Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳು ಬಿಡುಗಡೆಯಾಗಿದ್ದೇಗೆ?-ಇಲ್ಲಿದೆ ಮಾಹಿತಿ
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದೆ. ಇವರ ಪೈಕಿ ಮೂವರು ಆರೋಪಿಗಳಿಗೆ ಸೆಪ್ಟೆಂಬರ್ 23ರಂದೇ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಬಿಡುಗಡೆಗೆ 10 ದಿನ ಕಾಯಬೇಕಾಯಿತು. ಹಾಗಾದರೆ ಇವರು ಬಿಡುಗಡೆಯಾಗಿದ್ದೇಗೆ ಎನ್ನವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನುವ ಕಾರಣಕ್ಕೆ ಚಿತ್ರದುರ್ಗ ರೇಣುಕಾಸ್ವಾಮಿಯನ್ನು ನಟ ದರ್ಶನ್ & ಗ್ಯಾಂಗ್ ಭೀಕರವಾಗಿ ಹತ್ಯೆ ಮಾಡಿತ್ತು. ಇನ್ನು ಈ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿ ಜೈಲು ಪಲಾಗಿದ್ದರು. ಈ ಪೈಕಿ ಮೂವರು ಆರೋಪಿಗಳಿಗೆ ಸೆಪ್ಟೆಂಬರ್ 23ರಂದು ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ಸಿಕ್ಕು 10 ಕಳೆದ ಬಳಿಕ ಜೈಲಿನಿಂದ ರಿಲೀಸ್ ಆಗಿದ್ದಾರೆ. ಯಾಕಿಷ್ಟು ತಡ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.

ತುಮಕೂರು ಜೈಲುಪಾಲಾಗಿದ್ದ ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ನಾಯಕ್‌ಗೆ 10 ದಿನಗಳ ಹಿಂದೆಯೇ ಜಾಮೀನು ದೊರೆತಿತ್ತು. ಆದರೆ ಬಿಡುಗಡೆಗೆ ಆಗಿದ್ದು ಮಾತ್ರ ನಿನ್ನೆ ಅಂದರೆ ಅಕ್ಟೋಬರ್ 2ರಂದು. ತುಮಕೂರು ಜಿಲ್ಲಾ ಕಾರಾಗೃಹದಲ್ಲಿದ್ದ ಎ15 ಕಾರ್ತಿಕ್, ಎ16 ಕೇಶವಮೂರ್ತಿ ಹಾಗೂ ಎ17 ಆರೋಪಿ ನಿಖಿಲ್ ನಾಯಕ್ ಜೈಲಿನಿಂದ ಬಿಡುಗಡೆಯಾದವರಾಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಬಳಿಕ ಹಣದ ಆಮಿಷಕ್ಕೊಳಗಾಗು ತಾವೇ ಕೊಲೆ ಮಾಡಿರುವುದಾಗಿ ಈ ಮೂವರು ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದರು. ಆದರೆ ಪೊಲೀಸ್ ತನಿಖೆ ವೇಳೆ ಮೂವರ ಹೇಳಿಕೆಗಳು ಬೇರೆ ಬೇರೆ ಆಗಿತ್ತು. ಬಳಿ ತೀವ್ರ ವಿಚಾರಣೆಗೊಳಪಡಿಸಿದ ಪೊಲೀಸರು ಅಸಲಿ ಸತ್ಯವನ್ನು ಬಾಯಿಬಿಡಿಸಿದ್ದಾರೆ. ಆಗ ನಟ ದರ್ಶನ್ ಹಾಗೂ ಪವಿತ್ರಾಗೌಡ ಹೆಸರು ಹೊರಗಡೆ ಬಂದಿದೆ.
ಇನ್ನು ಈ ಮೂವರು ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿಲ್ಲವೆಂದು ತಿಳಿದ ಕೋರ್ಟ್ ವಾದ-ವಿವಾದಗಳನ್ನು ಆಲಿಸಿ ಸೆಪ್ಟೆಂಬರ್ 23ರಂದು ಇವರಿಗೆ ಜಾಮೀನು ಮಂಜೂರು ಮಾಡಿತ್ತು. ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿದ್ದು, ನಿಖಿಲ್ ನಾಯಕ್ ಹಾಗೂ ಕಾರ್ತಿಕ್‌ಗೆ 57ನೇ ಸಿಸಿಹೆಚ್ ಕೋಟ್ ಜಾಮೀನು ಮಂಜೂರು ಮಾಡಿತ್ತು.
ಜಾಮೀನು ಸಿಕ್ಕಿ 10 ದಿನಗಳು ಕಳೆದರೂ ಕೂಡ ಆರೋಪಿಗಳು ಬಿಡುಗಡೆ ಆಗಿರಲಿಲ್ಲ. ಸತತ 9 ದಿನಗಳಿಂದ ಆರೋಪಿಗಳ ಕುಟುಂಬಸ್ಥರು 1,00,000 ರೂಪಾಯಿ ಹಣ ಮತ್ತು ಶ್ಯೂರಿಟಿಗಾಗಿ ಪರದಾಡಿದರು. ಇನ್ನು ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾತ್ರಿಯೇ ಮೇಲ್ ಮೂಲಕ ತುಮಕೂರು ಜೈಲಾಧಿಕಾರಿಗೆ ಜಾಮೀನು ಆದೇಶದ ಪ್ರತಿ ತಲುಪಿತ್ತು. ಆದ್ದರಿಂದ ಮೂವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದರೆ ಇನ್ನುಳಿದ ಆರೋಪಿಗಳ ಕಥೆಯೇನು ಎಂದು ಕಾದುನೋಡಬೇಕಿದೆ.












Click it and Unblock the Notifications