Chinnaswamy Stadium: ಕಾಲ್ತುಳಿತ ಪ್ರಕರಣ: ಚಿನ್ನಸ್ವಾಮಿ ಸ್ಟೇಡಿಯಂ ಬೇರೆಡೆಗೆ ಶಿಫ್ಟ್‌: ಎಲ್ಲಿ ಗೊತ್ತಾ?

ಬೆಂಗಳೂರು, ಜೂನ್‌ 09: ಆರ್ ಸಿ ಬಿ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರಕ್ಕೆ ಮುಜುಗರವಾಗಿದೆ. ಈ ಘಟನೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿದ್ದು, ಭೀಕರ ಕಾಲ್ತುಳಿತದಲ್ಲಿ 11 ಜೀವಗಳನ್ನು ಬಲಿ ತೆಗೆದುಕೊಂಡ ನಂತರ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇದೀಗ ಭವಿಷ್ಯವೂ ತೂಗುಗತ್ತಿಯಲ್ಲಿದೆ.

ಐಪಿಎಲ್ 2025 ರ ವಿಜಯೋತ್ಸವದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವವು ದುರಂತವಾಗಿ ಮಾರ್ಪಟ್ಟಿತು, ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದರು. ಮೃತ ಪಟ್ಟ 11 ಜನರು ಹದಿಹರೆಯದವರು. ಈ ಆಘಾತಕಾರಿ ಘಟನೆಯು ಬಹು ಲೋಪಗಳಿಂದ ಆಗಿದೆ ಎಂದು ಕಂಡು ಬಂದಿದೆ. ಈಗಾಗಲೇ ಪೊಲೀಸ್‌ ಇಲಾಖೆಯ ಹಲವು ಹಿರಿಯ ನಾಯಕರನ್ನು ಸರ್ಕಾರ ಸಸ್ಪೆಂಡ್‌ ಮಾಡಿದ್ದರೆ, ಇಂಟಲಿಜೆನ್ಸ್‌ ಫೆಲ್ಯೂರ್‌ ಆಗಿರುವ ಕಾರಣಕ್ಕೆ ಈ ವಿಭಾಗದ ಮುಖ್ಯಸ್ಥರನ್ನೂ ವರ್ಗಾವಣೆ ಮಾಡಲಾಗಿದೆ.

RCB s Chinnaswamy Stadium to be Moved Away Possible Destinations as Karnataka CM ponders Switch

ಕೆಎಸ್‌ಸಿಎ ಕಾರ್ಯದರ್ಶಿ 66 ವರ್ಷದ ಎ.ಶಂಕರ್‌ ಹಾಗೂ 59 ವರ್ಷದ ಇಎಸ್‌ ಜಯರಾಮ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಅವರು ಕೆಎಸ್‌ಸಿಎ ಅಧ್ಯಕ್ಷರಿಗೆ ಸಲ್ಲಿಕೆ ಮಾಡಿದ್ದಾರೆ. ಇಡೀ ಘಟನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇದರ ಮಧ್ಯೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆಸುಳಿವು ನೀಡಿದ್ದಾರೆ.

ಬೆಂಗಳೂರಿನ ಕ್ರಿಕೆಟ್ ಕ್ರೀಡಾಂಗಣವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ಕಾಲ್ತುಳಿತದ ಸಮಸ್ಯೆಗೆ ದೀರ್ಘಕಾಲದ ಪರಿಹಾರ ಕಂಡುಕೊಳ್ಳಲು ಹೊಸ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ಇಂಥ ಅಹಿತಕರ ಘಟನೆಗಳು ಯಾವುದೇ ಸರ್ಕಾರದ ಅವಧಿಯಲ್ಲಾಗಲೀ ನಡೆಯಬಾರದು. ವೈಯಕ್ತಿಕವಾಗಿ ಇದು ನನಗೆ, ನನ್ನ ಸರ್ಕಾರಕ್ಕೆ ನೋವು ತಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣವನ್ನ ಸ್ಥಳಾಂತರ ಯಾಕೆ ಮಾಡ್ಬೇಕು?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಜನರು ಮೃತ ಪಟ್ಟಿದ್ದಾರೆ. ಅಲ್ಲದೇ ಚಿನ್ನಸ್ವಾಮಿ ಕ್ರೀಡಾಂಗಣ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿದೆ ಎನ್ನುವ ಚರ್ಚೆಗಳು ಶುರುವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣವೂ ಸುಮಾರು 40,000 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. ಸಂಭ್ರಮಾಚರಣೆಯ ಸಮಯದಲ್ಲಿ ಎರಡು ಪಟ್ಟು ಹೆಚ್ಚು ಜನಸಂದಣಿಯಾಗಲಿದೆ. ಅಲ್ಲದೇ ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ಬರೋಬ್ಬರಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣವು ಪ್ರಮುಖ ರಸ್ತೆಗಳನ್ನು ಸಹ ಒಳಗೊಂಡಿದೆ. ಕಬ್ಬನ್ ಪಾರ್ಕ್, ವಿಧಾನಸೌಧ, ಮೆಟ್ರೋ, ಹೈಕೋರ್ಟ್‌ ಹೀಗೆ ಪ್ರಮುಖ ಸ್ಥಳಗಳಲ್ಲಿ ಹೆಚ್ಚು ಜನಸಂದಣಿಯಾಗುತ್ತಿರುತ್ತದೆ. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣವನ್ನ ಸ್ಥಳಾಂತರ ಮಾಡಬೇಕು ಎನ್ನುವ ಚರ್ಚೆ ಹುಟ್ಟಿಕೊಂಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣ ಎಲ್ಲಿಗೆ ಶಿಫ್ಟ್?‌

