Ration card: ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಪ್ರಾರಂಭ, ಯಾವೆಲ್ಲ ದಾಖಲೆಗಳು ಬೇಕು ನೋಡಿ
ಕರ್ನಾಟಕದಲ್ಲಿ ಹೊಸ ರೇಷನ್ ಕಾರ್ಡ್‌ಗಾಗಿ ಜನ ಕಾಯುತ್ತಿದ್ದಾರೆ. ಇದೀಗ ಹೊಸ ರೇಷನ್ ಕಾರ್ಡ್‌ಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ ಬಂದಿದೆ. ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್‌ಗೆ ರಾಜ್ಯ ಸರ್ಕಾರವು ಇಷ್ಟರಲ್ಲೇ ಅರ್ಜಿ ಸಲ್ಲಿಸಲು ಹೇಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ BPL ಹಾಗೂ APL ರೇಷನ್ ಕಾರ್ಡ್ ಪಡೆದುಕೊಳ್ಳಲು ಏನ್ಮಾಡ್ಬೇಕು, ಬಿಪಿಎಲ್ ಹಾಗೂ ಎಪಿಎಲ್‌ಗೆ ಬೇಕಾಗುವ ದಾಖಲೆಗಳು ಹಾಗೂ ರೇಷನ್ ಕಾರ್ಡ್ ಬೇಕು ಅಂದ್ರೆ ಇರಬೇಕಾದ ಅರ್ಹತೆಗಳೇನು ಏನು ಎನ್ನುವ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ. ರೇಷನ್ ಕಾರ್ಡ್ ಮಾಹಿತಿ ನೋಡಿ...
ಕರ್ನಾಟಕದಲ್ಲಿ ಬಿಪಿಎಲ್ ಹಾಗೂ ಎಪಿಎಲ್ ರೇಷನ್ ಕಾರ್ಡ್‌ಗೆ ಬಹುಬೇಡಿಕೆ ಇದೆ. ಆದರೆ, ಇದಕ್ಕೆ ಯಾವಾಗ, ಎಲ್ಲಿ ಹಾಗೂ ಹೇಗೆ ಅರ್ಜಿ ಸಲ್ಲಿಸಬೇಕು. ಈ ಕಾರ್ಡ್‌ಗಳನ್ನು ಪಡೆದುಕೊಳ್ಳಬೇಕಾದರೆ, ಏನು ಅರ್ಹತೆ ಇರಬೇಕು ಎನ್ನುವ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲಗಳು ಇವೆ. ಆ ಗೊಂದಲಗಳಿಗೆ ಉತ್ತರ ಇಲ್ಲಿದೆ.

ರೇಷನ್ ಕಾರ್ಡ್ ಪಡೆಯಬೇಕಾದರೆ ಇರಬೇಕಾದ ಅರ್ಹತೆ ಏನು
ಹೊಸದಾಗಿ ಅಥವಾ ರೇಷನ್ ಕಾರ್ಡ್‌ಗೆ ಎಲ್ಲರೂ ಅರ್ಜಿ ಸಲ್ಲಿಸುವುದಕ್ಕೆ ಬರುವುದಿಲ್ಲ. ರೇಷನ್ ಕಾರ್ಡ್ ಬೇಕಾದರೆ, ಕೆಲವು ನಿರ್ದಿಷ್ಟ ನಿಯಮಗಳು ಇವೆ. ಹಾಗಾದರೆ ಯಾರೆಲ್ಲ ರೇಷನ್ ಕಾರ್ಡ್ ಪಡೆಯಬಹುದು ಎನ್ನುವುದರ ಮಾಹಿತಿ ಇಲ್ಲಿದೆ.
* ಹೊಸದಾಗಿ (ನವ ದಂಪತಿಗಳು) ಮದುವೆಯಾದವರು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು.
* ಕುಟುಂಬದಿಂದ ದೂರವಾಗಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿರುವವರು ಅರ್ಜಿ ಸಲ್ಲಿಸಬಹುದು.( ಆದರೆ ಈ ಸಂದರ್ಭದಲ್ಲಿ ಕಡ್ಡಾಯವಾಗಿ ಈ ಹಿಂದೆಯ ರೇಷನ್ ಕಾರ್ಡ್‌ನಲ್ಲಿ ಹೆಸರು ಇದ್ದರೆ ಅದನ್ನು ಮೊದಲು ತೆಗೆದು ಹಾಕಬೇಕು)
* ಇನ್ನು ಕುಟುಂಬದ ಆದಾಯದ (ವಾರ್ಷಿಕ) ಆಧಾರದ ಮೇಲೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ (APL/BPL) ಯಾವುದು ಕೊಡಬಹುದು ಎಂದು ನಿರ್ಧರಿಸಲಾಗುತ್ತದೆ.
