ಮಂಗಳವಾರ ಮತದಾನ ಮಾಡಲು ಬನ್ನಿ

ಬೆಂಗಳೂರು, ಏ. 28 : ರಾಜ್ಯದ 12 ಮತಗಟ್ಟೆಗಳ ಜನರು ಮಂಗಳವಾರ ಮತದಾನ ಮಾಡಬೇಕಾಗಿದೆ. ಚುನಾವಣಾ ಆಯೋಗದ ಆದೇಶದಂತೆ 12 ಮತಗಟ್ಟೆಗಳಲ್ಲಿ ಏ.29ರ ಮಂಗಳವಾರ ಮರುಮತದಾನ ನಡೆಯಲಿದೆ. ಆದ್ದರಿಂದ ಜನರು ನಾಳೆ ಮತ್ತೊಮ್ಮೆ ಮತ ಚಲಾಯಿಸಬೇಕಾಗಿದೆ.

ಲೋಕಸಭೆ ಚುನಾವಣೆಗಾಗಿ ಏ.17ರ ಗುರುವಾರ ನಡೆದ ಮತದಾನದ ವೇಳೆ ಮತಯಂತ್ರಗಳಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹಾಗೂ ಒಂದು ಕಡೆ ಚುನಾವಣಾಧಿಕಾರಿಗಳು ಕರ್ತವ್ಯಲೋಪವೆಸಗಿದ ಕಾರಣ 12 ಮತಗಟ್ಟೆಗಳಲ್ಲಿ ಮಂಗಳವಾರ ಮತದಾನ ನಡೆಯಲಿದೆ. ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

election commission

ತುಮಕೂರು ಲೋಕಸಭಾ ಕ್ಷೇತ್ರದ ತುರುವೇಕೆರೆಯ ಮತಗಟ್ಟೆ ಸಂಖ್ಯೆ 8ರಲ್ಲಿ ಚುನಾವಣಾಧಿಕಾರಿಗಳ ಕರ್ತವ್ಯ ಲೋಪದಿಂದಾಗಿ ಮತ್ತು ಇನ್ನುಳಿದ 11 ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ದೋಷ ಇರುವುದರಿಂದ ಮಂಗಳವಾರ ಮರುಮತದಾನಕ್ಕೆ ಆದೇಶಿಸಲಾಗಿದೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ. [12 ಮತಗಟ್ಟೆಗಳಲ್ಲಿ ಮರುಮತದಾನ]

ಯಾರು ಮತದಾನ ಮಾಡಬೇಕು : ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 57, ಬಾಗಲಕೋಟೆಯ ಮತಗಟ್ಟೆ ಸಂಖ್ಯೆ 7, ಜಮಖಂಡಿಯ ಮತಗಟ್ಟೆ ಸಂಖ್ಯೆ 27, ವಿಜಾಪುರದ ಸಿಂಧಗಿಯ 216, ಗುಲ್ಬರ್ಗದ ಸೇಡಂನ 165, ರಾಯಚೂರಿನ ಶಹಾಪುರದ 35, ಯಾದಗಿರಿಯ 112, ಬೀದರ್‌ ನ 20 ಮತ್ತು 201, ಶಿವಮೊಗ್ಗದ ಬೈಂದೂರು 174, ಹಾಸನದ ಅರಸೀಕೆರೆಯ 72 ಹಾಗೂ ತುಮಕೂರಿನ ತುರುವೇಕೆರೆಯ ಮತಗಟ್ಟೆ ಸಂಖ್ಯೆ 8ರ ವ್ಯಾಪ್ತಿಗೆ ಒಳಪಡುವ ಜನರು ಮಂಗಳವಾರ ಮತದಾನ ಮಾಡಬೇಕಾಗಿದೆ. [ಕರ್ನಾಟಕದ ಮತದಾನದ ಚಿತ್ರಗಳು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+