Reservoirs Water Level: ತಗ್ಗಿದ ಮಳೆ, ಬಹುತೇಕ ಜಲಾಶಯಗಳ ಒಳಹರಿವು ಕುಸಿತ
ಕರ್ನಾಟಕ, ಆಗಸ್ಟ್, 08: ಜುಲೈ ತಿಂಗಳ ಅಂತ್ಯದವರೆಗೆ ಅಬ್ಬರ ಮಳೆಯಾದ ಹಿನ್ನೆಲೆ ರಾಜ್ಯದ ಬಹುತೇಕ ಜಲಾಶಯಗಳ ನೀರಿನ ಮಟ್ಟ ಸುಧಾರಿಸುತ್ತಲೇ ಇತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಬಿಸಿಲಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಪ್ರಮುಖ ಜಲಾಶಗಳ ಒಳಹರಿವಿನ ಪ್ರಮಾಣವೂ ಕುಸಿಯುತ್ತಿದೆ. ಹಾಗಾದರೆ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ
ನಿನ್ನೆಗೆ ಹೋಲಿಕೆ ಮಾಡಿದರೆ ಇಂದು (ಆಗಸ್ಟ್ 08) ಜಲಾಶಯಗಳಲ್ಲಿ ಕೊಂಚ ಏರುಪೇರಾಗಿದೆ. ಆದರೆ ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಇದೀಗ ನೀರಿನ ಪ್ರಮಾಣ ಭಾರೀ ಕಡಿಮೆಯಾಗಿದ್ದು, ಒಳಹರಿವು ಕೂಡ ತಗುತ್ತಲೇ ಇದೆ. ಹವಾಮಾನ ಇಲಾಖೆಯ ಪ್ರಕಾರ ಒಂದು ವೇಳೆ ಆಗಸ್ಟ್ ಅಂತ್ಯದಲ್ಲಿ ಭಾರೀ ಮಳೆಯಾದರೆ ಮಾತ್ರ ನೀರಿನ ಮಟ್ಟ ಮತ್ತೇ ಸುಧಾರಣೆಯ ಹಂತಕ್ಕೆ ಬರಲಿದೆ.

| ಪ್ರಮುಖ ಜಲಾಶಯ | ಗರಿಷ್ಠ ನೀರಿನ ಮಟ್ಟ(ಅಡಿ) | ಇಂದಿನ ನೀರಿನ ಮಟ್ಟ(ಅಡಿ) | ಒಳಹರಿವು (ಕ್ಯೂಸೆಕ್) | ಹೊರಹರಿವು (ಕ್ಯೂಸೆಕ್) |
| ಕೆಆರ್ಎಸ್ ಜಲಾಶಯ | 124.80 | 113.32 | 4,635 | 5,354 |
| ಆಲಮಟ್ಟಿ ಜಲಾಶಯ | 519.60 | 519.50 | 75,913 | 66,064 |
| ತುಂಗಭದ್ರಾ ಜಲಾಶಯ | 1,633 | 1,627.66 | 10,550 | 5,941 |
| ಮಲಪ್ರಭಾ ಜಲಾಶಯ | 2,079.5 | 2,065.28 | 3,458 | 194 |
| ಲಿಂಗನಮಕ್ಕಿ ಜಲಾಶಯ | 1,819 | 1,790.50 | 17,395 | 2,867 |
| ಕಬಿನಿ ಜಲಾಶಯ | 2,284 | 2,282.68 | 5,243 | 5,000 |
| ಭದ್ರಾ ಜಲಾಶಯ | 186 | 165.4 | 6,882 | 192 |
| ಘಟಪ್ರಭಾ ಜಲಾಶಯ | 2,175 | 2,162.17 | 12,228 | 1,746 |
| ಹೇಮಾವತಿ ಜಲಾಶಯ | 2,922 | 2,915.80 | 4,677 | 200 |
| ಸೂಫಾ ಜಲಾಶಯ | 564 | 546.54 | 15,703 | 3,429 |
| ಹಾರಂಗಿ ಜಲಾಶಯ | 2,859 | 2,858.65 | 2,830 | 2,800 |












Click it and Unblock the Notifications