ರೇಷನ್ ಕಾರ್ಡ್ (ಪಡಿತರ ಚೀಟಿಗೆ)ಗೆ ಬೇಕಾಗುವ ದಾಖಲೆಗಳು ಯಾವುವು ?
* ಆಧಾರ್ ಕಾರ್ಡ್ (Aadar Card)
* ಕಾಯಂ ನಿವಾಸದ ದಾಖಲೆ / ಪುರಾವೆ (Address Proof)
* ನಿಮ್ಮ ಮೊಬೈಲ್ ಸಂಖ್ಯೆ (Mobile No)
* ಡ್ರೈವಿಂಗ್ ಲೈಸೆನ್ಸ್ (Driving License)
* ಈಚೆಗೆ ತೆಗೆಯಲಾದ ಪಾಸ್ ಪೋರ್ಟ್ ಅಳತೆಯ ಫೋಟೋ (Photo)
* ಮತದಾರರ ಗುರುತಿನ ಚೀಟಿ (Voter ID Card)
* ಆದಾಯ ಪ್ರಮಾಣ ಪತ್ರ (Income certificate)
* ಮನೆಯ ಸದಸ್ಯರ ಬಗ್ಗೆ ನಿಖರ ಮಾಹಿತಿ
ರೇಷನ್ ಕಾರ್ಡ್‌ಗೆ ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ ?
ಇನ್ನು ಆನ್‌ಲೈನ್‌ನ ಮೂಲಕವೂ ನೀವು ಅತ್ಯಂತ ಸುಲಭವಾಗಿ ನೀವು ಅರ್ಜಿ ಸಲ್ಲಿಸಬಹುದಾಗಿದೆ.
ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಸರಳ ವಿಧಾನ ಇಲ್ಲಿದೆ.
* ಮೊದಲು https://ahara.kar.nic.in/home ಲಾಗಿನ್ (Login) ಆಗಿ
* ಹೊಸ ಸೇರ್ಪಡೆಗೆ ವಿನಂತಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ಹೊಸ ಪೇಜ್‌ನಲ್ಲಿ ಫಾರ್ಮ್‌ನಲ್ಲಿ ಕೇಳುವ ಮಾಹಿತಿಗಳನ್ನು ತುಂಬಿಸಿ, ಆ ಮೇಲೆ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ. ಅದರ ಪ್ರತಿಯನ್ನು ಅಪ್ ಲೋಡ್ ಮಾಡಿ.
* ಅಪ್ ಲೋಡ್ ಮಾಡಿದ ಮೇಲೆ ಫಾರ್ಮ್ ಸಬ್ ಮಿಟ್ ಮೇಲೆ ಕ್ಲಿಕ್ ಮಾಡಿ.
* ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡಿರುವಂತಹ ಎಲ್ಲಾ ರೀತಿಯ ದಾಖಲೆಗಳು ಸಮರ್ಪಕವಾಗಿದ್ದರೆ, ನಿಮ್ಮ ಮನೆಗೆ ಹೊಸ ಪಡಿತರ ಚೀಟಿ (New Ration Card Request) ಬರಲಿದೆ.
ಕರ್ನಾಟಕ ಪಡಿತರ ಚೀಟಿಗಾಗಿ ಸಹಾಯವಾಣಿ ಸಂಖ್ಯೆ (ಟೋಲ್ ಫ್ರೀ)
ಇನ್ನು ರೇಷನ್ ಕಾರ್ಡ್‌ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಅಥವಾ ಗೊಂದಲಗಳು ಇದ್ದರೆ. ನೀವು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪಡಿತರ ಚೀಟಿ (ರೇಷನ್ ಕಾರ್ಡ್) ಇಲಾಖೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಕರ್ನಾಟಕ ರೇಷನ್ ಕಾರ್ಡ್ ಸಹಾಯವಾಣಿ ಸಂಖ್ಯೆ ಟೋಲ್ ಫ್ರೀ: 18004259339 ಮತ್ತು ಸಹಾಯವಾಣಿ ಸಂಖ್ಯೆ: 1967ಕ್ಕೆ ಕರೆ ಮಾಡಬಹುದಾಗಿದೆ.











Click it and Unblock the Notifications