ರಾಷ್ಟ್ರಪತಿ ಪದಕ ಗಳಿಸಿದ ಪೊಲೀಸರಿಗೆ ಸೆಲ್ಯೂಟ್

ಬೆಂಗಳೂರು, ಜ. 25 : ಅಪರಾಧಿಗಳನ್ನು ಹೆಡೆಮುರಿಕಟ್ಟಿ ಕಾನೂನು ಸುವ್ಯವಸ್ಥೆ ದಿಕ್ಕುತಪ್ಪದಂತೆ ನೋಡಿಕೊಳ್ಳುತ್ತ, ನಾಡಿನ ಪ್ರಜೆಗಳನ್ನು ಕಾಪಾಡುವ ಹೊಣೆಹೊತ್ತ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಸೇವೆಯನ್ನು ಎಷ್ಟು ನೆನೆದರೂ ಸಾಲದು. ಎಲ್ಲ ಪೊಲೀಸರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವುದು ಸರಿಯಲ್ಲ. ಅವರದು ಪ್ರತಿದಿನ ಸಾಹಸಮಯ ಜೀವನವೆ.

ಅಂಥವರ ಸೇವೆ, ಯೋಗ್ಯತೆ, ಅರ್ಹತೆ ಮತ್ತು ಸಾಹಸವನ್ನು ಗುರುತಿಸಿ ಪ್ರತಿವರ್ಷ ಗಣರಾಜ್ಯೋತ್ಸವದಂದು ಅವರಿಗೆ ರಾಷ್ಟ್ರಪತಿ ಪದಕವನ್ನು ಪ್ರದಾನ ಮಾಡಲಾಗುತ್ತದೆ. 65ನೇ ಗಣರಾಜ್ಯೋತ್ಸವದಂದು ಕೂಡ ಅನೇಕ ಪೊಲೀಸ್ ಪೇದೆಗಳು ಮತ್ತು ಅಧಿಕಾರಿಗಳು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಈ ಪುರಸ್ಕಾರವನ್ನು ಜನವರಿ 26ನೇ ತಾರೀಖಿನಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಈ ಅಧಿಕಾರಿಗಳು ಸ್ವೀಕರಿಸಲಿದ್ದಾರೆ. ಕರ್ನಾಟಕದಿಂದ ಆಯ್ಕೆಯಾಗಿರುವ ಪೊಲೀಸ್ ಅಧಿಕಾರಿಗಳ ಪಟ್ಟಿ ಮುಂದಿನಂತಿದೆ. ಎಲ್ಲ ಪೇದೆಗಳಿಗೆ, ಅಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದೆಯೂ ಎಲ್ಲರಿಂದ ಇನ್ನಷ್ಟು ಉತ್ತಮ ಮತ್ತು ನಿಸ್ವಾರ್ಥದ ಸೇವೆ ಕರ್ನಾಟಕದ ಜನರಿಗೆ ಲಭಿಸಲಿ.

ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಮೆಡಲ್ ಗೆದ್ದವರು

ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಮೆಡಲ್ ಗೆದ್ದವರು

ಡಾ. ಪಿ. ರವೀಂದ್ರನಾಥ್, ಐಪಿಎಸ್, ಎಡಿಜಿಪಿ, ಕೆಎಸ್‌ಆರ್‌ಪಿ, ಬೆಂಗಳೂರು.
ಪಿ.ಕೆ. ಶಿವಶಂಕರ, ಸುಪರಿಂಟೆಂಡೆಂಟ್ ಆಫ್ ಪೊಲೀಸ್, ಲೋಕಾಯುಕ್ತ, ರಾಮನಗರ.
ರವಿನಾರಾಯಣ, ಹೆಚ್ಚುವರಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್, ದಾವಣಗೆರೆ ಜಿಲ್ಲೆ.

ಪ್ರಶಂಸಾರ್ಹ ಸೇವೆಗಾಗಿ ಪೊಲೀಸ್ ಪದಕ ಗೆದ್ದವರು

ಪ್ರಶಂಸಾರ್ಹ ಸೇವೆಗಾಗಿ ಪೊಲೀಸ್ ಪದಕ ಗೆದ್ದವರು

ಸೀಮಂತ ಕುಮಾರ್ ಸಿಂಗ್, ಐಪಿಎಸ್, ಐಜಿಪಿ ಅಂಡ್ ಕಮಾಂಡರ್, ಎಎನ್ಎಫ್, ಉಡುಪಿ.
ಸೌಮೇಂದ್ರು ಮುಖರ್ಜಿ, ಐಪಿಎಸ್, ಡಿಐಜಿಪಿ, ಸಿಐಡಿ, ಬೆಂಗಳೂರು.
ಎ.ಜಿ. ಈಶ್ವರಪ್ಪ, ಡಿಸಿಪಿ, ಸಿಎಆರ್, ಬೆಂಗಳೂರು ನಗರ.

ಈ ಅಧಿಕಾರಿಗಳಿಗೂ ಒಂದು ಸಲಾಂ ಹೇಳೋಣವೇ?

ಈ ಅಧಿಕಾರಿಗಳಿಗೂ ಒಂದು ಸಲಾಂ ಹೇಳೋಣವೇ?

