ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾ ಸ್ವಾಮಿ ಪತ್ನಿ
ಚಿತ್ರದುರ್ಗ, ಅಕ್ಟೋಬರ್ 16: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ನಡೆದು ಬರೋಬ್ಬರಿ ನಾಲ್ಕು ತಿಂಗಳು ಕಳೆದಿದೆ. ಮಗನನ್ನು ಕಳೆದುಕೊಂಡು ರೇಣುಕಾಸ್ವಾಮಿ ಅವರು ಕುಟುಂಬದವರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿತ್ತು, ಇದೀಗ ನೊಂದಿದ್ದ ಕುಟುಂಬಕ್ಕೆ ಖುಷಿ ಆಗುವಂಥ ಸುದ್ದಿ ಸಿಕ್ಕಿದೆ.
ರೇಣುಕಾಸ್ವಾಮಿ ಪತ್ನಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಹನಾಗೆ ಹೆರಿಗೆ ಆಗಿದ್ದು, ಮಗನನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ಮಗುವಿನ ಆಗಮನದಿಂದ ಖುಷಿ ಸಿಕ್ಕಂತಾಗಿದೆ. ನಟ ದರ್ಶನ್ ಆಪ್ತ ಗೆಳತಿ ಪವಿತ್ರಾಗೆ ರೇಣುಕಾ ಸ್ವಾಮಿ ಫೇಕ್ ಖಾತೆ ಮೂಲಕ ಮೆಸೇಜ್ ಮಾಡಿದ್ದರು. ಈ ವಿಚಾರ ದರ್ಶನ್ ಅವರ ಕೋಪಕ್ಕೆ ಕಾರಣ ಆಗಿತ್ತು. ಇದರಿಂದ ರೇಣುಕಾ ಸ್ವಾಮಿಯನ್ನು ಪತ್ತೆ ಹಚ್ಚಿಸಿ ಬೆಂಗಳೂರಿಗೆ ಕರೆತರುವ ಕೆಲಸ ದರ್ಶನ್ ಗ್ಯಾಂಗ್ನಿಂದ ಆಗಿತ್ತು.

ಬೆಂಗಳೂರಿನ ಪಟ್ಟಣಗೆರೆಯ ಶೆಡ್ನಲ್ಲಿ ರೇಣುಕಾಸ್ವಾಮಿ ಅವರನ್ನ ಕರೆತಂದು ಪಟ್ಟಣಗೆರೆಯ ಶೆಡ್ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆಯಿತು. ರೇಣುಕಾ ಸ್ವಾಮಿ ನಿಧನ ಹೊಂದುವಾಗ ರೇಣುಕಾಸ್ವಾಮಿ ಪತ್ನಿ ಸಹನಾಗೆ ಐದು ತಿಂಗಳಾಗಿತ್ತು. ಇದೀಗ ಸಹನಾ ಅವರು ಗಂಡುಮಗುವಿಗೆ ಜನ್ಮ ನೀಡಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಅವರನ್ನ ನಟ ದರ್ಶನ್ ಹಾಗೂ ಗ್ಯಾಂಗ್ ಕೊಲೆ ಮಾಡಿದ್ದಾರೆ ಎಂದು ಆರೋಪ ಇದೆ. ಸದ್ಯ ಈ ಪ್ರಕರಣ ಕೋರ್ಟ್ ಅಂಗಳದಲ್ಲಿ ಇದ್ದು, ಬರೋಬ್ಬರಿ ನಾಲ್ಕು ತಿಂಗಳ ಕಾಲ ಜೈಲಿನಲ್ಲಿ ಪವಿತ್ರಾ ಹಾಗೂ ನಟ ದರ್ಶನ್ ಅವರು ವಿಲವಿಲ ಎನ್ನುತ್ತಿದ್ದಾರೆ. ಇತ್ತ ಮಗನನ್ನ ಕಳೆದುಕೊಂಡು ಕಣ್ಣೀರು ಹಾಕಿದ್ದ ರೇಣುಕಾಸ್ವಾಮಿ ತಂದೆ ತಾಯಿ ಮೊಮ್ಮಗನ ಆಗಮನದಿಂದ ಖುಷಿ ಹೆಚ್ಚಿಸುವಂತೆ ಮಾಡಿದೆ.
ನನ್ನ ಮಗ ಕೈ ಮುಗಿದು ಕೇಳಿಕೊಂಡಾಗ ಅವರು ಬಿಟ್ಟುಬಿಡಬೇಕಿತ್ತು ಎಂದು ತಂದೆ-ತಾಯಿ ಕಣ್ಣೀರು ಹಾಕಿದ್ದರು. ಅಲ್ಲದೆ, ದರ್ಶನ್ಗೆ ಒಳ್ಳೆಯದಾಗಲ್ಲ ಎಂದು ರೇಣುಕಾಸ್ವಾಮಿ ಅವರ ತಂದೆ-ತಾಯಿ ಶಾಪ ಕೂಡ ಹಾಕಿದ್ದರು. ಈಗ ನೊಂದಿದ್ದ ಕುಟುಂಬಕ್ಕೆ ಮಗುವಿನ ಆಗಮನದಿಂದ ಖುಷಿ ಆಗುವಂಥ ಸುದ್ದಿ ಸಿಕ್ಕಿದೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆಯಾದ ಬಳಿಕ ನಟ ದರ್ಶನ್ , ಪವಿತ್ರಗೌಡ ಸೇರಿದಂತೆ ಅವರ ಗ್ಯಾಂಗ್ ನ ಹಲವರು ಜೂನ್ 11ರಂದು ಅರೆಸ್ಟ್ ಮಾಡಲಾಗಿದೆ. ದರ್ಶನ್ ಅವರು ಕಳೆದ ನಾಲ್ಕು ತಿಂಗಳಿಂದ ಜೈಲಿನಲ್ಲಿಯೇ ಇದ್ದಾರೆ. ಅವರು ಜಾಮೀನಿಗೆ ಅರ್ಜಿ ಹಾಕಿದ್ದು, ದರ್ಶನ್ ಅವರ ಕುಟುಂಬ ದರ್ಶನ್ ಗಾಗಿ ಕಾನೂನು ಹೋರಾಟವನ್ನ ನಡೆಸಿದ್ದಾರೆ. ಈಗಾಗಲೇ ಕೆಳ ಹಂತದ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ. ಇದೀಗ ಆ ಅರ್ಜಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಜೂನ್ 8 ರಂದು ಕೊಲೆಯಾಗಿದೆ. ಜೂನ್ 11 ರಂದು ನಟ ದರ್ಶನ್ ಅವರನ್ನ ಅರೆಸ್ಟ್ ಮಾಡಲಾಗಿದೆ. ನಂತರ ಪವಿತ್ರಗೌಡ ಸೇರಿದಂತೆ ಅವರ ಗ್ಯಾಂಗ್ ನ ಹಲವರನ್ನ ಅರೆಸ್ಟ್ ಮಾಡಲಾಗಿದೆ. ನಟ ದರ್ಶನ್ ಅವರು ಕಳೆದ ನಾಲ್ಕು ತಿಂಗಳಿಂದ ಜೈಲಿನಲ್ಲಿ ವಿಲಿವಿಲ ಎನ್ನುವಂತಾಗಿದೆ. ದರ್ಶನ್ ಅವರ ಕುಟುಂಬ ದರ್ಶನ್ ಗಾಗಿ ಕಾನೂನು ಹೋರಾಟವನ್ನ ನಡೆಸುತ್ತಿದ್ದಾರೆ.












Click it and Unblock the Notifications