ಬಿಯರ್ ದರ ಮತ್ತೆ ಹೆಚ್ಚಳ: ಅಬಕಾರಿ ಸಚಿವರು ಹೇಳಿದ್ದೇನು?
ಹುಬ್ಬಳ್ಳಿ, ಫೆಬ್ರವರಿ 03: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಮತ್ತೆ ಶಾಕ್ ನೀಡಿದೆ. ಪದೇ ಪದೇ ದರ ಏರಿಕೆ ಮಾಡಿ ಸರ್ಕಾರ ಮದ್ಯ ಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದ್ದು, ರಾಜ್ಯ ಸರ್ಕಾರ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿದೆ. ಅಬಕಾರಿ ಸುಂಕವನ್ನು ಶೇಕಡಾ 185 ರಿಂದ ಶೇಕಡಾ 195 ಕ್ಕೆ ಅಂದ್ರೆ ಶೇ 10 ರಷ್ಟು ಹೆಚ್ಚಿಸಿದೆ. ಇದರಿಂದಾಗಿ, ಬಿಯರ್ ಬಾಟಲ್ ಬೆಲೆ ಮತ್ತೆ ಹೆಚ್ಚಾಗಿದೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ ಮಾತನಾಡಿ, ಬಿಯರ್ ದರ ಮೇಲೆ ಶೇಕಡಾ 10 ರಷ್ಟು ಹೆಚ್ಚಳ ಮಾಡಲಾಗಿದೆ. ಇದೊಂದು ಮಾರುಕಟ್ಟೆ ವ್ಯವಸ್ಥೆ, ಯಾವ ಯಾವ ರಾಜ್ಯಗಳಲ್ಲಿ ಎಷ್ಟು ಇದೆ ಅಂತಾ ಗಮನಿಸಿ ಮಾಡಲಾಗಿದೆ. ಅಲ್ಲದೇ ಹೊಸ ಲೈಸನ್ಸ್ ಕೊಡಲ್ಲ ಎಂದು ಹೇಳಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ನೀಡುವ ವಿಚಾರದಲ್ಲಿ ಫೆ. 07 ರಂದು ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಾಗುವುದು. ರಾಜ್ಯಕ್ಕೆ ಕೇಂದ್ರ ಮಲತಾಯಿ ಧೋರಣೆ ತಾಳತಾ ಇದೆಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಸರಿಯಾಗಿ ಕೊಡತಾ ಇಲ್ಲನಮಗೆ ಬರಬೇಕಾದ ಪಾಲು ಸಹ ಕೊಡತಾ ಇಲ್ಲ ಈಗ ದೊಡ್ಡ ಬರಗಾಲ ಇದೆ.
ಬಿಜೆಪಿಯವರು ಕೇವಲ ಕೇಸರಿ ರಾಜಕಾರಣ ಮಾಡತಾ ಇದ್ದಾರೆ. ಅವರದು ಅದೇ ಧಂಧೆ ಆಗಿದೆ. ಧರ್ಮ ಜಾತಿ ಬಡೆದು ಧರ್ಮದ ಹೆಸರಿನ ಮೇಲೆ ದುಡ್ಡು ಕೇಳುವುದು, ಅಭಿವೃದ್ಧಿ ಇದುವರೆಗೆ ಮಾಡಿಲ್ಲ ಮಾಡುವುದು ಇಲ್ಲ ಅಸಮಾಧಾನ ವ್ಯಕ್ತಪಡಿಸಿದರು. ರೈತ, ಜನರು ಗೋಳಡತಾ ಇದ್ದಾರೆ. ಇಂತಹದರಲ್ಲಿ ರಾಜಕಾರಣ ಮಾಡುವುದು ಒಳ್ಳೆಯದಲ್ಲ ಎಂದ ಅವರು ಇದನ್ನು ಮಾಡತಾ ಇರುವುದು ಅವರ ಇಮೇಜ್ ಧಕ್ಕೆ ಬರತ್ತೇ, ಜನ ಆಯ್ಕೆ ಕಳುಹಿಸಿದ್ದು, ಅವರಿಗೆ ಸೋಲಾಗಿದೆ ಅದನ್ನು ಒಪ್ಪಿಕೊಳ್ಳಬೇಕು. ನಮ್ಮ ಪಾಲು ನಮಗೆ ಕೊಡುತ್ತಿಲ್ಲ. ಇದೊಂದು ದುರ್ದೈವ ಸಂಗತಿ ಧರಣೆ ಮಾಡುತ್ತಾ ಇದ್ದೇವೆ ಎಲ್ಲರೂ ಬರುತ್ತಾ ಇದ್ದಾರೆ ಎಂದರು.
ಇನ್ನು ಪ್ರತ್ಯೇಕ ರಾಷ್ಟ್ರದವಾಗುವ ಕುರಿತು ಸಂಸದ ಡಿ ಕೆ ಸುರೇಶ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾ ಸದಸ್ಯ ಡಿ.ಕೆ ಸುರೇಶ್ ಅನುದಾನ ಕುರಿತು ಮಾತ್ರ ಹೇಳಿದ್ದಾರೆ. ಪ್ರತ್ಯೇಕ ರಾಷ್ಟ್ರ ಅಂತಾ ಹೇಳಿದ್ದಾರೆ. ಜನರು ಅದನ್ನು ಗಮನಿಸುತ್ತಾ ಇದ್ದಾರೆ. ಇದು ಹೀಗೆ ಮುಂದುವರಿದರೆ ಜನರು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇರಬಹುದು. ಇದು ಅವರ ಮಾತಿನ ದಾಟಿ ಆಗಿದೆ.
ಪ್ರತ್ಯೇಕ ರಾಷ್ಟ್ರ ಬೇಕು ಅವರು ಎಲ್ಲಿ ಹೇಳಿಲ್ಲಅವರಿಗೆ ಪ್ರತ್ಯೇಕ ರಾಷ್ಟ್ರ ಮಾಡಬೇಕು ಅಂತಾ ತಲೆಯಲ್ಲಿ ಇಲ್ಲ. ಇನ್ನು ಕುರುಬ ಸಮಾಜ ಶತ ಈಶ್ವರಾನಂದ ಸ್ವಾಮೀಜಿ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ತಮ್ಮನ್ನೇ ಒಳಗೆ ಬಿಡಲಿಲ್ಲ ಎಂಬ ಅಸಮಾಧಾನ ವಿಚಾರವಾಗಿ ನನಗೆ ಏನು ಗೊತ್ತಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಹೇಳಿಕೆ ಗಮನಸಿಲ್ಲ. ಧಾರ್ಮಿಕ ವಿಚಾರ ಅದು ನಾನು ಹೆಚ್ಚು ಮಾತಾಡಲ್ಲ ಎಂದರು.












Click it and Unblock the Notifications