ಸಂತೋಷ್ ಕುಮಾರ್, ಎಸ್‌ಪಿ, ಎಎನ್ಎಫ್, ಉಡುಪಿ.
ಎಚ್.ಆರ್. ಮಹದೇವಯ್ಯ, ಎಸ್‌ಪಿ, ಸಿಎಸ್‌ಪಿ. ಉಡುಪಿ.
ಕೆ.ಆರ್. ವೆಂಕಟೇಶ್, ಎಸ್‌ಪಿ, ಎಫ್‌ಪಿಬಿ, ಬೆಂಗಳೂರು.

ಇವರಿಂದ ಇನ್ನಷ್ಟು ನಿಸ್ವಾರ್ಥ ಸೇವೆ ಲಭಿಸಲಿ

ಇವರಿಂದ ಇನ್ನಷ್ಟು ನಿಸ್ವಾರ್ಥ ಸೇವೆ ಲಭಿಸಲಿ

ಕೆ.ಎಂ. ಗಂಗಾಧರಪ್ಪ, 9ನೇ ಬಟಾಲಿಯನ್, ಕೆಎಸ್ಆರ್‌ಪಿ, ಬೆಂಗಳೂರು.
ರಾಮದಾಸ್ ಗೌಡ, 5ನೇ ಬಟಾಲಿಯನ್, ಕೆಎಸ್ಆರ್‌ಪಿ, ಮೈಸೂರು.
ಬಿ.ಸಿ. ಕಲ್ಲಪ್ಪ, ಕಮಾಂಡಂಟ್, 3ನೇ ಬಟಾಲಿಯನ್, ಕೆಎಸ್ಆರ್‌ಪಿ, ಬೆಂಗಳೂರು.

ಇವರೂ ಪೊಲೀಸ್ ಮೆಡಲ್ ವಿಜೇತರು

ಇವರೂ ಪೊಲೀಸ್ ಮೆಡಲ್ ವಿಜೇತರು

ಬಿ.ಎಸ್. ಮುದ್ದುಮಹದೇವಯ್ಯ, ಎಸ್‌ಪಿ, ಐಎನ್‌ಟಿ, ಮೈಸೂರು.
ಅಬ್ದುಲ್‌ಸಾ ಸುಲ್ತಾನ್‌ಸಾ ಘೋರಿ, ಸಹಾಯಕ ಎಸ್‌ಪಿ, ಡಿಸಿಆರ್‌ಬಿ, ಬೆಳಗಾವಿ ಜಿಲ್ಲೆ.
ಎನ್.ಎಚ್. ಸಿದ್ದಪ್ಪ, ಡಿಎಸ್‌ಪಿ, ಸಿಐಡಿ, ಬೆಂಗಳೂರು.

ಬೆಂಗಳೂರು, ಬಿಜಾಪುರ ದಕ್ಷ ಅಧಿಕಾರಿಗಳಿಗೆ ಅಭಿನಂದನೆ

ಬೆಂಗಳೂರು, ಬಿಜಾಪುರ ದಕ್ಷ ಅಧಿಕಾರಿಗಳಿಗೆ ಅಭಿನಂದನೆ

ಜಿ. ಗುರುಲಿಂಗಪ್ಪ, ಪಿಎಸ್ಐ, ಬಾಣಸವಾಡಿ ಪಿಎಸ್, ಬೆಂಗಳೂರು ನಗರ.

ಎಚ್.ಕೆ. ರಾಮರಾವ್, ಪಿಎಸ್ಐ (ವೈರ್‌ಲೆಸ್), ಟೆಕ್ನಿಕಲ್ ಸ್ಟೋರ್ಸ್, ಬೆಂಗಳೂರು.

ಆರ್.ಜಿ. ನಾಮೇಗೌಡ, ಪಿಎಸ್ಐ (ವೈರ್‌ಲೆಸ್), ಜಿಲ್ಲಾ ಕಂಟ್ರೋಲ್ ರೂಂ, ಬಿಜಾಪುರ.

ರಾಷ್ಟ್ರಪತಿ ಪದಕ ಎದೆಗೇರಿಸಿದ ಪೊಲೀಸರು

ರಾಷ್ಟ್ರಪತಿ ಪದಕ ಎದೆಗೇರಿಸಿದ ಪೊಲೀಸರು

ಎಂ.ಕೆ. ನರಸಿಂಹಾಚಾರ್, ಎಎಸ್ಐ, ಜಯಲಕ್ಷ್ಮೀಪುರಂ ಪಿಎಸ್, ಮೈಸೂರು ನಗರ.
ಸದಾನಂದ ಭಂಡಾರಿ, ಎಎಸ್ಐ, ಅಜೇಕರ್ ಪಿಎಸ್, ಉಡುಪಿ ಜಿಲ್ಲೆ.
ಕೆ. ರವೀಂದ್ರ, ಎಚ್ ಸಿ, ಕೆ.ಜಿ. ಹಳ್ಳಿ ಪಿಎಸ್, ಬೆಂಗಳೂರು ನಗರ.

ಪ್ರಸನ್ನ ಕುಮಾರ್, ನಿಮಗೂ ಅಭಿನಂದನೆಗಳು ಸರ್

ಪ್ರಸನ್ನ ಕುಮಾರ್, ನಿಮಗೂ ಅಭಿನಂದನೆಗಳು ಸರ್

ವಿಎಲ್ಎನ್ ಪ್ರಸನ್ನ ಕುಮಾರ್, ಎಚ್ ಸಿ, ಸಿಐಡಿ, ಬೆಂಗಳೂರು. ಅಭಿನಂದನೆಗಳು ಸರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+