RCB Fans: 'ಈ ಸಲ ಕಪ್ ನಮ್ದೇ' : ʻRCB ಫ್ಯಾನ್ಸ್ ಹಬ್ಬʼದ ದಿನವನ್ನಾಗಿ ಘೋಷಿಸಿ: ಸಿದ್ದರಾಮಯ್ಯಗೆ ವಿಶೇಷ ಪತ್ರ

ಬೆಂಗಳೂರು, ಮೇ 30: ಈ ಸಲ ಕಪ್ ನಮ್ದೆ . ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿಬಿ) ಅಭಿಮಾನಿಗಳು ಯಾವಾಗಲೂ ಒಂದು ಹೆಜ್ಜೆ ಮುಂದೆ. ಪ್ಲೇ ಆಫ್ನಲ್ಲಿ ಪಂಜಾಬ್ ವಿರುದ್ಧ ಆರ್ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಫೈನಲ್ ಪ್ರವೇಶಿಸಿದೆ. ಬರೋಬ್ಬರಿ 18 ವರ್ಷಗಳಿಂದ ಕಾಯ್ತಿರುವ ಆರ್ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಅಭಿಮಾನಿಗಳ ಕನಸು ಈ ಬಾರಿ ನನಸಾಗುವ ನಿರೀಕ್ಷೆ ಹೆಚ್ಚಿದೆ. ಈ ಸಲ ಕಪ್ ನಮ್ದೆ ಅಂತ ಆರ್ಸಿಬಿ ಫ್ಯಾನ್ಸ್ ಕೂಗಿ ಕೂಗಿ ಹೇಳ್ತಿದ್ದಾರೆ. ಇದರ ನಡುವೆಯೇ ಆರ್ಸಿಬಿ ಅಭಿಮಾನಿಯೊಬ್ಬ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ.

ಗೋಕಾಕ ಮೂಲದ ಯುವಕ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ರಾಜ್ಯೋತ್ಸವದ ರೀತಿಯಲ್ಲಿ ಆರ್‌ಸಿಬಿ ಫ್ಯಾನ್ಸ್ ಹಬ್ಬದ ರೀತಿಯಲ್ಲಿ ಆಚರಣೆಗೆ ಅವಕಾಶ ನೀಡಿ ಎಂದು ಪತ್ರದಲ್ಲಿ ವಿಶೇಷ ಮನವಿಯನ್ನ ಮಾಡಿದ್ದಾರೆ. ಆರ್‌ಸಿಬಿ ಕಪ್‌ ಗೆದ್ದರೆ ಆದ ದಿನವನ್ನ ʻಆರ್‌ಸಿಬಿ ಫ್ಯಾನ್ಸ್‌ ಹಬ್ಬʼದ (RCB Fans Festival) ದಿನನ್ನಾಗಿ ಘೋಷಿಸಿ. ಜೊತೆಗೆ ಒಂದು ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಇದೀಗ ಆ ಪತ್ರ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿದೆ.

RCB fan writes special letter to Chief Minister Siddaramaiah

ಪತ್ರದಲ್ಲಿ ಏನಿದೆ?

ಆರ್‌ಸಿಬಿ ಫೈನಲ್‌ ತಲಪುತ್ತಿದ್ದಂತೆ ಈ ಅಭಿಮಾನಿಯೊಬ್ಬ, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ವಿಶೇಷ ಮನವಿ ಮಾಡಿದ್ದಾರೆ. ಸದ್ಯ ಅಭಿಮಾನಿಯ ಮನವಿ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಆರ್‌ಸಿಬಿ ಗೆದ್ದ ದಿನ ರಜೆ ಘೋಷಣೆ ಮಾಡ್ಬೇಕು ಎಂದು ಪತ್ರದಲ್ಲಿ ಬರೆದಿದ್ದಾನೆ. ಎಲ್ಲರ ಮನೆಯಲ್ಲೂ ಸಂಭ್ರಮ ಮನೆ ಮಾಡಿರುತ್ತೆ. ಎಲ್ಲಾ ಕಡೆ ಸೆಲಬ್ರೇಷನ್​ ಮಾಡಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಅಭಿಮಾನಿ ಪತ್ರದಲ್ಲಿ ಬರೆದಿದ್ದಾರೆ.

ಇನ್ನೂ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡುವಂತೆಯೂ ಮನವಿ ಮಾಡಿದ್ದಾರೆ. ಕಪ್ ಗೆದ್ದ ಬಳಿಕ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿರುತ್ತೆ. ಪ್ರತೀ ಮನೆ ಮನೆಯಲ್ಲೂ ಹಬ್ಬದ ವಾತವರಣ ಇರುತ್ತೆ. ಜೂನ್ 3 ರಂದು ಕರ್ನಾಟಕ ರಾಜ್ಯ "RCB ಫ್ಯಾನ್ಸ್ ಹಬ್ಬ" ಎಂದು ಘೋಷಿಸಿ ಪ್ರತಿ ವರ್ಷ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡುವಂತೆಯೂ ಆರ್‌ ಸಿ ಬಿ ಅಭಿಮಾನಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+