‘ಅಪ್ಪನ ಹಲ್ಕಾ ಗುಣವೇ ಮಗನಿಗೂ ಉತ್ತೇಜನ!’ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಹಿಂಗೆ ಹೇಳಿದ್ದು ಯಾರು?
ಪ್ರಜ್ವಲ್ ರೇವಣ್ಣ ಪ್ರಕರಣ ಕರ್ನಾಟಕದ ಮಾನ & ಮರ್ಯಾದಿ ಮಾತ್ರವಲ್ಲ, ಇದೀಗ ಜೆಡಿಎಸ್ ಪಕ್ಷದ ನಾಯಕರಿಗೂ ಮುಜುಗರ ಉಂಟು ಮಾಡುತ್ತಿದೆ. ಈ ಕಾರಣಕ್ಕೆ ಈಗ ಪ್ರಜ್ವಲ್ ರೇವಣ್ಣ ಜೆಡಿಎಸ್ ಪಕ್ಷದಿಂದಲೇ ಉಚ್ಛಾಟನೆ ಆಗಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಎಲ್ಲೆಲ್ಲೂ ಪ್ರಜ್ವಲ್ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಎದುರಾಳಿ ಪಕ್ಷಗಳಿಂದಲೂ ಡಿಸೈನ್ ಡಿಸೈನ್ ಪ್ರಶ್ನೆ ಕೇಳಿಬರುತ್ತಿವೆ. ಅದ್ರಲ್ಲೂ ಇಲ್ಲೊಬ್ಬರು ರಾಜಕೀಯ ಪಕ್ಷದ ನಾಯಕರಿಂದ 'ಅಪ್ಪನ ಹಲ್ಕಾ ಗುಣವೇ ಮಗನಿಗೂ ಉತ್ತೇಜನ!' ಎಂಬ ಹೇಳಿಕೆ ಹೊರಬಿದ್ದಿದೆ.
ಹೌದು, ಪ್ರಜ್ವಲ್ ರೇವಣ್ಣ ಪ್ರಕರಣ ಭಾರತದಲ್ಲಿ ಮಾತ್ರವಲ್ಲ ಹೊರ ದೇಶದಲ್ಲಿಯೂ ದೊಡ್ಡ ಸದ್ದು ಮಾಡುತ್ತಿದೆ. ಅಲ್ಲದೆ ಕನ್ನಡ ನಾಡಿನ ಮಾನ & ಮರ್ಯಾದಿ ಹರಾಜು ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಮಧ್ಯೆ 'ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ' ವರಿಷ್ಠ ರವಿ ಕೃಷ್ಣಾ ರೆಡ್ಡಿ, ಪ್ರಜ್ವಲ್ ರೇವಣ್ಣ & ಎಚ್.ಡಿ. ರೇವಣ್ಣ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಈಗ 'ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ' ವರಿಷ್ಠ ರವಿ ಕೃಷ್ಣಾ ರೆಡ್ಡಿ ಹೇಳಿದ್ದಾದರೂ ಏನು? ಮುಂದೆ ಓದಿ.

'ನೀಚರು, ಕೀಚಕರು, ನರಾಧಮರು?'
ಈ ಕುರಿತು ಸ್ಫೋಟಕ ಪೋಸ್ಟ್ ಒಂದನ್ನು ಹಾಕಿರುವ 'ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ' ವರಿಷ್ಠ ರವಿ ಕೃಷ್ಣಾ ರೆಡ್ಡಿ, 'ಇದು ನಿಜವೇ ಆಗಿದ್ದಲ್ಲಿ ಇವರು ಇನ್ನೆಂತಹ ಕಿರಾತಕರು, ನೀಚರು, ಕೀಚಕರು, ನರಾಧಮರು? ಅಪ್ಪನ ಹಲ್ಕಾ ಗುಣವೇ ಮಗನಿಗೂ ಉತ್ತೇಜನ! ಹೀಗೆ MLA/MPಗಳಿಂದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತರು ಧೈರ್ಯವಾಗಿ ಮುಂದೆ ಬಂದು ದೂರು ದಾಖಲಿಸಬೇಕಾದ ಸಂದರ್ಭ ಇದು. ವಿಶೇಷವಾಗಿ ಉದ್ಯೋಗ ಭದ್ರತೆ & ಆರ್ಥಿಕ ಭದ್ರತೆ ಇರುವ ಸರ್ಕಾರದ ಮಹಿಳಾ ಅಧಿಕಾರಿಗಳು ತಮಗೂ ಹೀಗೆ ಆಗಿದ್ದಲ್ಲಿ ಈ ಕೂಡಲೇ ಅವರು ದೂರು ನೀಡಲು ಮುಂದಾಗಬೇಕು.' ಅಂತ ಇದೀಗ ಆಗ್ರಹಿಸಿದ್ದಾರೆ.
ರೋಡ್ ರೋಡ್‌ನಲ್ಲಿ ಸಿಕ್ಕಿದ್ದ ಪೆನ್‌ಡ್ರೈವ್!
ಹಾಸನದಲ್ಲಿ ರೋಡ್ ರೋಡ್‌ನಲ್ಲಿ ಸಿಗುತ್ತಿರುವ ಪಾರ್ಕ್ & ಕ್ರೀಡಾಂಗಣಗಳಲ್ಲಿ ಚೆಲ್ಲಾಪಿಲ್ಲಿ ಆಗಿ ಬಿದ್ದಿದ್ದ ಪೆನ್‌ಡ್ರೈವ್ ಒಳಗೆ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿರುವ, ಖಾಸಗಿ ವಿಡಿಯೋ ಇವೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಆರೋಪಗಳು ದೊಡ್ಡದಾಗಿ ಕಾಡ್ಗಿಚ್ಚು ಹೊತ್ತಿಸಿವೆ. ಇದೇ ಸಮಯದಲ್ಲಿ ಸಿದ್ದರಾಮಯ್ಯ ಸರ್ಕಾರ ಕೂಡ ಈ ಘಟನೆ ಗಂಭೀರವಾಗಿ ಪರಿಗಣಿಸಿ ವಿಶೇಷ ತಂಡ ರಚನೆ ಮಾಡಿ ತನಿಖೆಗೆ ಆದೇಶ ನೀಡಿದೆ. ಮತ್ತೊಂದು ಕಡೆ ಈ ಆರೋಪದಲ್ಲಿ ಎದುರಾಳಿ ಪಕ್ಷಗಳ ನಾಯಕರು ಗಂಭೀರ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.












Click it and Unblock the Notifications