ಎಂ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಎಲ್ಲಿಗೆ ಸ್ಥಳಾಂತರಿಸಬೇಕು ಎಂಬ ಬಗ್ಗೆ ಯಾವುದೇ ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೂ, ಐಪಿಎಲ್ ಪಂದ್ಯಗಳಲ್ಲಿ ಆರ್‌ಸಿಬಿಯನ್ನು ಆಯೋಜಿಸುವ ಬೆಂಗಳೂರಿನ ಪ್ರಾಥಮಿಕ ಕ್ರಿಕೆಟ್ ಕ್ರೀಡಾಂಗಣದ ಸ್ಥಳಾಂತರಕ್ಕೆ ಹಲವಾರು ಸ್ಥಳಗಳ ಕುರಿತು ಚರ್ಚೆ ನಡೆಯುತ್ತಿದೆ.

1. ದೇವನಹಳ್ಳಿ-ವಿಮಾನ ನಿಲ್ದಾಣ ಕಾರಿಡಾರ್

ಈ ಪ್ರದೇಶವು ವಿಶಾಲವಾದ ಭೂ ಲಭ್ಯತೆಯನ್ನು ಹೊಂದಿದೆ. ವಿಸ್ತರಿಸುತ್ತಿರುವ ಎಕ್ಸ್‌ಪ್ರೆಸ್‌ವೇಗಳು, ಮೆಟ್ರೋ ಯೋಜನೆಗಳು ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉತ್ತಮ ಸಂಪರ್ಕ ಹೊಂದಿದೆ. ಇದು ನಗರ ಕೇಂದ್ರದಿಂದ ದೂರದಲ್ಲಿದೆ ಮತ್ತು ಹೆಚ್ಚಿನ ಪ್ರಮಾಣದ ಕಾರ್ಯಕ್ರಮಗಳಿಗೆ ಇದು ಕಾರ್ಯಸಾಧ್ಯವಾಗುವಂತೆ ಸಾರ್ವಜನಿಕ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಗಳು ವೇಗವಾಗಿ ಕಲ್ಪಿಸಬೇಕು.

2. ಯಲಹಂಕ-ಹೆಬ್ಬಾಳ ಉಪನಗರ

ಬೆಂಗಳೂರಿನ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಇದು ಒಂದಾಗಿದ್ದು, ಭವಿಷ್ಯದ ಮೆಟ್ರೋ ಸಂಪರ್ಕ ಮತ್ತು ವಸತಿ-ವಾಣಿಜ್ಯ ವಿಸ್ತರಣೆಯೊಂದಿಗೆ ಕಾರ್ಯತಂತ್ರದ ನಗರ ವಿಸ್ತರಣೆಯಾಗಿ ಅಭಿವೃದ್ಧಿ ಹೊಂದುತ್ತಿದೆ. ಇದರ ಹೊರತಾಗಿ ಪ್ರಮುಖ ಕಾರ್ಯಕ್ರಮಗಳ ಸಮಯದಲ್ಲಿ ಜನ ದಟ್ಟಣೆಯನ್ನು ಎದುರಿಸಬಹುದು.

3. ಮೈಸೂರು ರಸ್ತೆ / ನಾಯಂಡಹಳ್ಳಿ ವಲಯ

ಈ ಪ್ರದೇಶವು ಮೂಲಸೌಕರ್ಯ ಅಭಿವೃದ್ಧಿಗೆ ಸಾಮರ್ಥ್ಯವನ್ನು ಹೊಂದಿದೆ. ಹಲವಾರು ಯೋಜನೆಗಳು ನಡೆಯುತ್ತಿರುವ ಮತ್ತು ಪ್ರಧಾನ ರಸ್ತೆಗಳಿಗೆ ಪ್ರವೇಶವನ್ನು ಹೊಂದಿರುವ ಇದು, ಸರಿಯಾಗಿ ಯೋಜಿಸಿದರೆ ಸುಲಭವಾಗಿ ಜನ ದಪ್ಪಣೆಯನ್ನ ನಿಯಂತ್ರಿಸುವ ಪ್ರದೇಶವಾಗಿದೆ.

ಸೂಚನೆ: ಈ ಪ್ರದೇಶಗಳಲ್ಲಿ ಚಿನ್ನಸ್ವಾಮಿ ಮೈದಾನ ತಲೆಯತ್ತ ಬಹುದು ಎಂಬುದು ಊಹೆ ಆಗಿದೆ. ಅಲ್ಲದೆ ಈ ಮೈದಾನ ಬೇರೆ ಕಡೆಗಳಲ್ಲೂ ತಲೆ ಎತ್ತಬಹುದು. ಈ ಪ್ರದೇಶಗಳು ಮೈದಾನ ಸ್ಥಳಾಂತರದ ಅಧಿಕೃತ ತಾಣಗಳಾಗಿ ಭಾವಿಸಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+