ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನಲ್ಲಿ ಪ್ರಮುಖವಾಗಿ ಏನಿದೆ?

By: ಮಹೇಶ್ ರುದ್ರಗೌಡರ
Subscribe to Oneindia Kannada

ಇತ್ತೀಚಿಗೆ ಹೊರಬಿದ್ದ ಮಹದಾಯಿ ನ್ಯಾಯಮಂಡಳಿ ಮಧ್ಯಂತರ ತೀರ್ಪು, ಅಂತಿಮ ತೀರ್ಪು ಬರುವವರೆಗೆ ಕುಡಿಯುವ ನೀರು ಸೇರಿದಂತೆ ಒಟ್ಟು 7.56 ಟಿಎಂಸಿ ನೀರು ಬಳಕೆಗೆ ಅವಕಾಶ ಕೋರಿ ಕರ್ನಾಟಕ ಸಲ್ಲಿಸಿದ್ದ ಮದ್ಯಂತರ ಅರ್ಜಿಯನ್ನು ತಿರಸ್ಕರಿಸಿದೆ.

ಆ ಮೂಲಕ ವರುಶದಿಂದ ಹೋರಾಟ ಮಾಡುತ್ತಿದ್ದ ಜನರ ನೋವಿಗೆ ಇನ್ನಷ್ಟು ಬರೆ ಎಳೆದಿದೆ. ಹಾಗಾದರೆ ಕರ್ನಾಟಕದ ಅರ್ಜಿ ತಿರಸ್ಕಾರಕ್ಕೆ ನ್ಯಾಯಮಂಡಳಿ ನೀಡಿದ ಕಾರಣಗಳೇನು.?[ವಿಡಿಯೋ: ಕುಡಿಯುವ ನೀರಿಗಾಗಿ ಪ್ರತಿಭಟನೆ]

ನ್ಯಾಯಾಧಿಕರಣದ ಮದ್ಯಂತರ ತೀರ್ಪಿನಲ್ಲಿ ಪ್ರಮುಖವಾಗಿ ಏನಿದೆ?
ನದಿಗಳು ಸಾಕಷ್ಟು ಕಾರಣಗಳಿಂದ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲಿ ಮುಖ್ಯವಾಗಿ ನದಿಗಳು ಹೆಚ್ಚು ಪ್ರಮಾಣದ ನೀರನ್ನು ಭೂಪ್ರದೇಶದಿಂದ ಸಮುದ್ರಕ್ಕೆ ಸೇರಿಸುತ್ತವೆ. ಸಮುದ್ರದ ನೀರು ಆವಿಯಾಗಿ ಮೋಡಗಳಾಗುತ್ತವೆ. ಮೋಡಗಳು ಮತ್ತೆ ಮಳೆಯಾಗಿ ಭೂಮಿ ಸೇರುತ್ತದೆ. ಭೂಮಿ, ಸಮುದ್ರ ಮತ್ತು ಗಾಳಿಯ ನಡುವಿನ ನೀರಿನ ಸಂಚರವನ್ನು ನೀರಿನ ಚಕ್ರ ಎನ್ನುತ್ತಾರೆ.[ಗ್ಯಾಲರಿ: ಮಹದಾಯಿ ತೀರ್ಪು ಖಂಡಿಸಿ ರೈತರ ಆಕ್ರೋಶ]

ನೀರಿನ ಚಕ್ರದಿಂದಾಗಿಯೇ ಭೂಮಿಯ ಮೇಲಿನ ಜೀವಿಗಳಿಗೆ ಅಗತ್ಯವಿರುವ ಸಿಹಿನೀರು ಮತ್ತೆ ಮತ್ತೆ ಪೂರೈಕೆಯಾಗುತ್ತದೆ. ಕೆಲವು ನದಿಗಳನ್ನು ಬಿಟ್ಟರೆ ಬಹುತೇಕ ನದಿಗಳು ಕೊನೆಗೆ ಸಮುದ್ರವನ್ನೇ ಸೇರುತ್ತದೆ. [ಮಹದಾಯಿ ನೀರು ಹಂಚಿಕೆ : ಕಥೆ ವ್ಯಥೆ ಟೈಮ್ ಲೈನ್]

ಅದು ಅರಬ್ಬಿ ಸಮುದ್ರವಾದರೂ ಆಗಬಹುದು ಬಂಗಾಳ ಕೊಲ್ಲಿಯೂ ಇರಬಹುದು. ನದಿಗಳು ಸಮುದ್ರ ಸೇರುವ ಮುನ್ನ ಮಾತ್ರ ಸಂಬಂಧಪಟ್ಟ ರಾಜ್ಯಗಳಿಗೆ ಬಳಕೆಗೆ ಸಿಗುತ್ತದೆ. ಆದ್ದರಿಂದ ಮಹದಾಯಿ ನದಿ (ಅದರ ಬಳಕೆಗಳ ಹೊರತಾಗಿಯೂ) ಅರಬ್ಬಿ ಸಮುದ್ರ ಸೇರುವುದರಿಂದ ನೀರು ವ್ಯರ್ಥವಾಗುತ್ತಿದೆ ಎಂದು ಹೇಳಲು ಬರುವುದಿಲ್ಲ.

