀರ್ಮಾನಿಸಿದೆ. ಜೆಡಿಎಸ್ ಶಾಸಕರು ಈಗಾಗಲೇ ದೇವನಹಳ್ಳಿ ಬಳಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

      ಶುಕ್ರವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಶ್ವಾಸಮತ ಸಾಬೀತು ಮಾಡಲಿದ್ದೇನೆ ಎಂದು ಘೋಷಣೆ ಮಾಡಿದರು. ವಿಧಾನಸಭೆ ಕಲಾಪವನ್ನು ಸೋಮವಾರ ಬೆಳಗ್ಗೆ 11ಗಂಟೆಗೆ ಮುಂದೂಡಲಾಗಿದೆ.

      ವಿಶ್ವಾಸಮತ ಯಾಚನೆ ಮಾಡಲು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಸಮಯ ನಿಗದಿ ಮಾಡಬೇಕಿದೆ. ಶನಿವಾರ ಮತ್ತು ಭಾನುವಾರ ವಿಧಾನಸಭೆ ಕಲಾಪ ಇರುವುದಿಲ್ಲ. ಆದ್ದರಿಂದ, ಶಾಸಕರನ್ನು ರೆಸಾರ್ಟ್‌ಗೆ ಕಳಿಸಲು ಕಾಂಗ್ರೆಸ್, ಬಿಜೆಪಿ ತೀರ್ಮಾನಿಸಿವೆ.

      ಮೈತ್ರಿ ಸರ್ಕಾರದ ವಿಶ್ವಾಸಮತಯಾಚನೆ ಹಿನ್ನಲೆಯಲ್ಲಿ ಶಾಸಕರನ್ನು ಸೆಳೆಯಬಹುದು ಎಂಬ ಭಯ ಕಾಂಗ್ರೆಸ್ ಮತ್ತು ಬಿಜೆಪಿಗೆ ಇದೆ. ಆದ್ದರಿಂದ, ರೆಸಾರ್ಟ್‌ಗೆ ಶಾಸಕರನ್ನು ಕರೆದೊಯ್ಯಲು ಪಕ್ಷಗಳು ತೀರ್ಮಾನಿಸಿವೆ. ಶುಕ್ರವಾರ ಸಂಜೆ ವೇಳೆಗೆ ರೆಸಾರ್ಟ್‌ಗೆ ಶಾಸಕರು ತೆರಳುವ ನಿರೀಕ್ಷೆ ಇದೆ....

      ಸೋಮವಾರ ವಿಶ್ವಾಸಮತಯಾಚನೆ?

      ಸೋಮವಾರ ವಿಶ್ವಾಸಮತಯಾಚನೆ?

      ಜುಲೈ 15ರ ಸೋಮವಾರ ವಿಶ್ವಾಸಮತಯಾಚನೆ ಮಾಡಲು ಅವಕಾಶ ನೀಡುವಂತೆ ಕೋರಿ ಮೈತ್ರಿ ಸರ್ಕಾರ ಸ್ಪೀಕರ್‌ಗೆ ಮನವಿ ಸಲ್ಲಿಸಿದೆ. ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ದಿನಾಂಕ ಮತ್ತು ಸಮಯವನ್ನು ನಿಗದಿಮಾಡಬೇಕಿದೆ.

      ಜೆಡಿಎಸ್‌ ಶಾಸಕರು ರೆಸಾರ್ಟ್‌ನಲ್ಲಿ

      ಜೆಡಿಎಸ್‌ ಶಾಸಕರು ರೆಸಾರ್ಟ್‌ನಲ್ಲಿ

      ಜೆಡಿಎಸ್ ಶಾಸಕರು ಈಗಾಗಲೇ ರೆಸಾರ್ಟ್‌ನಲ್ಲಿದ್ದಾರೆ. ದೇವನಹಳ್ಳಿ ಬಳಿಯ ಗಾಲ್ಫ್ ಶೈರ್ ರೆಸಾರ್ಟ್‌ನಲ್ಲಿ ಕಳೆದ 5 ದಿನಗಳಿಂದ ವಾಸ್ತವ್ಯ ಹೂಡಿದ್ದಾರೆ. ಇಂದು ರೆಸಾರ್ಟ್‌ನಿಂದಲೇ ಎಲ್ಲಾ ಶಾಸಕರು ವಿಧಾನಸೌಧಕ್ಕೆ ಆಗಮಿಸಿದರು. ಸೋಮವಾರದ ತನಕ ರೆಸಾರ್ಟ್ ವಾಸ್ತವ್ಯ ಮುಂದುವರೆಸಲು ಪಕ್ಷ ತೀರ್ಮಾನಿಸಿದೆ.

      ಕಾಂಗ್ರೆಸ್ ಶಾಸಕರು ರೆಸಾರ್ಟ್‌ಗೆ

      ಕಾಂಗ್ರೆಸ್ ಶಾಸಕರು ರೆಸಾರ್ಟ್‌ಗೆ

      ಕಾಂಗ್ರೆಸ್ ಸಹ ಶಾಸಕರನ್ನು ರೆಸಾರ್ಟ್‌ಗೆ ಕಳಿಸಲು ತೀರ್ಮಾನಿಸಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ 11 ಕಿ.ಮೀ. ದೂರದಲ್ಲಿರುವ Clarks Exotica Convention Resort ನಲ್ಲಿ ಶನಿವಾರ ಮತ್ತು ಭಾನುವಾರ ಶಾಸಕರು ವಾಸ್ತವ್ಯ ಹೂಡಲಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರು ಮುಂಬೈನಲ್ಲಿದ್ದಾರೆ.

      ಬಿಜೆಪಿಯವರೂ ರೆಸಾರ್ಟ್‌ಗೆ

      ಬಿಜೆಪಿಯವರೂ ರೆಸಾರ್ಟ್‌ಗೆ

      ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತಯಾಚನೆ ಮಾಡುತ್ತೇನೆ ಎಂದು ಘೋಷಣೆ ಮಾಡಿದ ಬಳಿಕ ಬಿಜೆಪಿಗೆ ರಿವರ್ಸ್ ಆಪರೇಷನ್ ಭೀತಿ ಎದುರಾಗಿದೆ. ಆದ್ದರಿಂದ, ಶಾಸಕರನ್ನು ರೆಸಾರ್ಟ್‌ಗೆ ಕಳಿಸಲು ತೀರ್ಮಾನಿಸಲಾಗಿದೆ. 105 ಶಾಸಕರು ರೆಸಾರ್ಟ್‌ಗೆ ತೆರಳಲಿದ್ದು, ಸೋಮವಾರ ವಾಪಸ್ ಆಗಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+