ಲಾಕ್ ಡೌನ್; ವಲಸೆ ಕಾರ್ಮಿಕರ ನೋಂದಣಿಗೆ ಆಹ್ವಾನ

ಬೆಂಗಳೂರು, ಜೂನ್ 14 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದರ ಪರಿಣಾಮ ರಾಜ್ಯ, ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ವಲಸೆ ಕಾರ್ಮಿಕರು/ಉದ್ಯೋಗಿಗಳ ರಾಜ್ಯಕ್ಕೆ ವಾಪಸ್ ಆಗಿದ್ದಾರೆ.

Recommended Video

      ಯಡಿಯೂರಪ್ಪ ಶಾಶ್ವತ ಅಲ್ಲ ಎಂದು ಏಕವಚನದಲ್ಲಿ ರೇಗಾಡಿದ ರೇವಣ್ಣ | Revanna | Yeddiyurappa

      ಕರ್ನಾಟಕಕ್ಕೆ ವಲಸೆ ಬಂದಿರುವ ಕಾರ್ಮಿಕರು/ಉದ್ಯೋಗಿಗಳಿಗೆ ಅವರ ವಿದ್ಯಾರ್ಹತೆ ಮತ್ತು ಅನುಭವದ ಆಧಾರದ ಮೇಲೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಉದ್ಯೋಗ ಮತ್ತು ತರಬೇತಿ ನೀಡಲಾಗುವುದು.

      ಆಸಕ್ತಿಯುಳ್ಳ ರಾಜ್ಯ, ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ವಲಸೆ ಕಾರ್ಮಿಕರು/ಉದ್ಯೋಗಿಗಳು ವೆಬ್‍ಸೈಟ್‍ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

      Register Name For Skill Development

      ಲಾಕ್ ಡೌನ್ ಘೋಷಣೆಯಾದ ಬಳಿಕ ವಿವಿಧ ವಲಯಗಳ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಬೇರೆ ರಾಜ್ಯ/ದೇಶದಲ್ಲಿ ಕೆಲಸ ಮಾಡುತ್ತಿದ್ದವರು ಕರ್ನಾಟಕಕ್ಕೆ ವಾಪಸ್ ಆಗಿದ್ದಾರೆ.

      ರಾಜ್ಯಕ್ಕೆ ವಾಪಸ್ ಆದವರಿಗೆ ಉದ್ಯೋಗ ಮತ್ತು ತರಬೇತಿ ನೀಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಆಸಕ್ತಿ ಹೊಂದಿರುವವರು ಹೆಸರು ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

      ಇಂತಹ ನೋಂದಣಿಯಿಂದಾಗಿ ಎಷ್ಟು ಜನರು ವಾಪಸ್ ಆಗಿದ್ದಾರೆ? ಎಂಬ ಅಂಕಿ ಅಂಶಗಳು ಸರ್ಕಾರಕ್ಕೆ ಸಿಗಲಿದೆ. ರಾಜ್ಯಕ್ಕೆ ವಾಪಸ್ ಆದವರು ಕೆಲಸವಿಲ್ಲದೇ ಇಲ್ಲಿ ಪರದಾಡುವುದು ತಪ್ಪಲಿದೆ.

      ಆಸಕ್ತರು ನೋಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+