• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಸರ್ಕಾರಕ್ಕೆ 70 ವೆಂಟಿಲೇಟರ್ ಉಡುಗೊರೆ ನೀಡಿದ ಖಾಸಗಿ ಕಂಪನಿ

|

ಬೆಂಗಳೂರು, ಮೇ 26: ಕರ್ನಾಟಕದಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಖಾಸಗಿ ಕಂಪನಿಗಳ ಸಹ ಕೈಜೋಡಿಸುತ್ತಿವೆ. ಬೆಂಗಳೂರಿನ ಪುಷ್ಪಕ್ ಪ್ರಾಡೆಕ್ಟ್ಸ್ ಇಂಡಿಯಾ ಪ್ರಾಡೆಕ್ಸ್ಟ್ ಪ್ರವೈಟ್ ಲಿಮಿಟೆಡ್ ಸಹಯೋಗದಲ್ಲಿ ಅತ್ಯಾಧುನಿಕ 70 ಕೊರೊವೆಂಟ್ ವೆಂಟಿಲೇಟರ್ ಅನ್ನು ಸರ್ಕಾರಕ್ಕೆ ಕೊಡುಗೆಯಾಗಿ ನೀಡಿವೆ.

ಬುಧವಾರ ಕರ್ನಾಟಕ ಸರ್ಕಾರಕ್ಕೆ ಐದು ಕೋಟಿ ರೂಪಾಯಿ ಮೌಲ್ಯದ ವೆಂಟಿಲೇಟರ್ ಅನ್ನು ಹಸ್ತಾಂತರಿಸಲಾಯಿತು. ಮೊದಲ ಹಂತದಲ್ಲಿ 46 ವೆಂಟಿಲೇಟರ್ ಬಂದಿದ್ದು, ಬುಧವಾರ ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆಕ್ ರಿಪಬ್ಲಿಕ್ ಕಂಪನಿಯ ಗೌರವ ರಾಯಭಾರಿ ಪುಷ್ಪಕ್ ಪ್ರಕಾಶ್ ಸ್ವೀಕರಿಸಿದರು.

ಸಮಯೋಚಿತ ಕ್ರಮದಿಂದ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ನಿವಾರಣೆ: ಸಚಿವ ಸುಧಾಕರ್ ಸಮಯೋಚಿತ ಕ್ರಮದಿಂದ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ನಿವಾರಣೆ: ಸಚಿವ ಸುಧಾಕರ್

ವೆಂಟಿಲೇಟರ್ ಸ್ವೀಕರಿಸಿದ ನಂತರ ಮಾತನಾಡಿದ ಪುಷ್ಪಕ್ ಪ್ರಕಾಶ್, ಬಾಕಿ ಉಳಿದ 24 ವೆಂಟಿಲೇಟರ್ ಆದಷ್ಟು ಶೀಘ್ರ ಬರಲಿವೆ ಎಂದರು. ಅಲ್ಲದೇ, ವೆಂಟಿಲೇಟರ್ ಸಾಗಾಣಿಣೆ ಮತ್ತು ಇತರೆ ಅಗತ್ಯತೆಯ ಸಂಪೂರ್ಣ ವೆಚ್ಚವನ್ನು ರಿಪಬ್ಲಿಕ್ ಕಂಪೆನಿಯೇ ಭರಿಸಲಿದೆ ಎಂದು ತಿಳಿಸಿದರು.

ಆರೋಗ್ಯ ಸಚಿವರಿಗೆ ವೆಂಟಿಲೇಟರ್ ಹಸ್ತಾಂತರ:

ರಿಪಬ್ಲಿಕ್ ಕಂಪನಿಯು ಈ ವೆಂಟಿಲೇಟರ್ ಅನ್ನು ಶೀಘ್ರದಲ್ಲೇ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಗೆ ಹಸ್ತಾಂತರಿಸಲಾಗುತ್ತದೆ. ಭಾರತ ಹಾಗೂ ರಿಪಬ್ಲಿಕ್ ಕಂಪನಿ ನಡುವೆ ಉತ್ತಮ ಬಾಂಧವ್ಯವಿದ್ದು, ಇದು ನಿರಂತರವಾಗಿ ಮುಂದುವರೆಯಲಿದೆ. ಭಾರತವು ಅತಿಶೀಘ್ರದಲ್ಲಿ ಕೊರೊನಾವೈರಸ್ ಮುಕ್ತ ರಾಷ್ಟ್ರವಾಗಲಿದೆ ಎಂಬ ವಿಶ್ವಾಸವಿದೆ ಎಂದು ಪುಷ್ಪಕ್ ಪ್ರಕಾಶ್ ಹೇಳಿದರು.

   AK Ashraf ಕನ್ನಡಾಭಿಮಾನ ಮೆರೆದ ಕೇರಳದ ಶಾಸಕ | Oneindia Kannada

   ಈ ಎಲ್ಲಾ ಕಾರ್ಯಕ್ಕೆ ತುಂಬು ಹೃದಯದಿಂದ ಸಹಕರಿಸಿದ ಡಾ. ಸೆಲ್ವಕುಮಾರ್ ಮತ್ತು ಅವರ ತಂಡ, ರುವಂಡಾದ ಗೌರವಾನ್ವಿತ ರಾಯಭಾರಿ ಮೋಹನ್ ಸುರೇಶ್, ಪೆರುವಿನ ಗೌರವಾನ್ವಿತ ರಾಯಭಾರಿ ವಿಕ್ರಂ ವಿಶ್ವನಾಥ್, ರೋಟರಿ ನಿರ್ದೇಶಕ ಡಾ.ಕಿರಣ್ ಕುಮಾರ್ ಗೆ ಆಭಾರಿಯಾಗಿದ್ದು, ಎಲ್ಲರಿಗೂ ವಿಶೇಷ ಧನ್ಯವಾದಗಳು ಎಂದರು.

   English summary
   Republic Company Donated Ventilators To Karnataka Govt To Treat Covid-19 Patients.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X