Reasons which made Mahadayi tribunal to reject the Karnataka's Interim plea

ಮಹದಾಯಿ ನದಿಯಲ್ಲಿ 108.72 ಟಿಎಂಸಿ ನೀರು ಲಭ್ಯವಿದ್ದು, ಮಲಪ್ರಭಾ ನದಿಗೆ ವರ್ಗಾಯಿಸಲು ಬಯಸುವ ಮೂರು ಸ್ಥಳಗಳಲ್ಲಿ ಹೆಚ್ಚುವರಿ ನೀರು ಲಭ್ಯವಿದೆ ಎಂದು ಸಾಬೀತುಪಡಿಸಲು ಈ ಹಂತದಲ್ಲಿ ಕರ್ನಾಟಕ ರಾಜ್ಯ ವಿಫಲವಾಗಿದೆ ಎಂದು ಈ ನ್ಯಾಯಾಧಿಕರಣ ಅಭಿಪ್ರಾಯಪಟ್ಟಿದೆ.

ಈ ಕಾರಣದಿಂದಾಗಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ ಎಂಬ ಕರ್ನಾಟಕದ ವಾದವನ್ನು ಒಪ್ಪಲು ನ್ಯಾಯಾಧಿಕರಣಕ್ಕೆ ಕಷ್ಟವಾಗುತ್ತದೆ. ಒಂದು ವೇಳೆ ಅಧಿಕ ನೀರು ಲಭ್ಯವಿದ್ದಾಗ ಮಾತ್ರ ನೀರು ವ್ಯರ್ಥವಾಗುತ್ತಿದೆ ಎಂಬ ಮನವಿ ಸಿಂಧುವಾಗುತ್ತದೆ. [ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಏನಿದೆ?]

1974ರ ಪರಿಸರ ಮಾಲಿನ್ಯ ತಡೆ ಮತ್ತು ನಿಯ೦ತ್ರಣ ಕಾಯ್ದೆ, 1986ರ ಪರಿಸರ ರಕ್ಷಣಾ ಕಾಯ್ದೆ, ವನ್ಯಜೀವಿ ಸ೦ರಕ್ಷಣೆ ಮತ್ತು ಜೀವ ವೈವಿಧ್ಯಗಳ ರಕ್ಷಣಾ ಕಾಯ್ದೆಗಳ ಪ್ರಕಾರ ಬೃಹತ್ ಯೋಜನೆ ಹಮ್ಮಿಕೊಳ್ಳುವಾಗ ಒಪ್ಪಿಗೆ ಪಡೆದುಕೊಳ್ಳಬೇಕು. ಆದರೆ ಕರ್ನಾಟಕ ಎಲ್ಲಿಯೂ ಅನುಮತಿ ತೆಗೆದುಕೊಂಡಿಲ್ಲ. ಕೇಂದ್ರ ಸರ್ಕಾರ ಮತ್ತು ಯೋಜನಾ ಆಯೋಗಕ್ಕೂ ಮಾಹಿತಿ ಸಲ್ಲಿಕೆ ಮಾಡಿಲ್ಲ.[ಕರ್ನಾಟಕ ಬಂದ್: ಮಹದಾಯಿಗಾಗಿ ಟ್ವಿಟ್ಟರಲ್ಲೂ ಆಕ್ರೋಶದ ಕಿಡಿ]

ಮಹದಾಯಿ ಮತ್ತು ಮಲಪ್ರಭಾ ನದಿಗಳ ನಡುವೆ ನೀರನ್ನು ಒ೦ದೆಡೆಯಿ೦ದ ಮತ್ತೊ೦ದೆಡೆ ತಿರುಗಿಸಲು ಶಾಶ್ವತ ಕಾಮಗಾರಿ ಅತ್ಯಗತ್ಯ. ಹೀಗಾಗಿ ಶಾಶ್ವತ ಕಾಮಗಾರಿ ಬೇಕಾಗಿಲ್ಲ ಎ೦ದು ಕರ್ನಾಟಕ ವಾದ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Mahadayi Water Disputes Tribunal has rejected Karnataka's plea to divert 7.56 TMC water from the Mahadayi basin to Malaprabha river. Know why the interim plea got rejected.
Please Wait while comments are loading...